ಭಕ್ತರ ಬವಣೆ ಕಳೆಯುವ ಶಕ್ತಿ ಕೋರಿಸಿದ್ದೇಶ್ವರರ………ನಗರದ ಕರುಣೇಶ್ವರ ಬಡಾವಣೆಯಲ್ಲಿ ಕೋರಿಸಿದ್ದೇಶ್ವರರ ಹೊಸ ಮೂರ್ತಿ, ಲಿಂ.ತೋಚೇಂದ್ರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ, ನವೀಕೃತಗೊಂಡ ಶ್ರೀ ಮಠದ ಕಟ್ಟಡದ ನೂತನ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು……ಈ ವೇಳೆ ವೇದಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ನಾಲವಾರ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕರುಣೇಶ್ವರ ನಗರ ಶಾಖಾ ಮಠದ ಕೋರಿಸಿದ್ಧೇಶ್ವರರ ದೇವಾಲಯವು ಸುಸಜ್ಜಿತವಾಗಿ ನಿರ್ಮಾಣವಾಗಲು ಈ ನಗರದ ಸಕಲ ಭಕ್ತರ ತನು-ಮನ-ಧನದ ನಿಸ್ವಾರ್ಥ ಸಹಕಾರವೇ ಮೂಲ ಕಾರಣ ಎಂದರು……ದೇವಾಲಯವೆಂದರೆ ಕೇವಲ ಕಲ್ಲು ಮತ್ತು ಸುಣ್ಣದಿಂದ ಕಟ್ಟಿದ ಕಟ್ಟಡವಲ್ಲ; ಅದು ಭಕ್ತರ ಶ್ರದ್ಧೆಯಿಂದ ನಿರ್ಮಾಣವಾದ ಜೀವಂತ ಶಕ್ತಿಕೇಂದ್ರ, ಭಕ್ತಿಯು ಕೇವಲ ದೇವಾಲಯದ ಗೋಡೆಗಳಲ್ಲಿ ಸೀಮಿತವಾಗಬಾರದು; ಅದು ಮನೆ-ಮನಗಳಲ್ಲಿ, ಬಡಾವಣೆಯ ಪ್ರತಿಯೊಂದು ಹೃದಯದಲ್ಲಿ ಅರಳಬೇಕು ಎಂದು ಹೇಳಿದರು……ಸುಲಫಲ ಮಠದ ಪೀಠಾಧಿಪತಿ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿ ಎಲ್ಲರೂ ನನ್ನವರು ಎಂದು ಅಪ್ಪಿಕೊಳ್ಳುವ ಮಮತಾಮಯಿ ಪೂಜ್ಯರೆಂದರೆ ನಾಲವಾರದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಎಂದು ಬಣ್ಣಿಸಿದರು……ಕರುಣೇಶ್ವರ ಬಡಾವಣೆಯ ಭಕ್ತರು ಮುಂದಿನ ದಿನಗಳಲ್ಲಿ ಏಕತೆ ಮತ್ತು ಒಗ್ಗಟ್ಟಿನಿಂದ ಶ್ರೀ ಕೋರಿಸಿದ್ದೇಶ್ವರರ
ಶಾಖಾ ಮಠದ ಅಭಿವೃದ್ಧಿಗೆ ಶ್ರಮಿಸಿದರೆ, ಈ ಮಠವು ಭೂಮಿಯ ಮೇಲಿನ ಕೈಲಾಸದಂತೆ ಕಂಗೊಳಿಸಲಿದೆ. ಎಲ್ಲರನ್ನು ಗುರುಗಳು ಅನುಗ್ರಹಿಸಿ, ಸನ್ಮಾರ್ಗದತ್ತ ಕೊಂಡೊಯ್ಯುತ್ತಾರೆ ಎಂದರು……ಚಂದ್ರಗುಂಡ ಶಿವಾಚಾರ್ಯರು, ಶಾಂತರುದ್ರಮುನಿ ಸ್ವಾಮೀಜಿ, ಮಹಾದೇವ ಗಂವ್ಹಾರ, ಕರಣಯ್ಯ ಹಿರೇಮಠ, ಗುರು ಬಸ್ ಪಾಟೀಲ್ ಬಿರಾಳ ಭಕ್ತರು ಇದ್ದರು……ಗಾರೆಂಪಲ್ಲಿ-ಚಿತ್ತಾಪುರ ಅವರಿ೦ದ ಭರತನಾಟ್ಯ ನಡೆಯಿತು. ತೃಪ್ತಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು. ಮಡಿವಾಳಯ್ಯ ಶಾಸ್ತ್ರಿನಿರೂಪಿಸಿದರು.….ಶ್ರೀಗಳಿಗೆ ತುಲಾಭಾರ ಸೇವೆ…..ಈ ವೇಳೆ ಡಾ.ಸಿದತೋಟೇಂದ್ರ ಶಿವಾಚಾರ್ಯ
ಮಹಾಸ್ವಾಮೀಜಿಗಳವರಿಗೆ ಶ್ರೀಮಠದ ಭಕ್ತರಾದ ಶಿವಲಿಂಗನಹಳ್ಳಿ ಬೆಂಗಳೂರು, ಬಸರೆಡ್ಡಿಗೌಡ, ಶಿವಶರಣ ಪಾಟೀಲ್, ಮಲ್ ರೆಡ್ಡಿ ಗೌಡ ಗುರ್ಜಾಲ್, ಚನ್ನಬಸಪ್ಪ, ವಿಶ್ವನಾಥ್ ಪಾಟೀಲ್ ಭಕ್ತರಿಂದ ತುಲಾಭಾರ ನೆರವೇರಿತು.
ಶ್ರೀ ಡಾ. ಸಿದ್ಧತೋಟೇಂದ್ರ ಶಿವಾಚಾರ್- ನಾಲವಾರ