ಮುತ್ತಗಿ ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಕೇಬಲ್ ಕಳವು

ನಗರದ

ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಮುತ್ತಗಿ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ 10 ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯುತ್ ಕೇಬಲ್‌ನ್ನು ಕದ್ದೊಯ್ದ ಘಟನೆ ನಡೆದಿದೆ.

ಗ್ರಾಮದ 30ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳ ಕೇಬಲ್‌ನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿದ್ದಾರೆ. ಅಡಿ ಕೇಬಲ್‌ಗೆ 70 ರಿಂದ 80ರೂ ಬೆಲೆಯಿದ್ದು, ಒಬ್ಬೊಬ್ಬ ರೈತರು 200ರಿಂದ 600 ಅಡಿವರೆಗೆ ಕೇಬಲ್ ಅಳವಡಿಸಿದ್ದರು. ಕಳ್ಳರು ಕೇಬಲ್ ಕತ್ತರಿಸಲು ಬಳಸಿದ್ದ ಕಟ್ಟರ್ ಮತ್ತು ಕಟಿಂಗ್‌ ಪ್ಲೇಯರ್‌ ಸ್ಥಳದಲ್ಲೆ ಬಿಟ್ಟು ಹೋಗಿದ್ದಾರೆ.

ಕಳ್ಳರನ್ನು ಬಂಧಿಸಿ, ಕೇಬಲ್ ಹಿಂದಿರುಗಿಸುವಂತೆ ಮುತ್ತಗಿ ರೈತರು ಶಹಾಬಾದ್‌ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಪಿಎಸ್ ವನಜಕರ್ ಪ್ರತಿಕ್ರಿಯಿಸಿ, ತನಿಖಾ ತಂಡವನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಕಳ್ಳರನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಶಿವಕುಮಾರ ನಾಟೀಕಾರ, ವಿಜಯಕುಮಾರ, ಮಲ್ಲಣ್ಣ ನರಿಬೋಳ, ದಸ್ತಗೀರ್‌ ಪಟೇಲ್, ಸಿದ್ದಣ್ಣ ರಸ್ತಾಪುರ, ವಿಜಯಕುಮಾರ ಮುತ್ತಗಿ ಮತ್ತು ಮಂಜುನಾಥ ವಾಲೀಕಾರ ಸೇರಿದಂತೆ ಮುತ್ತಗಿ ಗ್ರಾಮದ ರೈತರು ಇದ್ದರು.

Leave a Reply

Your email address will not be published. Required fields are marked *