ಸುದ್ದಿ ಸಂಗ್ರಹ

SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪಬ್ಲಿಕ್ ಪರೀಕ್ಷೆ-1 (Public Exam) ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪರೀಕ್ಷಾ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31ರ ವರೆಗೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯ ಈ ವೇಳಾಪಟ್ಟಿ ಮಹತ್ವದ್ದಾಗಿದೆ.

SSLC ಪರೀಕ್ಷೆ 1 ವೇಳಾಪಟ್ಟಿ
ಮಾರ್ಚ್ 22- ಪ್ರಥಮ ಭಾಷೆ
ಮಾರ್ಚ್ 25- ವಿಜ್ಞಾನ.
ಮಾರ್ಚ್ 27- ದ್ವೀತಿಯ ಭಾಷೆ.
ಮಾರ್ಚ್ 30- ಗಣಿತ
ಏಪ್ರಿಲ್ 2- ತೃತೀಯ ಭಾಷೆ.
ಏಪ್ರಿಲ್ 5 – ಸಮಾಜ ವಿಜ್ಞಾನ

SSLC ಪರೀಕ್ಷೆ 2 ವೇಳಾಪಟ್ಟಿ
ಮೇ 24- ಪ್ರಥಮ ಭಾಷೆ
ಮೇ 25- ವಿಜ್ಞಾನ
ಮೇ 26- ದ್ವೀತಿಯ ಭಾಷೆ
ಮೇ 27-ಗಣಿತ
ಮೇ 28- ತೃತೀಯ ಭಾಷೆ
ಮೇ 29- ಸಮಾಜ ವಿಜ್ಞಾನ

2nd PUC ಪರೀಕ್ಷೆ 1 ವೇಳಾಪಟ್ಟಿ
ಫೆ 27- ಕನ್ನಡ, ಅರೇಬಿಕ್
ಮಾರ್ಚ್ 1- ಇಂಗ್ಲಿಷ್
ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ,ಮರಾಠಿ ಉರ್ದು,ಸಂಸ್ಕೃತ, ಫ್ರೆಂಚ್.
ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 5- ಲೆಕ್ಕಶಾಸ್ತ್ರ
ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ.
ಮಾರ್ಚ್ 11- ಹಿಂದುಸ್ತಾನಿ ಸಂಗೀತ,ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ.
ಮಾರ್ಚ್‌ 12- ವ್ಯವಹಾರ ಅಧ್ಯಯನ, ಗಣಿತ
ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ,ಗೃಹ ವಿಜ್ಞಾನ
ಮಾರ್ಚ್ 15- ರಾಜ್ಯಶಾಸ್ತ್ರ, ಜೀವಶಾಸ್ತ್ರ,, ಗಣಕ ವಿಜ್ಞಾನ.
ಮಾರ್ಚ್ 16- ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮಾರ್ಚ್ 17- ಹಿಂದಿ
ಮಾರ್ಚ್ 18- ಇತಿಹಾಸ.

2nd PUC ಪರೀಕ್ಷೆ 2 ವೇಳಾಪಟ್ಟಿ
ಮೇ 3- ಕನ್ನಡ, ಅರೇಬಿಕ್
ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮೇ 5- ರಾಜ್ಯಶಾಸ್ತ್ರ, ಗಣಕ ವಿಜ್ಞಾನ.
ಮೇ 6- ಇತಿಹಾಸ, ರಸಾಯನಶಾಸ್ತ್ರ
ಮೇ 7- ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ.
ಮೇ 8- ಐಚ್ಛಿಕ ಕನ್ನಡ,ಭೌತಶಾಸ್ತ್ರ, ಮೂಲ ಗಣಿತ
ಮೇ 10- ಅರ್ಥಶಾಸ್ತ್ರ, ಗಣಿತ
ಮೇ 11-ಹಿಂದಿ
ಮೇ 12- ಇಂಗ್ಲಿಷ್
ಮೇ 13- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14- ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
ಮೇ 15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡಿಟೇಲ್ ಆಟೋಮೊಬೈಲ್.

Leave a Reply

Your email address will not be published. Required fields are marked *