ಗೋ ಸಾಗಾಣೆ ವಾಹನ ಹಿಡಿದು ಠಾಣೆಗೆ ತಂದರೂ ನಿರ್ಲಕ್ಷ್ಯ: ಪಿಎಸ್ಐ ಸಸ್ಪೆಂಡ್

ಬೆಳಗಾವಿ

ಬೆಳಗಾವಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್​ಐಆರ್ ದಾಖಲಿಸದೆ ಬಿಟ್ಟು ಕಳುಹಿಸಿದ್ದಕ್ಕೆ ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್​ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್​ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.

ಜೂ.26 ರಂದು ಶ್ರೀರಾಮಸೇನೆ ಕಾರ್ಯಕರ್ತರು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದರು.

ಪಿಎಸ್​ಐ ನಿಖಿಲ್​ ಕಾಂಬ್ಳೆ ಅಕ್ರಮವಾಗಿ ಗೋವು ಸಾಗಣೆ ಸಂಬಂಧ ಕೇಸ್ ದಾಖಲಿಸದೆ ಅವರನ್ನು ಬಿಟ್ಟು ಕಳುಹಿಸಿದ್ದರು. ಅಲ್ಲದೆ ಮೇಲಾಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಪೊಲೀಸ್​ ಠಾಣೆಗೆ ಬಂದ ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಗಡಿಪಾರಾದ ರೌಡಿಶೀಟರ್ ಮಹಾವೀರ ಸೊಲ್ಲಾಪುರೆ ಕೂಡ ಇದ್ದನು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಿಎಸ್‌ಐ ನಿಖಿಲ್​ ಕಾಂಬ್ಳೆ ಅವರನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *