ಕಲಬುರಗಿ ಜಿಲ್ಲೆಯಲ್ಲಿ ಮೇ, ಜೂನ್ ತಿಂಗಳ ಪಡಿತರ ಜೂನ್ ತಿಂಗಳಲ್ಲೆ ವಿತರಣೆ ….ಸುದ್ದಿ ಸಂಗ್ರಹ ಕಲಬುರಗಿ
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಯನ್ನು ಜೂನ್ ತಿಂಗಳಲ್ಲೆ ವಿತರಣೆ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ……ಮೇ ಮತ್ತು ಜೂನ್ ತಿಂಗಳ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ಹಂಚಿಕೆ ನೀಡಲಾಗಿದ್ದು, ಒಟ್ಟು 10 ಕೆ.ಜಿ ಅಕ್ಕಿಯನ್ನು ಜೂನ್ ತಿಂಗಳಲ್ಲಿ ಒಂದೆ ಬಯೋಮೇಟ್ರಿಕ್ ದೃಢೀಕರಣದ ಮೂಲಕ ಪಡೆಯಬಹುದಾಗಿದೆ…..ಯಾವುದೆ ಪಡಿತರ ಚೀಟಿದಾರರು ಯಾವುದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಬೆಲೆ ಅಂಗಡಿ ವರ್ತಕರು ಕಡಿಮೆ ಪ್ರಮಾಣದ ಪಡಿತರ ವಿತರಣೆ ಮಾಡಿದ್ದಲ್ಲಿ ಸಹಾಯವಾಣಿ 1967ಗೆ ಮತ್ತು ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.