ಭೂಮಿ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ
ರಾಯಚೋಟಿ ವೀರಭದ್ರೇಶ್ವರ ಆಶ್ರಮ ಹಾಗೂ ಭದ್ರಕಾಳಿ ದೇವಸ್ಥಾನದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ ನೆರವೇರಿಸಿದರು ಮತ್ತು 501 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಎಂದು ಶ್ರೀ ಮಠದ ಪೂಜ್ಯ ಶಂಕ್ರಯ್ಯ ಸ್ವಾಮಿ ಹೇಳಿದರು. 

ನಗರದಲ್ಲಿ ಸೋಮುವಾರ ರಾಯಚೋಟಿ ವೀರಭದ್ರೇಶ್ವರ ಆಶ್ರಮದ ನೂತನ ಕಟ್ಟಡದ ಶಂಕು ಸ್ಥಾಪನೆ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಮಠಕ್ಕೆ ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ, ಆಗಮಿಸಿದ ಭಕ್ತರಿಗೆ ನಿರಂತರ ದಾಸೋಹ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಆಶ್ರಮವನ್ನು ಇನ್ನು ಎತ್ತರಕ್ಕೆ ಬೆಳೆಯಲು ಭಕ್ತರು ನಿಸ್ವಾರ್ಥ ಸೇವೆ ಸಲ್ಲಿಸಿ ಮಠಕ್ಕೆ ದುಡಿಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮೃತ್ಯುಂಜಯ ಸ್ವಾಮಿ ಹಿರೇಮಠ್, ಮೋನಪ್ಪ ತೆಲಗವಾಳ್, ಶರಣಯ್ಯ ಸ್ವಾಮಿ ಮಠಪತಿ, ಬಸಯ್ಯ ಸ್ವಾಮಿ ರಾಹುಲ್, ಭೀಮಾಶಂಕರ್ ಕುಂಬಾರ್, ಶರಣು ವಸ್ತ್ರದ, ಶಿವಾನಂದ ಪಾಟೀಲ, ಮಹಾಲಿಂಗ ತುಪ್ಪದಮಠ, ಬಸವರಾಜ ಹುಗ್ಗಿ, ಸುರೇಶ, ಮಲ್ಲಿಕಾರ್ಜುನ ದೇವಪುರ್, ದೇವೇಂದ್ರಪ್ಪ ಅಂಗಡಿ, ನಾಗಯ್ಯ ಸ್ವಾಮಿ ಸೇರಿದಂತೆ ಅನೇಕ ಭಕ್ತರು ಮಹಿಳೆಯರು ಭಾಗವಹಿಸಿದರು.

Leave a Reply

Your email address will not be published. Required fields are marked *