ಚಿಕನ್ ಪ್ರಿಯರೇ ಎಚ್ಚರ: ರಾಜ್ಯಕ್ಕೆ ಕಾಲಿಟ್ಟಿದೆ ಹಕ್ಕಿ ಜ್ವರ

ಸುದ್ದಿ ಸಂಗ್ರಹ ಬೆಂಗಳೂರುಚಿಕನ್ ಪ್ರಿಯರೆ ಎಚ್ಚರವಾಗಿರಿ. ರಾಜ್ಯಕ್ಕೆ H5N1 ವೈರಸ್ ಹಕ್ಕಿ ಜ್ವರ ಕಾಲಿಟ್ಟಿದ್ದು, ಮೊದಲ ತಪಾಸಣೆಯಲ್ಲೇ ಪತ್ತೆಯಾಗಿದೆ. ಕೇಂದ್ರ ಸರ್ಕಾದ ಅನುಮತಿ ಮೇರೆಗೆ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ನಡೆಸಲಾಗಿದ್ದು, ಮೊದಲ ತಪಾಸಣೆಯಲ್ಲೆ ಎಚ್5ಎನ್1 ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿರುವ ಕೋಳಿಗಳನ್ನು ಗುಂಡಿ ತೆಗೆದು ಮುಚ್ಚಲಾಗಿದೆ. ಈ ಪೌಲ್ಟ್ರಿ ಫಾರಂನಿಂದ ರಾಜ್ಯದ ನಾನಾ ಭಾಗಗಳಿಗೆ ಕೋಳಿ ಸಪ್ಲೈ ಮಾಡಲಾಗುತ್ತಿತ್ತು. ಹೀಗಾಗಿ ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೂ ನೋಟಿಸ್ […]

Continue Reading

ಹೆತ್ತ ತಾಯಿಯನ್ನೇ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ: ಪಾರ್ಶ್ವವಾಯು ಪೀಡಿತೆ ಎಂಬ ಕಾರಣಕ್ಕೆ ಕೃತ್ಯ

ಸುದ್ದಿ ಸಂಗ್ರಹ ಬೆಂಗಳೂರು75 ವರ್ಷದ ವೃದ್ಧ ಮತ್ತು ಪಾರ್ಶ್ವವಾಯು ಪೀಡಿತ ತಾಯಿಯನ್ನು ಮಗನೇ ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯ ಕಟ್ಟಡದ 3ನೇ ಮಹಡಿಯಿಂದ ಕೆಳಗೆ ತಳ್ಳಿದ್ದು, ತಕ್ಷಣವೆ ಆಕೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ RR ನಗರದಲ್ಲಿ ನಡೆದಿದೆ. RR ನಗರದ BMEL ಲೇಔಟ್’ನ 3ನೇ ಹಂತದಲ್ಲಿ ಈ ಘಟನೆ ನಡೆದಿದ್ದು, 75 ವರ್ಷದ ಸಾವಿತ್ರಮ್ಮ ಸಿ ಎಂಬ ವೃದ್ದ ತಾಯಿಯನ್ನು ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿಕೊಳ್ಳುವ ವೆಂಕಟೇಶ್ ತನ್ನ ತಾಯಿಯನ್ನು ನೋಡಿಕೊಳ್ಳುವುದು ಮತ್ತು ಅವರ ಚಿಕಿತ್ಸೆಗೆ […]

Continue Reading

ದ್ವಿತೀಯ PU ಪರೀಕ್ಷೆ-2 ಪುನಾವರ್ತಿತ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಸುದ್ದಿ ಸಂಗ್ರಹ ಬೆಂಗಳೂರು2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಪುನರಾವರ್ತಿತ ಅಭ್ಯರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುಡ್​ ನ್ಯೂಸ್​​ ನೀಡಿದೆ. ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ. ಈ ಮೊದಲು ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿತ್ತು. ಆದರೆ ರಾಜ್ಯದ ಹಲವೆಡೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ […]

Continue Reading

ಈ ಬಾರಿ ಮುಂಗಾರು ಕೊರತೆ– ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

ಸುದ್ದಿ ಸಂಗ್ರಹ ಬೆಂಗಳೂರು ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ ಕಡಿಮೆಯಾಗಲಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಡಿಸಿ-ಸಿಇಓಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಸಿಇಓಗಳ ಜೊತೆ ಸಭೆ ನಡೆಸಿದರು. ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆಯಿದ್ದು, […]

Continue Reading

ಅಲ್ಲೂರ(ಬಿ) ಗ್ರಾಮದ 2,877 ಎಕರೆ ಅರಣ್ಯ ಸಂರಕ್ಷಿತ ಮೀಸಲು: ವನ್ಯಜೀವಿ ಮಂಡಳಿ ಸಭೆ ನಿರ್ಧಾರ

ಸುದ್ದಿ ಸಂಗ್ರಹ ಬೆಂಗಳೂರುಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಇಂದು ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 6ನೇ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ(ಬಿ) ಗ್ರಾಮದ 2,877 ಎಕರೆ ಅರಣ್ಯವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ನಿರ್ಧರಿಸಲಾಗಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ರಮಣೀಯವಾದ ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಈ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಯೋಗ್ಯವಾಗಿದೆ ಎಂದು […]

Continue Reading

ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸಾಧ್ಯತೆ: ಮುಂದಿನ 3 ಗಂಟೆ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸುದ್ದಿ ಸಂಗ್ರಹ ಬೆಂಗಳೂರು ರಾಜ್ಯದಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಹಿನ್ನೆಲೆ ಮುಂದಿನ 3 ಗಂಟೆ ರಾಜ್ಯದ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು, ಶಿವಮೊಗ್ಗ ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

Continue Reading

ಇನ್ಮುಂದೆ ಬುಕ್‌ ಮಾಡಿದ ದಿನವೆ ಗೃಹ ಬಳಕೆ ಸಿಲಿಂಡರ್ ವಿತರಣೆ: ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ

ಸುದ್ದಿ ಸಂಗ್ರಹ ಬೆಂಗಳೂರು ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ್ದೆ ಒಂದು ಕಥೆಯಾದರೆ, ರಾಜ್ಯದಲ್ಲಿ ಗ್ಯಾಸ್ ಅಭಾವದ್ದೆ ಇನ್ನೊಂದು ಕಥೆಯಾಗಿದೆ. ಈ ಮಧ್ಯೆ ಗೃಹ ಬಳಕೆ ಸಿಲಿಂಡರ್ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಸರ್ಕಾರ, 26 ದಿನಗಳ ಬಳಿಕ ಸಿಲಿಂಡರ್ ಬುಕ್ ಮಾಡಿದ್ದರೆ ತಕ್ಷಣ ವಿತರಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಿದೆ. ಯಾವುದೆ ಕಾರಣಕ್ಕೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಕ್ಯೂ ನಿಲ್ಲದಂತೆ ನೋಡಿಕೊಳ್ಳಬೇಕೆಂದು ತಿಳಿಸಿದೆ. ಇನ್ನೂ, ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಸುಧಾರಣೆ ಆಗಿದ್ದು, ಆಟೋ ಗ್ಯಾಸ್ ಸಮಸ್ಯೆ ಇದೆ. ಕೇಂದ್ರಕ್ಕೆ ಪತ್ರ […]

Continue Reading

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

ಸುದ್ದಿ ಸಂಗ್ರಹ ಬೆಂಗಳೂರು16 ವರ್ಷ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶಿಕ್ಷಣ ಇಲಾಖೆ ಶುರು ಮಾಡಿದ್ದು, ವರದಿ ನೀಡಲು ಸಮಿತಿ ರಚನೆಗೆ ಮುಂದಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರು, ವಿವಿಧ ಇಲಾಖೆ ಮುಖ್ಯಸ್ಥರು, ಪೋಷಕರು ಒಳಗೊಂಡ ಸಮಿತಿ ರಚನೆಗೆ ಮುಂದಾಗಿದೆ. ಸಮಿತಿಗೆ ಸಚಿವರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೆ ಪ್ರಕ್ರಿಯೆ ಶುರು ಮಾಡಲಿದ್ದಾರೆ. 2-3 ತಿಂಗಳ ಒಳಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಸ್ವರೂಪದ ಬಗ್ಗೆ ಅಧ್ಯಯನ ಮಾಡಿ […]

Continue Reading

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಉಡುಪಿ ಪ್ರಥಮ, ಕಾಮರ್ಸ್‌ನಲ್ಲಿ ಇಬ್ಬರಿಗೆ 600ಕ್ಕೆ 600 ಅಂಕ

ಸುದ್ದಿ ಸಂಗ್ರಹ ಬೆಂಗಳೂರು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86.48 ರಷ್ಟು ಫಲಿತಾಂಶ ಬಂದಿದೆ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉತ್ತೀರ್ಣ ಅಂಕವನ್ನು ಶೇ.35ರಿಂದ ಶೇ.33ಕ್ಕೆ ನಿಗದಿ ಮಾಡಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.13 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 6 ಲಕ್ಷದ 32 ಸಾವಿರದ 200 ಪೈಕಿ 5 ಲಕ್ಷದ 46 ಸಾವಿರದ 698 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ […]

Continue Reading

ರಾಜ್ಯದಲ್ಲಿ ಏ.6ರಿಂದ 4 ದಿನ ಮಳೆ: 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸುದ್ದಿ ಸಂಗ್ರಹ ಬೆಂಗಳೂರುಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್‌ 2ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್‌ 6 ರಿಂದ 4 ದಿನಗಳು ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಿಗೆ ವಿವಿಧ ದಿನಗಳಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೇಸಿಗೆ ಬಿಸಿಲು ಜೋರಿದ್ದು, ಅಂತೆಯೇ ಪೂರ್ವ ಮುಂಗಾರು ಚುರುಕಾಗುತ್ತಿದೆ. ಏಪ್ರಿಲ್ 6 ರಿಂದ 8ವರೆಗೂ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆದೆ. ದಕ್ಷಿಣ ಒಳನಾಡು, ಮಲೆನಾಡು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ […]

Continue Reading