ಭಾರತದಲ್ಲಿ ಲೈಸನ್ಸ್ ಅಗತ್ಯವಿಲ್ಲದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇದರ ಬೆಲೆ ಫೋನ್​ಗಿಂತ ಕಡಿಮೆ

ರಾಜ್ಯ

ಬೆಂಗಳೂರು: ಒಡಿಸ್ಸೆ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ರೇಸರ್ ನಿಯೋವನ್ನು ಪರಿಚಯಿಸಿದೆ. ಇದನ್ನು ಕಡಿಮೆ ವೇಗದ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್​ನ ಆರಂಭಿಕ ಬೆಲೆ ರೂ.52,000. ಕಡಿಮೆ ಬೆಲೆಗೆ ಉತ್ತಮ ಸ್ಕೂಟರ್ ಬಯಸುವವರಿಗಾಗಿ ಈ ಸ್ಕೂಟರ್ ವಿನ್ಯಾಸಗೊಳಿಸಲಾಗಿದೆ. ರೇಸರ್ ನಿಯೋ, ರೇಸರ್ ಸ್ಕೂಟರ್‌ನ ಹೊಸ ಮತ್ತು ಸುಧಾರಿತ ಮಾದರಿಯಾಗಿದ್ದು, ಇದು ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಇದರ ಬ್ಯಾಟರಿ ಕೂಡ ಮೊದಲಿಗಿಂತ ಉತ್ತಮವಾಗಿದೆ. ಈ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. ವಿಶೇಷವೆಂದರೆ ಇದನ್ನು ಓಡಿಸಲು ಯಾವುದೆ ಪರವಾನಗಿ ಅಗತ್ಯವಿಲ್ಲ.

ಬೆಲೆಗಳು
ಒಡಿಸ್ಸಿ ಎಲೆಕ್ಟ್ರಿಕ್‌ನ ರೇಸರ್ ನಿಯೋ ಎರಡು ಮಾದರಿಗಳಲ್ಲಿ ಲಭ್ಯವಿದೆ, ಮೊದಲ ಮಾದರಿಯ ಬೆಲೆ ರೂ. 52,000 ಎಕ್ಸ್‌ ಶೋರೂಂ ಮತ್ತು ಗ್ರ್ಯಾಫೀನ್ ಬ್ಯಾಟರಿ ಹೊಂದಿದೆ. ಎರಡನೇಯ ಮಾದರಿ ಬೆಲೆ ರೂ.63,000 ಎಕ್ಸ್‌ ಶೋರೂಂ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಐಫೋನ್‌ಗಳು ಸಹ ಈ ಬೆಲೆಯಲ್ಲಿ ಬರುವುದಿಲ್ಲ. ಈ ಸ್ಕೂಟರ್ ಕೆಂಪು, ಬಿಳಿ, ಬೂದು, ಹಸಿರು ಮತ್ತು ಸಯಾನ್‌ನಂತಹ 5 ಬಣ್ಣಗಳಲ್ಲಿ ಲಭ್ಯವಿದೆ. ಈ ಮಾದರಿಯು ಭಾರತದಲ್ಲಿ ಒಡಿಸ್ಸಿಯ150 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ವ್ಯಾಪ್ತಿ
ಒಡಿಸ್ಸಿ ಎಲೆಕ್ಟ್ರಿಕ್‌ನ ಹೊಸ ರೇಸರ್ ನಿಯೋ ಸ್ಕೂಟರ್ ಎರಡು ರೀತಿಯ ಬ್ಯಾಟರಿಗಳೊಂದಿಗೆ ಬರುತ್ತದೆ. ಗ್ರ್ಯಾಫೀನ್ ಬ್ಯಾಟರಿ (60V, 32AH / 45AH) ಒಂದೆ ಚಾರ್ಜ್‌ನಲ್ಲಿ 90-115 ಕಿ.ಮೀ ವರೆಗೆ ಓಡಬಲ್ಲದು, ಹಾಗೆಯೆ ಲಿಥಿಯಂ-ಐಯಾನ್ ಬ್ಯಾಟರಿ (60V, 24AH) ಸಹ ಉತ್ತಮ ವ್ಯಾಪ್ತಿಯನ್ನು ನೀಡುತ್ತದೆ. ಇದು 250W ಮೋಟಾರ್ ಹೊಂದಿದ್ದು, ಇದು 25 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ. ಈ ಸ್ಕೂಟರ್ ಕಡಿಮೆ-ವೇಗದ EV ನಿಯಮಗಳನ್ನು ಪಾಲಿಸುತ್ತದೆ.

ಸ್ಮಾರ್ಟ್ ವೈಶಿಷ್ಟ್ಯಗಳು
ಒಡಿಸ್ಸಿ ರೇಸರ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಅನೇಕ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಸವಾರಿಯನ್ನು ಆರಾಮದಾಯಕವಾಗಿಸುತ್ತದೆ. ಇದು LED ಡಿಜಿಟಲ್ ಮೀಟರ್, ರಿಪೇರಿ ಮೋಡ್, ಕೀಲೆಸ್ ಸ್ಟಾರ್ಟ್/ಸ್ಟಾಪ್, USB ಚಾರ್ಜಿಂಗ್ ಪೋರ್ಟ್, ಸಿಟಿ, ರಿವರ್ಸ್ ಮತ್ತು ಪಾರ್ಕಿಂಗ್ ಮೋಡ್, ಕ್ರೂಸ್ ಕಂಟ್ರೋಲ್, ಲಗೇಜ್ ಇಡಲು ಉತ್ತಮ ಬೂಟ್ ಸ್ಪೇಸ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್ ವಿದ್ಯಾರ್ಥಿಗಳು, ಕೆಲಸ ಮಾಡುವ ಜನರು ಮತ್ತು ವಿತರಣಾ ವ್ಯಕ್ತಿಗಳಿಗೆ ಉತ್ತಮ ಆಯ್ಕೆಯಾಗಿದೆ.

ಕೈಗೆಟುಕುವ ಸ್ಕೂಟರ್
ಒಡಿಸ್ಸಿ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ನೆಮಿನ್ ವೋರಾ ಮಾತನಾಡಿ, ರೇಸರ್ ನಿಯೋ ನಮ್ಮ ವಿಶ್ವಾಸಾರ್ಹ ರೇಸರ್ ಮಾದರಿಯ ಸುಧಾರಿತ ಆವೃತ್ತಿಯಾಗಿದೆ. ನಾವು ಇದರ ವಿನ್ಯಾಸವನ್ನು ಸುಧಾರಿಸಿದ್ದೆವೆ ಮತ್ತು ಇದಕ್ಕೆ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸೇರಿಸಿದ್ದೆವೆ. ಈ ಸ್ಕೂಟರ್ ಸಹ ಕೈಗೆಟುಕುವಂತಿದೆ. ಎಲ್ಲರಿಗೂ ಎಲೆಕ್ಟ್ರಿಕ್ ವಾಹನಗಳನ್ನು ಸುಲಭ ಮತ್ತು ಉಪಯುಕ್ತವಾಗಿಸುವುದು ನಮ್ಮ ಗುರಿಯಾಗಿದೆ. ಒಡಿಸ್ಸಿ ಎಲೆಕ್ಟ್ರಿಕ್ 2 ಕಡಿಮೆ-ವೇಗದ ಸ್ಕೂಟರ್‌ಗಳು, 2 ಹೈ-ವೇಗದ ಸ್ಕೂಟರ್‌ಗಳು, ಬಿ 2 ಬಿ ವಿಭಾಗಕ್ಕೆ ಡೆಲಿವರಿ ಸ್ಕೂಟರ್, ಇವಿ ಸ್ಪೋರ್ಟ್ಸ್ ಬೈಕ್ ಮತ್ತು ದೈನಂದಿನ ಬಳಕೆಗಾಗಿ ಕಮ್ಯೂಟರ್ ಬೈಕ್ ಸೇರಿದಂತೆ 7 ಮಾದರಿಗಳನ್ನು ಹೊಂದಿದೆ.

Leave a Reply

Your email address will not be published. Required fields are marked *