ವಾಡಿ: ಪಂಡಿತ ದೀನ್‍ದಯಾಳ್’ರ 109ನೇ ಜಯಂತಿ ಆಚರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನ್‍ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪಂಡಿತ ದೀನ್‍ದಯಾಳ್ ಉಪಾಧ್ಯಾಯರು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದರು, ಅವರು ಕಾಲವಾದ ನಂತರ ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬೃಹತ್ ಬಿಜೆಪಿ ಉದಯಕ್ಕೆ ಕಾರಣವಾಯಿತು ಎಂದರು.

ಅವರ ಮಾನವತಾವಾದ ನಮ್ಮ ಪಕ್ಷಕ್ಕೆ ಒಂದು ಸೈದ್ಧಾಂತಿಕ ವೈಚಾರಿಕತೆ ಕೊಟ್ಟಿತು. ಸಮಾಜದ ಅಭಿವೃದ್ಧಿ ಅತ್ಯಂತ ಕೆಳಹಂತ ತುಳಿತಕ್ಕೊಳಗಾದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲಕ್ಕೆತ್ತುವುದರ ಮೂಲಕ ಇಡಿ ದೇಶದ ಸಮುದಾಯ, ಸಮಾಜವನ್ನು ಉದ್ದಾರ ಮಾಡಿ ದೇಶಕ್ಕೆ ಭದ್ರ ಬುನಾದಿ ಹಾಕಬೇಕು ಎಂಬ ಮಹಾದಾಸೆ ಅವರದಾಗಿತ್ತು.ಅವರ ಆಶಯಕ್ಕೆ ಪೂರಕವಾಗಿ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಿ ಅವರಿಗೆ ಇಂದು ಗೌರವ ಸಲ್ಲಿಸುತ್ತಿದ್ದೆವೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಕಾಂಗ್ರೆಸ್’ಗೆ ಪ್ರತಿರೋಧವಾಗಿರುವ ಸಿದ್ದಾಂತವನ್ನು ಸರ್ವರ ಒಳಿತಿಗಾಗಿ ದೀನ್‍ದಯಾಳ್ ಉಪಾಧ್ಯಾಯ ಕೊಟ್ಟಿದ್ದಾರೆ ಎಂದರು.

ಅವರು ಆಕಸ್ಮಿಕವಾಗಿ ನಿಧನ ಹೊಂದಿರುವುದು ಅಗೋಚರವಾಗಿರುತ್ತದೆ. ಆದಾಗ್ಯೂ ಕೂಡ ಅವರು ತಮ್ಮ ವಿಚಾರ ಹಾಗೂ ಸಿದ್ದಾಂತದಲ್ಲಿ ನಮ್ಮ ಮಧ್ಯ ಇದ್ದಾರೆ. ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವ ಜನಾಂಗದ ಅಭಿವೃದ್ದಿಗಾಗಿ 25 ಕೋಟಿ ಜನರು ಬಡತನದಿಂದ ಮೇಲೆತ್ತುವ ಮೂಲಕ ದೀನ್‍ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ವಿಠಲ ನಾಯಕ, ಶರಣಗೌಡ ಚಾಮನೂರ, ಕಿಶನ್ ಜಾಧವ್, ಶಿವಶಂಕರ ಕಾಶೆಟ್ಟಿ, ಅಂಬದಾಸ ಜಾಧವ್, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಮಲ್ಲಿಕಾರ್ಜುನ ಸಾತಖೇಡ, ಗುಂಡುಗೌಡ ಪಾಟೀಲ ಚಾಮನೂರ, ರಮೇಶ ರಾಠೋಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *