ಸುದ್ದಿ ಸಂಗ್ರಹ ಕಾರವಾರ
ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾಳ ನೌಟಂಕಿ ಆಟ ಒಂದೊಂದೆ ಬಟಾಬಯಲಾಗುತ್ತಿದೆ. ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿ-ಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು. ಆತನೊಂದಿಗಿರುವ ಖಾಸಗಿ ಕ್ಷಣದ ಫೋಟೋ ಲಭ್ಯವಾಗಿವೆ.
ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್‌ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು. ಸುಚಿತ್ರಾ ಹಣದ ದಾಹಕ್ಕೆ ಕಾರ್, ಬೈಕ್‌ಗಳನ್ನ ಉಡುಗೊರೆಯಾಗಿ ಕಮಲಾಕರ್ ಭಟ್ ನೀಡಿದ್ದ.
ಪತ್ನಿಯ ಲಿವ್-ಇನ್ ರಿಲೇಷನ್‌ಗೆ ಬೇಸತ್ತು ಪತಿ ಮಹೇಶ್ ನಾಯ್ಕ ಜಗಳವಾಡಿದ್ದ. ಕೊನೆಗೆ ಆರು ತಿಂಗಳಿಂದ ಪತ್ನಿಯಿಂದ ದೂರವಿದ್ದ. ಸುಚಿತ್ರಾ-ಶರಣಬಸಪ್ಪ ಸೇರಿದಂತೆ ಹಲವರ ಸಂಬಂಧದ ಬಗ್ಗೆ ಆಕೆಯ ಪತಿ ಮಹೇಶ್ ನಾಯ್ಕ ಮಾಹಿತಿ ನೀಡಿದ್ದಾರೆ.