ಬೆಂಗಳೂರು: ಬೇಸಿಗೆ ಬಂದ ತಕ್ಷಣ, ಅನೇಕ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಪ್ರಾರಂಭವಾಗುತ್ತದೆ. ಇದಕ್ಕಾಗಿಯೇ ಜನರು ಮನೆಯಲ್ಲಿ ಇನ್ವರ್ಟರ್ಗಳನ್ನು ಸ್ಥಾಪಿಸುತ್ತಾರೆ. ಆದರೆ ಇನ್ವರ್ಟರ್ನಲ್ಲಿರುವ ಬ್ಯಾಟರಿ ಎಷ್ಟು ಕಾಲ ಇರುತ್ತದೆ ಎಂಬುದು ನೀವು ಯೋಚಿಸಿದ್ದಿರಾ ?
ಪ್ರತಿಯೊಂದು ಬ್ಯಾಟರಿಯೂ ಜೀವಿತಾವಧಿ ಹೊಂದಿರುತ್ತದೆ, ಆ ಸಮಯ ಮುಗಿದ ಮೇಲೆ ಬ್ಯಾಟರಿಯನ್ನು ಬದಲಾಯಿಸುವುದು ಅವಶ್ಯಕ. ನಿಮ್ಮ ಮನೆಯಲ್ಲಿ ಅಳವಡಿಸಿರುವ ಇನ್ವರ್ಟರ್ನ ಬ್ಯಾಟರಿಯನ್ನು ಬದಲಾಯಿಸುವ ಸಮಯ ಬಂದಿದೆಯಾ ಅಥವಾ ಇಲ್ಲವಾ ? ಅದನ್ನು ಈ ರೀತಿ ತಿಳಿದುಕೊಳ್ಳಿ.
ಎಷ್ಟು ವರ್ಷಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ ?
ಹೊಸ ಬ್ಯಾಟರಿ ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಮತ್ತು ಅದನ್ನು ಹೇಗೆ ಕಂಡುಹಿಡಿಯುವುದು ? ಬಜಾಜ್ ಫಿನ್ಸರ್ವ್ ಪ್ರಕಾರ ಇನ್ವರ್ಟರ್ ಬ್ಯಾಟರಿ ಸಾಮಾನ್ಯವಾಗಿ 3 ರಿಂದ 5 ವರ್ಷಗಳವರೆಗೆ ಬರುತ್ತದೆ, ಆದರೆ ಬ್ಯಾಟರಿಯ ಜೀವಿತಾವಧಿಯು ಬ್ಯಾಟರಿಯನ್ನು ಹೇಗೆ ಬಳಸಲಾಗುತ್ತಿದೆ ಮತ್ತು ಬ್ಯಾಟರಿಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೆ ಅಥವಾ ಇಲ್ಲವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಬ್ಯಾಟರಿಯ ಜೀವಿತಾವಧಿಯು ಇನ್ವರ್ಟರ್ನಲ್ಲಿ ಸ್ಥಾಪಿಸಲಾದ ಬ್ಯಾಟರಿಯ ಪ್ರಕಾರದ ಮೇಲೆ ಅವಲಂಬಿಸಿರುತ್ತದೆ, ನೀವು ಸರಿಯಾದ ಸಮಯದಲ್ಲಿ ಬ್ಯಾಟರಿಯಲ್ಲಿ ನೀರನ್ನು ಮರುಪೂರ್ಣ ಮಾಡುತ್ತಿರಾ ? ಇಲ್ಲವಾ ? ಇತ್ಯಾದಿ. ಇದಲ್ಲದೆ ಬ್ಯಾಟರಿಯ ನಟ್ ಬಳಿ ಇಂಗಾಲವು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಈ ಇಂಗಾಲವನ್ನು ಸಹ ತೆಗೆದುಹಾಕುವುದು ಅವಶ್ಯಕ.
ಕರೆಂಟ್ ಹೋದ ನಂತರ ನೀವು ಹೆಚ್ಚಾಗಿ ಬಳಸಿದರೆ, ಬ್ಯಾಟರಿಯ ಮೇಲಿನ ಹೊರೆ ಹೆಚ್ಚಾಗಬಹುದು. ನಿಮ್ಮ ಈ ಅಭ್ಯಾಸದಿಂದಾಗಿ, ಬ್ಯಾಟರಿ ಬೇಗನೆ ಹಾಳಾಗಬಹುದು ಮತ್ತು ಬ್ಯಾಟರಿ ಬದಲಾಯಿಸಲು ನೀವು ಸಾವಿರಾರು ರೂ ಖರ್ಚು ಮಾಡಬೇಕಾಗಬಹುದು.
ಇನ್ವರ್ಟರ್ ಬ್ಯಾಟರಿ ಯಾವಾಗ ಬದಲಾಯಿಸಬೇಕು ?
ಇನ್ವರ್ಟರ್ ಬ್ಯಾಟರಿಯು ಹಿಂದಿನಂತೆ ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲವಾದರೆ, ಬ್ಯಾಟರಿ ಬದಲಾಯಿಸುವ ಸಮಯ ಬಂದಿದೆ ಎಂದರ್ಥ. ಬ್ಯಾಟರಿ ಬ್ಯಾಕಪ್ ಕಡಿಮೆಯಾಗುವದರ ಜೊತೆಗೆ ಬ್ಯಾಟರಿ ಪದೆ ಪದೆ ಹಾನಿಗೊಳಗಾಗುತ್ತಿದ್ದರೆ ಅಥವಾ ಬ್ಯಾಟರಿ ಹೆಚ್ಚು ಬಿಸಿಯಾಗುತ್ತಿದ್ದರೆ, ಬ್ಯಾಟರಿಯನ್ನು ತಕ್ಷಣ ಬದಲಾಯಿಸುವುದು ಉತ್ತಮ.
ಇನ್ವರ್ಟರ್ನಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಲೋಡ್. ಇನ್ವರ್ಟರ್ ಮೇಲೆ ಎಂದಿಗೂ ಹೆಚ್ಚು ಲೋಡ್ ಹಾಕಬೇಡಿ. ಇದು ಇನ್ವರ್ಟರ್ಗೆ ಹಾನಿಕಾರಕವಾಗಿದೆ. ಇದನ್ನು ಈ ರೀತಿ ಅರ್ಥಮಾಡಿಕೊಳ್ಳಿ, ನಿಮ್ಮ ಇನ್ವರ್ಟರ್ 500 ವೋಲ್ಟ್ ಆಂಪಿಯರ್ ಆಗಿದ್ದರೆ, ನೀವು ಇನ್ವರ್ಟರ್ ಮೇಲೆ 380 ವ್ಯಾಟ್ಗಳಿಗಿಂತ ಹೆಚ್ಚಿನ ಲೋಡ್ ಹಾಕಬೇಡಿ. ಆದರೂ ಹೆಚ್ಚಿನ ಇನ್ವರ್ಟರ್ಗಳು ಟ್ರಿಪ್ಪರ್ ಹೊಂದಿರುತ್ತವೆ, ಅದು ಒವರ್ಲೋಡ್ಗೆ ಸಂಬಂಧಿಸಿದೆ. ಕೆಲವೊಮ್ಮೆ ಅದು ಹಾನಿಗೊಳಗಾಗುತ್ತದೆ ಮತ್ತು ಇನ್ವರ್ಟರ್ನಲ್ಲಿರುವ ಲೋಡ್ ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇನ್ವರ್ಟರ್ ಸುಟ್ಟುಹೋಗುವ ಸಾಧ್ಯತೆಯಿದೆ.
ಹೆಚ್ಚಾಗಿ ಗಾಳಿ ಇರುವ ಸ್ಥಳದಲ್ಲಿ ಇನ್ವರ್ಟರ್ ಇರಿಸಿ. ಅದನ್ನು ಗೋಡೆಗೆ ಜೋಡಿಸಬೇಡಿ. ಯಾವುದೆ ಕಾರಣಕ್ಕೂ ಒದ್ದೆ ಬಟ್ಟೆಯಿಂದ ಇನ್ವರ್ಟರ್ ಸ್ವಚ್ಛಗೊಳಿಸಬೇಡಿ. ಒಂದು ವೇಳೆ ಈ ರೀತಿ ಮಾಡಿದರೆ ಇನ್ವರ್ಟರ್ ಹಾನಿಗೊಳಗಾಗಬಹುದು. ಅದನ್ನು ಸ್ವಚ್ಛಗೊಳಿಸಲು ಬಯಸಿದರೆ, ಒಣ ಬಟ್ಟೆ ಬಳಸಿ.