ಬೆಂಗಳೂರು: ದೇಶದ ಪ್ರಮುಖ ಬ್ಯಾಂಕ್‌ಗಳ ಪೈಕಿ ಕರ್ನಾಟಕ ಬ್ಯಾಂಕ್ ಕೂಡ ಒಂದು. ಮಂಗಳೂರು ಮೂಲದ ಈ ಬ್ಯಾಂಕ್ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಸರಿಸುಮಾರು 1,000 ಬ್ರಾಂಚ್ ಹೊಂದಿರುವ ಕರ್ನಾಟಕ ಬ್ಯಾಂಕ್ ಪ್ರತಿ ಟ್ರಾನ್ಸಾತ್ರನ್, ವ್ಯವಹಾರ ಅತೀವ ಎಚ್ಚರಿಕೆಯಿಂದ ಮಾಡುತ್ತದೆ.
ಎರಡೆರಡು ಬಾರಿ ಕ್ರಾಸ್ ಚೆಕ್ ಮಾಡಲಾಗುತ್ತದೆ. ಆದರೆ ಸಿಬ್ಬಂದಿಯ ಕಣ್ತಪ್ಪಿನಿಂದ ಕರ್ನಾಟಕ ಬ್ಯಾಂಕ್ ಎಲ್ಲಾ ಠೇವಣಿ, ಮೊತ್ತ ಖಾಲಿ ಖಾಲಿಯಾದ ಘಟನೆ ನಡೆದಿದೆ. ಬರೋಬ್ಬರಿ 1 ಲಕ್ಷ ಕೋಟಿ ರೂ ಮೊತ್ತವನ್ನು ಅಚಾತುರ್ಯದಿಂದ ಬೇರೊಂದು ಖಾತೆಗೆ ವರ್ಗಾವಣೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಕರ್ನಾಟಕ ಬ್ಯಾಂಕ್ ಸಿಬ್ಬಂದಿಯ ಫ್ಯಾಟ್ ಫಿಂಗರ್ ಎರರ್
ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದ ಆದ ಎಡವಟ್ಟಿಗೆ ಬ್ಯಾಂಕ್ ಬುಡ ಅಲುಗಾಡುವಂತೆ ಆಗಿತ್ತು. ಬ್ಯಾಂಕ್ ಸಿಬ್ಬಂದಿ ಮಾಡಿದ ಒಂದು ತಪ್ಪಿನಿಂದ ಕರ್ನಾಟಕ ಬ್ಯಾಂಕ್‌ನಲ್ಲಿ ವಿವಿದ ಗ್ರಾಹಕರು ಠೇವಣಿ, ಇತರ ರೂಪದಲ್ಲಿ ಇಟ್ಟಿದ್ದ ಒಟ್ಟು ಮೊತ್ತದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂ ಹಣ ಇತರ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಆಗಿದೆ ಎಂದು ಮನಿ ಕಂಟ್ರೋಲ್ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ. ಇದು ಒಂದೆ ಟ್ರಾನ್ಸಾಕ್ಷನ್‌ನಲ್ಲಿ ಇಷ್ಟು ಮೊತ್ತ ವರ್ಗಾವಣೆ ಮಾಡಲಾಗಿದೆ. ಇದನ್ನು ಬ್ಯಾಂಕ್ ಭಾಷೆಯಲ್ಲಿ ಫ್ಯಾಟ್ ಫಿಂಗರ್ ಎರರ್ ಅಥವಾ ಕಣ್ತಪ್ಪಿನಿಂದ ಆದ ಅಚಾತುರ್ಯ ಎಂದು ಕರೆಯಲಾಗುತ್ತದೆ.
1,00,000 ಕೋಟಿ ರೂ, ಆರ್‌ಬಿಐ ಗರಂ
1,00,000 ಕೋಟಿ ರೂ ಮೊತ್ತವನ್ನು ನಿಷ್ಕ್ರೀಯ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಬಚಾವ್ ಆಗಿದ್ದಾರೆ. ಕಾರಣ ಖಾತೆ ನಿಷ್ಕ್ರೀಯವಾಗಿದ್ದ ಕಾರಣ ಈ ಹಣ ಯಾವುದೆ ರೀತಿಯಲ್ಲಿ ಬಳಕೆಯಾಗಿಲ್ಲ. ಆದರೆ ಬರೋಬ್ಬರಿ 3 ಗಂಟೆಗಳ ಬಳಿಕ ಈ ಹಣ ವಾಪಸ್ ಪಡೆಯಲಾಗಿದೆ. ಈ ಘಟನೆ ನಡೆದಿರುವುದು ಆಗಸ್ಟ್ 8, 2023ರಂದು ಸಂಜೆ 5.17ಕ್ಕೆ ಹಣ ವರ್ಗಾವಣೆ ಮಾಡಲಾಗಿತ್ತು. ಹರಸಾಹಸ ಮಾಡಿದ ಸಿಬ್ಬಂದಿ 20.09ಕ್ಕೆ ಹಣ ಮರಳಿ ಪಡೆಯಲಾಗಿದೆ.
ಹಣ ಕಣ್ತಪ್ಪಿನಿಂದ ಆಗಿದೆಯೋ ಅಥವಾ ಇನ್ಯಾವುದೆ ಉದ್ದೇಶದಿಂದ ಆಗಿದೆಯೋ ಎಂದು ಆರ್‌ಬಿಐ ಗರಂ ಆಗಿದೆ. 2023ರಲ್ಲಿ ಈ ಹಣ ವರ್ಗಾವಣೆ ಆಗಿದೆ. ಆದರೆ ಕರ್ನಾಟಕ ಬ್ಯಾಂಕ್ ರಿಸ್ಕ್ ಮ್ಯಾನೇಜ್ಮೆಂಟ್ ತಂಡ ಮಾರ್ಚ್ 11, 2024ರಲ್ಲಿ ಈ ಕುರಿತ ವಿವರವಾದ ವರದಿ ನೀಡುವಂತೆ ಸೂಚಿಸಿತ್ತು. ಐಟಿ ವಿಭಾಗ ಮಾರ್ಚ್ 15, 2024ರಲ್ಲಿ ವಿವರವಾದ ವರದಿ ಸಲ್ಲಿಕೆ ಮಾಡಿತ್ತು. ಇನ್ನು ಮಾರ್ಚ್ 28 ರಂದು ಪಿಪಿಟಿ ಪ್ರಸೆಂಟೇಶನ್ ಮಾಡಿ ವಿವರಣೆ ನೀಡಿತ್ತು. ಆದರೆ ಕಣ್ತಪ್ಪಿನಿಂದ ಆಗಿರುವ ತಪ್ಪು ವಿಳಂಬವಾಗಿ ಸರಿ ಮಾಡಿರುವುದು ಹಾಗೂ ಆಡಿಟ್ ವರದಿಯಲ್ಲಿ ವಿಳಂಬವಾಗಿ ಉಲ್ಲೇಖಿಸಿರುವುದಕ್ಕೆ ಆರ್‌ಬಿಐ ಗರಂ ಆಗಿತ್ತು.