ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

ರಾಜ್ಯ

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯೊಂದಿಗೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಇಂಟರ್‌ನೆಟ್ ಇಲ್ಲದೆ, ಸೆಟ್‌ಲೈಟ್ ಸಂಪರ್ಕ ಇಲ್ಲದೆ, ವೈಫೈನೂ ಇಲ್ಲದೆ ಕಾರ್ಯನಿರ್ವಹಿಸಬಹುದಾದ ಹೊಸ ಮೆಸೆಂಜರ್ ಆಪ್ ಒಂದನ್ನು ಡೋರ್ಸಿ ಅವರು ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ.

ಬಿಟ್ ಚಾಟ್ ಎಂಬ ಪಿ2ಪಿ ಮೆಸೆಂಜರ್‌ ಆಪ್‌ ಅನ್ನು ಜಾಕ್ ಡೊರ್ಸಿ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಆಯಪ್ ಆಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್‌ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ.

ಬಿಟ್ ಚಾಟ್‌ ಟೆಸ್ಟ್‌ ಮೋಡ್‌ನಲ್ಲಿ ಹಲವರು ಚಾಟ್ ಮಾಡಿರುವ ಸ್ಕ್ರೀನ್ ಶಾಟ್‌ಗಳು ಆನ್‌ಲೈನ್‌ಲ್ಲಿ ಗಮನ ಸೆಳೆದಿವೆ. ಕ್ರಿಪ್ಟೊ ಕರೆನ್ಸಿ ಆಪ್‌ಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನ ಸುಧಾರಿಸಿ ಈ ಹೊಸ ಆಪ್ ತರಲಾಗಿದೆ ಎನ್ನಲಾಗಿದೆ.

ಮೊಬೈಲ್‌, ಇತರ ಡಿವೈಸ್‌ಗಳಲ್ಲಿನ ಬ್ಲೂಟೂತ್‌ ಮೂಲಕ ಒಂದು ಸಾಧನದಿಂದ ಇನ್ನೊಂದು ಸಾಧನವನ್ನು ಪಿ2ಪಿ ನೆಟ್‌ವರ್ಕ್ ಮೂಲಕ ಇದು ಸಂಪರ್ಕ ಸಾಧಿಸುತ್ತದೆ ಎನ್ನಲಾಗಿದೆ.

2022 ರಲ್ಲಿ ಇಲಾನ್ ಮಸ್ಕ್ ಟ್ವಿಟರ್‌ ಖರೀದಿಸಿದ ನಂತರ ಜಾಕ್ ಅಲ್ಲಿಂದ ಹೊರ ಬಿದ್ದಿದ್ದರು. ಅವರು ಈಗ ಅಭಿವೃದ್ಧಿಪಡಿಸಿರುವ ಬಿಟ್ ಚಾಟ್ ಯಶಸ್ವಿಯಾದರೆ ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿಯಾಗಲಿದೆ ಎನ್ನಲಾಗಿದೆ.

ಇಂಟರ್‌ನೆಟ್ ಇಲ್ಲದೇ, ಸೆಟ್‌ಲೈಟ್ ಸಂಪರ್ಕ ಇಲ್ಲದೇ, ವೈಫೈನೂ ಇಲ್ಲದೇ ಬಿಟ್ ಚಾಟ್ ಮೂಲಕ ಸುಲಭ ಸಂವಹನ ಸಾಧಿಸಬಹುದು ಎಂದು ಹೇಳಲಾಗಿದೆ. ಈ ಕುರಿತು ಹಲವು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *