ಶಹಾಬಾದ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿ ಆಚರಣೆ
ಸುದ್ದಿ ಸಂಗ್ರಹ ಶಹಾಬಾದ
ಕನಕದಾಸ ವೃತ್ತದಲ್ಲಿ ಕನಕದಾಸರ ಪ್ರತಿಮೆಯನ್ನು ನಿರ್ಮಾಣ ಮಾಡಿ ಹಲವು ವರ್ಷಗಳು ಕಳೆದರೂ ಇನ್ನೂ ಉದ್ಘಾಟನೆ ಮಾಡದೆ ನಿರ್ಲಕ್ಷ ಮಾಡಿರುವುದು ಸರಿಯಲ್ಲ, ಕೂಡಲೇ ಪ್ರತಿಮೆಯನ್ನು ಲೋಕಾರ್ಪಣೆ ಮಾಡಬೇಕೆಂದು ಜಯಂತಿಯ ಆಚರಣೆಯ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿರುವ ತಾಲ್ಲೂಕ ನಗರಸಭೆ ಮತ್ತು ಅಧಿಕಾರಿಗಳಿಗೆ ಕುರುಬ ಸಮಾಜದ ತಾಲ್ಲೂಕ ಅಧ್ಯಕ್ಷ ನಿಂಗಣ್ಣ ಪೂಜಾರಿ ಮನವಿ ಮಾಡಿದರು.
ನಗರದ ಕನಕದಾಸ ವೃತ್ತದಲ್ಲಿ ಶನಿವಾರ ಕುರುಬ ಸಮಾಜದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ 538ನೇ ಜನ್ಮದಿನಯನ್ನು ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಕೋಮರಮ್ ಭೀಮಗೊಂಡ ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿ ಕನಕದಾಸರ ವಿಚಾರ ಆದರ್ಶವನ್ನು ಜನತೆಗೆ ಮುಟ್ಟಿಸುವ ಕೆಲಸ ನಡೆಯಬೇಕು ಎಂದರು .ಕುರುಬ ಸಮಾಜದ ಮುಖಂಡ ಸಾಬಣ್ಣ ಕೊಲ್ಲೂರು ಮಾತನಾಡಿದರು.
ತಾಲ್ಲೂಕ ಆಡಳಿತದ ವತಿಯಿಂದ ತಾಲ್ಲೂಕ ದಂಡಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ನಗರಸಭೆ ಕಛೇರಿಯದಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ, ಉಪ ತಹಶೀಲ್ದಾರ್ ಅಣವೀರಪ್ಪ, ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಪೌರಾಯುಕ್ತ ಕೆ ಗುರುಲಿಂಗಪ್ಪ, ಕುರುಬ ಸಮಾಜದ ಮುಖಂಡರಾದ ಮಲ್ಕಪ್ಪ ಮುದ್ದ, ಸೂರ್ಯಕಾಂತ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.