ಬೆಂಗಳೂರು: ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ ಅವರು ಸಮಾಜದ ಆಸ್ತಿ, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಿದ್ದೆವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವರ್ಷ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಮಾಸಿಕ 1 ಸಾವಿರ ರೂ. ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಘೋಷಿಸಿದೆ, ಇದನ್ನು ಪ್ರಸಕ್ತ ಸಾಲಿನಿಂದ ನೀಡಲಾಗುವುದು ಎಂದು ಹೇಳಿದ್ದಾರೆ.
ದೈಹಿಕ ಅಥವಾ ಮಾನಸಿಕ ನ್ಯೂನ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ದೃಷ್ಟಿಯಿಂದ ನೋಡದೆ, ಆ ನಿಷ್ಕಲ್ಮಶ ಜೀವಗಳಿಗೆ ಬೊಗಸೆಯಷ್ಟು ಪ್ರೀತಿ ನೀಡಿ ನೋಡಿ, ಮರಳಿ ಬೆಟ್ಟದಷ್ಟು ಪ್ರೀತಿ ತೋರುತ್ತಾರೆ. ಪ್ರತಿ ಮಗುವೂ ಪ್ರತಿಭಾಶಾಲಿಯೇ, ಅವರ ಪ್ರತಿಭೆಯನ್ನು ಗುರುತಿಸಿ, ಬೆಂಬಲಿಸುವ ಕೆಲಸ ನಮ್ಮದಾಗಬೇಕು. ವಿಶೇಷ ಚೇತನರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುವ ಹೊಣೆ ಮಕ್ಕಳ ಪೋಷಕರ ಜೊತೆಗೆ ನಮ್ಮೆಲ್ಲರದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ, ಮಕ್ಕಳ ಕನಸುಗಳಿಗೆ ಬಣ್ಣ ತುಂಬೋಣ ಎಂದು ಹೇಳಿದ್ದಾರೆ.
ಆರೈಕೆದಾರರ ಭತ್ಯೆ
ಮೆದುಳು ಪಾರ್ಶ್ವವಾಯು, ಮಸ್ಕುಲರ್ ಡಿಸ್ಟೋಫಿ, ಪಾರ್ಕಿನ್‌ಸನ್ ಕಾಯಿಲೆ ಮತ್ತು ಮಲ್ಟಿಪಲ್ ಸ್ಟೈರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆ ಮಾಡುತ್ತಿರುವವರಿಗೆ 2024-25ನೇ ಸಾಲಿನಿಂದ ಪ್ರತಿ ತಿಂಗಳು 1 ಸಾವಿರ ಪ್ರೋತ್ಸಾಹ ಧನ.