ವಾಡಿ: ಪುಲ್ವಾಮಾ ಹುತಾತ್ಮ ಯೋಧರಿಗೆ ಗೌರವ ನಮನ

ಪಟ್ಟಣ

ವಾಡಿ: ಪಟ್ಟಣದ ಬಿಯಾಬಾನಿ ಬಡಾವಣೆಯಲ್ಲಿ ಪುಲ್ವಾಮಾ ಯೋಧರ ಶ್ರದ್ಧಾಂಜಲಿ ಸಮಿತಿಯಿಂದ ಹುತಾತ್ಮರಾದ ಯೋಧರಿಗೆ ಗೌರವ ನಮನ ಕಾರ್ಯಕ್ರಮ ಜರುಗಿತು.

ಹಲಕರ್ಟಿಯ ಸಿದ್ದೇಶ್ವರ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಫೆ.14 2019 ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರಿಗೆ ಈ ದಿನ 6ನೇ ವಾರ್ಷಿಕೋತ್ಸವದಲ್ಲಿ ಇಡೀ ದೇಶವು ಸ್ಮರಿಸುತ್ತಿದೆ ಎಂದರು.

ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿ ಪುಲ್ವಾಮಾ ದಾಳಿಯು ಭಾರತದ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಆ ದುರದೃಷ್ಟಕರ ಮಧ್ಯಾಹ್ನದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಬೆಂಗಾವಲು ಪಡೆಯನ್ನು ಆತ್ಮಾಹುತಿ ಬಾಂಬರ್ ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಇದರ ಪರಿಣಾಮವಾಗಿ 40 ವೀರ ಸೈನಿಕರು ಸಾವನ್ನಪ್ಪಿದರು. ಇದೀಗ ಈ ದಾಳಿ ನಡೆದು ಆರು ವರ್ಷಗಳಾಗಿದ್ದು, ಈ ಆರನೇ ವಾರ್ಷಿಕೋತ್ಸವವು ಈ ವೀರರು ಮಾಡಿದ ತ್ಯಾಗಗಳನ್ನು ನೆನಪಿಸುತ್ತದೆ ಎಂದರು.

ನಿವೃತ್ತ ಭಾರತೀಯ ಯೋಧರಾದ ಷಣ್ಮುಖ ಲೋಕು ಚವ್ಹಾಣ ಮಾತನಾಡಿದರು.

ಈ ಸಂದರ್ಭದಲ್ಲಿ ಬಂಜಾರ ಸೇವಾ ಸಂಘದ ಅಧ್ಯಕ್ಷ ರಮೇಶ ಕಾರಬಾರಿ, ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಪಿಎಸ್ಐ ತಿರುಮಲೇಶ್ ಕುಂಬಾರ, ಪೋಮಾ ರಾಠೊಡ, ರಾಜೇಶ್ ಅಗ್ರವಾಲ, ರವಿ ನಾಯಕ, ರವಿ ಜಾಧವ ಸೇರಿದಂತೆ ಅನೇಕರು ಇದ್ದರು‌.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸ್ವಾಗತಿಸಿ ನಿರೂಪಿಸಿದರು, ಪುಲ್ವಾಮಾ ಯೋಧರ ಶ್ರದ್ಧಾಂಜಲಿ ಸಮಿತಿಯ ರಾಜು ಪವಾರ ವಂದಿಸಿದರು.

Leave a Reply

Your email address will not be published. Required fields are marked *