ಬಿಜೆಪಿ ಕಛೇರಿಯಲ್ಲಿ ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ಪುಣ್ಯಸ್ಮರಣೆ

Uncategorized

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಪಕ್ಷದ ಧೀಮಂತ ನಾಯಕ ಮಾಜಿ ಶಾಸಕ ದಿ ವಾಲ್ಮೀಕ ನಾಯಕ ಅವರ 4ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖಂಡರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಾಲ್ಮೀಕ ನಾಯಕ ಅವರು ನಮ್ಮಂತ ಸಾಮಾನ್ಯ ಕಾರ್ಯಕರ್ತರ ದೊಡ್ಡ ಶಕ್ತಿಯಾಗಿದ್ದರು. ಪಕ್ಷದ ತತ್ವ, ಸಿದ್ಧಾಂತಕ್ಕೆ ಕೊನೆವರೆಗೂ ಉಸಿರಾಗಿ ನಡೆದುಕೊಂಡಿದ್ದರು ಎಂದರು.

ಅವರ ದೇಶಪ್ರೇಮ ಹಾಗೂ ಸಮಾಜವನ್ನು ಸಂಘಟಿಸುವ ಶಕ್ತಿ ಇಂದಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಸರ್ವ ಜನರನ್ನು ಸಮಾನರನ್ನಾಗಿ ಕಂಡು ನಾಗರಿಕ ಸಮಾಜಕ್ಕೆ ಮಾದರಿ ನಾಯಕರಾಗಿದ್ದರು.ಅವರು ಪಟ್ಟಣದ ಶ್ರೇಷ್ಠ ಪ್ರಧಾನರು ಎಂದು ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನರಾಗಿದ್ದರು.

ಅವರ ಪಕ್ಷನಿಷ್ಠೆ, ಸರಳ ಸಜ್ಜನಿಕೆ, ಸಮಾಜ ಸೇವೆ ನಮ್ಮೆಲ್ಲರಿಗೆ ಸ್ಪೂರ್ತಿದಾಯಕ, ಆದ್ದರಿಂದ ಅವರು ಇಂದಿಗೂ ಎಲ್ಲರ ಮನಸ್ಸಿನಲ್ಲಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸುವ ಅವರ ಕನಸನ್ನು ನನಸಾಗಿಸಲು ನಾವು ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್’ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,
ಮುಖಂಡರಾದ ಭಗವತ ಸುಳೆ, ಸಿದ್ದಣ್ಣ ಕಲ್ಲಶೆಟ್ಟಿ, ಭೀಮಶಾ ಜೀರೋಳ್ಳಿ, ಶರಣಗೌಡ ಚಾಮನೂರ, ಭೀಮರಾವ ದೊರೆ, ಅರ್ಜುನ ಕಾಳೆಕರ,ಹರಿ ಗಲಾಂಡೆ,ಅಶೋಕ ಪವಾರ, ರಮೇಶ ಜಾಧವ, ಹಣಮಂತ ಚವ್ಹಾಣ, ಯಮನಪ್ಪ ಪುಜಾರಿ, ಕಿಶನ ಜಾಧವ, ಅಂಬದಾಸ ಜಾಧವ, ಗುರುರಾಜ ನಾಯಕ, ರಾಜು ಪವಾರ,ಬಸವರಾಜ ಕಿರಣಗಿ, ಮಲ್ಲಿಕಾರ್ಜುನ ಸಾತಖೇಡ, ವಿಜಯ ಜಾಧವ, ರವಿ ಪವಾರ, ಆನಂದ ಇಂಗಳಗಿ, ಕುಮಾರ ಜಾಧವ, ಢಾಕು ರಾಠೊಡ, ಮಹೇಶ ಮಂತ್ರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *