ಧಮ್ಮ ಜನಜಾಗೃತಿ ಯಾತ್ರೆ, ಆರ್‌ಎಸ್‌ಎಸ್ ಪಥ ಸಂಚಲನ ನಾಳೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಧಮ್ಮ ಜನಜಾಗೃತಿ ಯಾತ್ರೆಯ ಸ್ವಾಗತ, ಬೈಕ್ ರ್‍ಯಾಲಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ ಕಾರ್ಯಕ್ರಮ ಒಂದೆ ದಿನ ಅ.31ರಂದು ನಡೆಯಲಿವೆ. ಎರಡು ಕಾರ್ಯಕ್ರಮಗಳಿಗೆ ಸ್ಥಳೀಯ ಪೊಲೀಸ್ ಇಲಾಖೆಯು ಷರತ್ತುಬದ್ಧ ಅನುಮತಿ ನೀಡಿದೆ.

ಧಮ್ಮ ಯಾತ್ರೆಯ ಬೈಕ್ ರ್‍ಯಾಲಿ: ಧಮ್ಮ ಜನಜಾಗೃತಿ ಯಾತ್ರೆಯು ಅ.31 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ತಾಪುರ ಪಟ್ಟಣದ ಯರಗಲ್ ಕ್ರಾಸ್ ಹತ್ತಿರ ಸ್ವಾಗತಿಸಿಕೊಳ್ಳಲಾಗುತ್ತದೆ. ನಂತರ ಯರಗಲ್ ಕ್ರಾಸ್‌ದಿಂದ ಕೋರ್ಟ್ ರಸ್ತೆ, ಹೋಳಿಕಟ್ಟಾ, ಕಪಡಾ ಬಜಾರ, ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ನಗರದವರೆಗೆ ಬೈಕ್ ರಾಲಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಧಮ್ಮ ಜನಜಾಗೃತಿ ಸಮಾರೋಪ ಸಮಾರಂಭ ನಡೆಯಲಿದೆ.

ಷರತ್ತುಬದ್ಧ ಅನುಮತಿ: ಧ್ವನಿವರ್ಧಕ ಪಡೆಯಲು ಅನುಮತಿ, ಯಾವುದೆ ಜಾತಿ, ಧರ್ಮಕ್ಕೆ ಅಪಮಾನವಾಗುವ ಹಾಡುಗಳು, ಪ್ರಚೋಧನಕಾರಿ ಭಾಷಣ ಮಾಡಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.

ಆರ್‌ಎಸ್‌ಎಸ್‌ ಪಥ ಸಂಚಲನ: ಅ.31ರಂದು ಮಧ್ಯಾಹ್ನ 3 ಗಂಟೆಯಿಂದ 7ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂದಾಜು 600ರಿಂದ 800 ಸಂಖ್ಯೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಪಥ ಸಂಚಲನ ಮಾಡಲಿದ್ದಾರೆ. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಬಸ್ ನಿಲ್ದಾಣ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಭುವನೇಶ್ವರಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ಸೇವಾಲಾಲ್ ಚೌಕ್, ಪುರಸಭೆ ಕಾರ್ಯಾಲಯ, ಲಾಡ್ಜಿಂಗ್ ಕ್ರಾಸಿನಿಂದ ಬಜಾಜ್ ಕಲ್ಯಾಣ ಮಂಟಪದವರೆಗೆ ಪಥ ಸಂಚಲನ ನಡೆಯಲಿದೆ.

ಪಥ ಸಂಚಲನಕ್ಕೆ ‍ಷರತ್ತು: ನಿಗದಿತ ಸಮಯದೊಳಗೆ ಪಥ ಸಂಚಲನ ಮುಗಿಸಬೇಕು. ಚಿತ್ತಾಪುರ ತಾಲೂಕಿನ ಜನರಷ್ಟೆ ಭಾಗವಹಿಸಬೇಕು. ಪೊಲೀಸ್ ಇಲಾಖೆ ಅನುಮತಿ ನೀಡಿರುವ ಮಾರ್ಗದಲ್ಲಿಯೇ ಪಥ ಸಂಚಲನ ನಡೆಸಬೇಕು. ಯಾವುದೆ ರಾಜಕೀಯ ಭಾಷಣ ಮಾಡಬಾರದು. ಪ್ರಚೋದನಕಾರಿ ಭಾಷೆ ಅಥವಾ ಘೋಷಣೆ ಬಳಸಬಾರದು ಎಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *