ಕಲಬುರಗಿ: ಆಹಾರದಲ್ಲಿ ಯಾವುದೆ ರೀತಿಯ ಕಲಬೆರಕೆ ಇಲ್ಲದೆ ಸುರಕ್ಷತೆಯಿಂದ ಇರಬೇಕು. ವಾಹನ ಚಲಾವಣೆ ಮಾಡುವಾಗ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಆರೋಗ್ಯದ ಸುರಕ್ಷತೆ ಕಾಪಾಡಿಕೊಳ್ಳುವದು ಅಗತ್ಯವಾಗಿದೆ ಎಂದು ವೈದ್ಯ ಡಾ. ವಿ.ಬಿ ಮಠಪತಿ ಹೇಳಿದರು.
ನಗರದ ಹುಮನಾಬಾದ ರಿಂಗ್ ರಸ್ತೆಯಲ್ಲಿನ ನಿಜಾಮಪುರನಲ್ಲಿರುವ ಮಠಪತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಕಿ ಅವಘಡಗಳು, ಪ್ರವಾಹ, ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸುವದು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗಕ್ಕೆ ಸುರಕ್ಷತೆ ದೊರೆಯಬೇಕು ಎಂದರು.
ಇಂದಿನ ಒತ್ತಡದ ಬದುಕಿನಲ್ಲಿ ಜೀವದ ಕಡೆ ಲಕ್ಷ್ಯವಹಿಸದಷ್ಟು ಬಿಡುವಿಲ್ಲದಂತಾಗಿದೆ. ಯಾವುದೆ ಕೆಲಸ ಮಾಡಿದರು ಅದರಿಂದ ನಮಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಸಮಾಜಕ್ಕೆ ಹಿತವಾಗಿರಬೇಕು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಕಾರ್ಯದ ಜೊತೆಗೆ ಆರೋಗ್ಯದ ಕಡೆಗೆ ಸೂಕ್ತ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್ ಬಿರಾದಾರ, ಪ್ರಮುಖರಾದ ಯುಸುಫ್ ಅಲಿ, ರಿಜಾಯ್ ಶೇಖ್, ಇರ್ಫಾನ್ ಅಲಿ, ಆಶೀಫ್ ಶೇಖ್ ಸೇರಿದಂತೆ ಅನೇಕರು ಇದ್ದರು.