ಸುದ್ದಿ ಸಂಗ್ರಹ ಶಹಾಬಾದ
ತಾಲೂಕಿನ ಜನಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ ಮತ್ತು ಆಸ್ಪತ್ರೆಯ ರೋಗಿಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಅವರು, 2024-25ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಪೌರಾಡಳಿತ ಇಲಾಖೆ ಬೆಂಗಳೂರುನಿಂದ ನೇರವಾಗಿ ಗುತ್ತಿ ಬಸವೇಶ್ವರ ಏಜೆನ್ಸಿಯವರು ನಿರ್ವಹಣೆ ಮಾಡಲಿದ್ದಾರೆ ಎಂದರು.
ಕಾಡಾ ಅಧ್ಯಕ್ಷ ಡಾ.ಎಂ.ಎ ರಶೀದ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಕಾಂತ ಮೆಕಾಲೆ, ಪ್ರಮುಖರಾದ ಮರಿಯಪ್ಪ ಹಳ್ಳಿ, ಮೃತ್ಯುಂಜಯ ಸ್ವಾಮಿ ಹಿರೇಮಠ್, ಫಜಲ್ ಪಟೇಲ್, ಅಹಮದ್ ಪಟೇಲ್, ರಾಜು ಮೇಸ್ತ್ರಿ, ರಾಜೇಶ್ ಯೆನಗುಂಟಿಕರ್, ಶರಣು ಪಗಲಾಪುರ್, ಸಾಬೆರಾ ಬೇಗಂ, ಶಿವರಾಜ್ ಕೊರೆ, ಮಮ್ಮದ್ ಮಸ್ತಾನ್ ಮತ್ತು ಸ್ನೇಹಲ್ ಜಾಯಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಾಬಣ್ಣ ಸುಂಕಲಕರ್ ನಿರೂಪಿಸಿ ವಂದಿಸಿದರು.