Uncategorized

ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ವಿಶ್ವನಾಥ…..ಸುದ್ದಿ ಸಂಗ್ರಹ ಶಹಾಬಾದ
ಸಮಾಜಕ್ಕೆ ಹಾನಿಕಾರಕ ವಿಷಯದ ಬದಲು ಉಪಯುಕ್ತ ಉತ್ತಮ ಮೌಲ್ಯಗಳು, ವಿಶೇಷತೆ ಹಾಗೂ ಮಹತ್ವವನ್ನು ನಾಡಿನ ಜನತೆಗೆ ಸಾರುವ ನಿಟ್ಟಿನಲ್ಲಿ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಬರಹಗಾರರು ಹಾಗೂ ಶಿಕ್ಷಣ ತಜ್ಞ ಕೆ.ಎಂ ವಿಶ್ವನಾಥ ಮರತೂರು ಅಭಿಪ್ರಾಯ ವ್ಯಕ್ತಪಡಿಸಿದರು……ನಗರದ ಜಗದಂಬಾ ದೇವಸ್ಥಾನದ ಆವರಣದಲ್ಲಿ ಶನಿವಾರ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ಯಾದಗಿರಿ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ, ಕವಿಗೋಷ್ಠಿ ಮತ್ತು ಗಿರಿಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು…….ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಕಲ್ಲುಗಣಿ ಪ್ರದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ದೊರಕದೆ ಈ ಭಾಗದ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ಪ್ರದೇಶದ ಜನರಿಗಾಗಿ ಜಾಗೃತಿ ಮೂಡಿಸುವ ಕೆಲಸ ಈ ಸಂಸ್ಥೆ ಶ್ರಮಿಸುತ್ತಿರುವುದು ನಿಜಕ್ಕೂ ಸಂತೋಷದಾಯಕ ವಿಷಯವಾಗಿದೆ ಎಂದರು…..ಗಿರಿಸಿರಿ ಸಂಸ್ಥೆಯ ಅಧ್ಯಕ್ಷ ಮರಲಿಂಗ ಯಾದಗಿರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದುಬಂದ ದಾರಿ ಬಗ್ಗೆ ವಿವರಿಸಿದರು……ಪಿಐ ನಟರಾಜ ಲಾಡೆ ಮತ್ತು ದಸಂಸ ರಾಜ್ಯ ಸಂಚಾಲಕ ಸುರೇಶ ಮೇಂಗನ ಮಾತನಾಡಿದರು…….ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗಿರಿಸಿರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು‌. ವಿಶೇಷ ಆಹ್ವಾನಿತರಿಗೆ ಹಾಗೂ ಕವನ ವಾಚನ ಮಾಡಿದವರಿಗೆ ಸನ್ಮಾನಿಸಲಾಯಿತು……ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಲಕರ್ಟಿಯ ಸಿದ್ದೇಶ್ವರ ಮಠದ ರಾಜಶೇಖರ್ ಶಿವಾಚಾರ್ಯರು ವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆ ಪತ್ರಕರ್ತ ಲೋಹಿತ್ ಕಟ್ಟಿ ವಹಿಸಿದ್ದರು……ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಅಶೋಕ ಜಿ ಯಾದಗಿರಿ, ಪತ್ರಕರ್ತ ಕೆ ರಮೇಶ್ ಭಟ್, ಪ್ರಮುಖರಾದ ನಿಂಗಣ್ಣ ಹುಳುಗೋಳ್ಕರ್, ಬಾಲರಾಜ ಮಾಚನೂರ್, ಶರಣು ಬಗಲಾಪುರ್, ಶರಣಬಸಪ್ಪ ಕೋಬಾಳ, ಪರಶುರಾಮ ಛಲವಾದಿ, ಬಸವರಾಜ ನೈಕೋಡಿ, ರಾಜು ಜಂಬಗಿ, ಭರತ್ ದನ್ನಾ, ಶಿವಲಿಂಗಪ್ಪ ಹೆಬ್ಬಾಳ್, ಶಂಕರ ಜಾನಾ, ಭಿಮಯ್ಯಾ ಗುತ್ತೆದಾರ ಭಂಕೂರು, ಕಾಶಣ್ಣಾ ಚನ್ನೂರು ಸೇರಿದಂತೆ ಅನೇಕರು ಇದ್ದರು……ಕಾರ್ಯಕ್ರಮವನ್ನು ಗಿರಿಮಲ್ಲಪ್ಪ ವಳಸಂಗ ನಿರೂಪಿಸಿದರು, ದುರ್ಗಪ್ಪ ಪೂಜಾರಿ ಸ್ವಾಗತಿಸಿದರು, ಅನೀಲಕುಮಾರ ಮೈನಾಳಕರ್ ವಂದಿಸಿದರು……ಕಾರ್ಯಕ್ರಮದ ನಂತರ ವಿವಿಧ ಶಾಲಾ, ಕಾಲೇಜು ಮಕ್ಕಳು ನೃತ್ಯವನ್ನು ಪ್ರದರ್ಶಿಸಿದರು ಮತ್ತು ವಿಶ್ವರಾಧ್ಯ ಮೆಲೋಡಿಸ್ ಅವರಿಂದ ಸುಮಧುರ ಗೀತೆ ಹಾಡಿದರು.

Leave a Reply

Your email address will not be published. Required fields are marked *