ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಮುಖಂಡರು ಕನಕದಾಸರ ಭಾವಚಿತ್ರಕ್ಕೆ ಭಕ್ತಿ ನಮನ ಸಲ್ಲಿಸಿ ಆಚರಿಸಿದರು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಕನಕದಾಸರು ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು ಎಂದರು.
ಜಾತಿ, ಮತ, ಧರ್ಮ ಭೇದಭಾವ ವಿರೋಧಿಸಿ ಮನುಷ್ಯ ಜಾತಿಯೊಂದೆ ಎಂದು ಸಾರಿದರು. ಶ್ರೀ ಹರಿಯ ವಿವಿಧ ಅವತಾರಗಳನ್ನು ತಮ್ಮ ಕೀರ್ತನೆಗಳಲ್ಲಿ ಹಾಡಿ ಹೊಗಳಿದ್ದಾರೆ. ಮೂಢನಂಬಿಕೆಗಳನ್ನು ಬಲವಾಗಿ ಖಂಡಿಸುತ್ತಿದ್ದರು. ಹರಿಭಕ್ತಿ ಸಾರ ಎಂಬ ಕೃತಿಯನ್ನು ಬರೆದ ಕನಕದಾಸರು, ತನ್ನದೆ ಶೈಲಿಯಲ್ಲಿ ‘ಕಾಗಿನೆಲೆಯ ಆದಿಕೇಶವ’ ಅಂಕಿತವಾಗಿರಿಸಿ ತನ್ನ ಭಕ್ತಿ ಗೀತೆಗಳನ್ನು, ದಾಸರಪದಗಳನ್ನು ರಚಿಸಿದರು. ಯುದ್ಧ, ದೊಂಬಿ, ಆಸ್ತಿ, ಅಂತಸ್ತು ಎಲ್ಲವನ್ನೂ ತ್ಯಜಿಸಿ ದಾಸಶ್ರೇಷ್ಠರಾಗಿ ಹಲವಾರು ಅನುಯಾಯಿಗಳಿಗೆ ದಾಸದೀಕ್ಷೆ ನೀಡಿದರು. ತನಗೆ ಅಶರೀರವಾಣಿಯಂತೆ ತಾನು ದಾಸನಾಗಿರುವೆ, ಯಾವ ಮೋಹ, ಸಂಸಾರ ಬಂಧನ ಬೇಡವೆಂದವರು. ಕಾಗಿನೆಲೆಯಲ್ಲಿ ಆದಿಕೇಶವನ ಮಂದಿರವನ್ನು ಕಟ್ಟಿಸಿದವರು. ವಿಜಯನಗರ ಸಾಮ್ರಾಜ್ಯದ ಅಧೀನರಾಗಿದ್ದ ಹೋಬಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಿಕ್ಕಿದ ನಿಧಿಯನ್ನು ಮಂದಿರ ನಿರ್ಮಾಣಕ್ಕೆ ಬಳಸಿದರು. ಇವರ ರಚನೆಗಳು ಹರಿಭಕ್ತಿ ಸಾರ ಮೊದಲಕೃತಿ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ ಕಾವ್ಯಗಳನ್ನು, ಸಾವಿರಾರು ಕೀರ್ತನೆಗಳನ್ನು ರಚಿಸಿದ್ದಾರೆ. ತಮ್ಮ ಎಲ್ಲಾ ರಚನೆಗಳಲ್ಲೂ ಆಧ್ಯಾತ್ಮಿಕ ಸಂದೇಶವನ್ನು ಜನಸಾಮಾನ್ಯನಿಗೆ ಮನಮುಟ್ಟುವಂತೆ ಬಿಂಬಿಸಿ,ಭಕ್ತಿಯ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಪರಮಾತ್ಮ ಪ್ರಾತಿ ಖಚಿತ ವೆಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜೀರೊಳ್ಳಿ, ಹರಿ ಗಲಾಂಡೆ, ಶರಣಗೌಡ ಚಾಮನೂರ, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ,ಪ್ರಕಾಶ ಪುಜಾರಿ, ಕಿಶನ ಜಾಧವ, ಅಂಬದಾಸ ಜಾಧವ, ಸುಭಾಷ ರದ್ದೆವಾಡಿ ಚಾಮನೂರ,
ಮಹೇಂದ್ರ ಕುಮಾರ ಪುಜಾರಿ,ಮಲ್ಲಿಕಾರ್ಜುನ ಸಾತಖೇಡ, ರವಿ ಚವ್ಹಾಣ, ಸೂರಜ್ ರಾಠೊಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಅನೇಕರು ಇದ್ದರು.