ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ, ವಿಶ್ವಕರ್ಮ ಸಮಾಜದ ಮುಖಂಡ ಬಸವರಾಜ ಪಂಚಾಳ ಮಾತನಾಡಿ, ವಿಶ್ವಕರ್ಮ ಜಯಂತಿಯು ದೈವಿಕ ವಾಸ್ತುಶಿಲ್ಪಿಯ ಜನ್ಮವನ್ನು ಆಚರಿಸುವ ದಿನ ಮಾತ್ರವಲ್ಲ, ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕೊಡುಗೆ ಗುರುತಿಸುವ ಸಂದರ್ಭವಾಗಿದೆ ಎಂದರು.
ಜಗತ್ತನ್ನು ನಿರ್ಮಿಸಲು ಮತ್ತು ರೂಪಿಸಲು ತಮ್ಮ ಕೈಗಳಿಂದ ಕೆಲಸ ಮಾಡುವವರ ಕೌಶಲ್ಯ, ಸಮರ್ಪಣೆ ಮತ್ತು ಸೃಜನಶೀಲತೆಯನ್ನು ಶ್ಲಾಘಿಸುವ ದಿನವಿದು. ಈ ಹಬ್ಬವು ನಮ್ಮ ಸಮಾಜದಲ್ಲಿ ಕರಕುಶಲತೆಯ ಮಹತ್ವ ಮತ್ತು ಶ್ರಮದ ಮೌಲ್ಯವನ್ನು ಒತ್ತಿಹೇಳುತ್ತದೆ ಎಂದರು.
ಬುದ್ಧಿವಂತಿಕೆ, ದೂರದೃಷ್ಟಿ ಹಾಗೂ ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾಗಿ ದೇಶ ಸೇವೆಯಲ್ಲಿ ತೋಡಗಿದ್ದ ಸಮಾಜವಾಗಿದೆ ಎಂದರು.
ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶ ಜಿರೋಳ್ಳಿ ಮತ್ತು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜಿರೋಳ್ಳಿ, ಅರ್ಜುನ ಕಾಳೆಕರ, ಶಿವಶಂಕರ ಕಾಶೆಟ್ಟಿ, ಜಯದೇವ ಜೋಗಿಕಲಮಠ, ಪ್ರಕಾಶ ಪುಜಾರಿ, ಕಿಶನ್ ಜಾಧವ್, ಭೀಮರಾಯ ಸುಬೇದಾರ, ಮಲ್ಲಿಕಾರ್ಜುನ ಸಾತಖೇಡ, ಅಯ್ಯಣ್ಣ ದಂಡೋತಿ, ಬಿಕೆ ಕಾಳಪ್ಪ, ಅಶೋಕ ಪಂಚಾಳ, ಕುಮಾರ ದಾಸ, ದೇವೀಂದ್ರ ಬಡಿಗೇರ, ಕಾಳಪ್ಪ ಸೂಲ್ಹಳ್ಳಿ, ದತ್ತಾ ಖೈರೆ, ರವಿ ಜಾಧವ ಸೇರಿದಂತೆ ಅನೇಕರು ಇದ್ದರು.