ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆಧಾರ್‌ ಕಾರ್ಡ್ ಪತ್ತೆ

ಸುದ್ದಿ ಸಂಗ್ರಹ ಮಂಗಳೂರು ಇಲ್ಲಿನ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ರಾಶಿರಾಶಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಸಾವಿರಾರು ಆಧಾರ್ ಕಾರ್ಡ್‌ಗಳು ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಶಾಕ್ ಆಗಿದ್ದು, ತಕ್ಷಣ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸ್ಥಳೀಯರು ಎಲ್ಲಾ ಆಧಾರ್ ಕಾರ್ಡ್‌ ಸಂಗ್ರಹಿಸಿದ್ದಾರೆ. ಆಧಾರ್ ಕಾರ್ಡ್ ದುರುಪಯೋಗ ಅಥವಾ ನಿರ್ಲಕ್ಷ್ಯದ ಬಗ್ಗೆ ಸೂಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ ಖಾದರ್ ಸೂಚಿಸಿದ್ದಾರೆ. […]

Continue Reading

ನಾನು ಗಂಡಸಾಗಿ ಹುಟ್ಟಿರುವುದೆ ತಪ್ಪಾ ? ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆಯ ಮುಖ್ಯಶಿಕ್ಷಕ

ಸುದ್ದಿ ಸಂಗ್ರಹ ಕೊಪ್ಪಳಜಿಲ್ಲೆಯ ಕುಕನೂರ ತಾಲೂಕಿನ ಕೋಮಲಾಪುರ ಗ್ರಾಮದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಅವರ ವೈಯಕ್ತಿಕ ಬದುಕಿನ ವಿವಾದ ಶಾಲಾ ಆವರಣದಲ್ಲಿ ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ. ತಮ್ಮ ಪತ್ನಿ ಪ್ರತಿದಿನ ಶಾಲೆಗೆ ಬಂದು ಕಿರಿಕ್​​ ಮಾಡುವುದು, ತಮ್ಮ ವೃತ್ತಿ ಬದುಕಿಗೆ ಮತ್ತು ಸಾರ್ವಜನಿಕ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಶಿಕ್ಷಕ ಸಿದ್ದೇಶ ಶೆಟ್ಟರ್ ಆರೋಪಿಸಿದ್ದಾರೆ. ಸಿದ್ದೇಶ ಶೆಟ್ಟರ್ ಅವರ ಹೇಳಿಕೆಯ ಪ್ರಕಾರ, ತಮ್ಮ ಪತ್ನಿ ತಮ್ಮನ್ನು ಮನೆಯಲ್ಲಿ ಕೈದಿ ತರಹ ಇಟ್ಟುಕೊಂಡಿದ್ದು, ಕುಟುಂಬದ […]

Continue Reading

9 ರೂ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್‌: 10 ರೂ. ಲೋನ್ ಕಟ್ಟಿದ್ದಿವಿ, 66 ಪೈಸೆ ವಾಪಸ್ ಕೊಡಿ ಅಂತ ಗ್ರಾಹಕ ಪಟ್ಟು

ಸುದ್ದಿ ಸಂಗ್ರಹ ಹಾಸನ9 ರೂ 34 ಪೈಸೆ ಸಾಲ ಕಟ್ಟುವಂತೆ ಕೆನರಾ ಬ್ಯಾಂಕ್‌ನಿಂದ ಕರೆ ಮಾಡಿದ ಹಿನ್ನೆಲೆಯಲ್ಲಿ 10 ರೂ ಲೋನ್ ಕಟ್ಟಿದ್ದಿವಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು ಹಿಡಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಎಂಬವರು ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌‌ನಿಂದ 50 ಸಾವಿರ ಲೋನ್ ಪಡೆದು ಸಂಪೂರ್ಣ ಹಣ ಬಡ್ಡಿ ಸಮೇತ ಕಟ್ಟಿದ್ದರು. ನಿನ್ನೆ ಏಕಾಏಕಿ ಕರೆ ಮಾಡಿ 9 ರೂ 34 ಪೈಸೆ ಸಾಲ […]

Continue Reading

ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಗುಳುಂ: ಸಿಬ್ಬಂದಿ ವಿರುದ್ಧ ಶಂಕೆ

ಸುದ್ದಿ ಸಂಗ್ರಹ ಹಾಸನ ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು ತಾವೆ ಲಪಟಾಯಿಸಿ ಕಂಪನಿಗೆ ಸುಳ್ಳು ಲೆಕ್ಕ ನೀಡಿರುವ ಗಂಭೀರ ಆರೋಪ ಸಿಎಂಎಸ್ ಕಂಪನಿ ವಿರುದ್ಧ ಕೇಳಿ ಬಂದಿದೆ. ಕಂಪನಿಯ ಸಿಬ್ಬಂದಿ ನಂದೀಶ್ ಹಾಗೂ ಮಧು ಎಂಬವರು ಕೋಟ್ಯಂತರ ರೂ. ಹಣ ನುಂಗಿ ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಕಂಪನಿಯ ಅಧಿಕಾರಿಗಳು ಆಡಿಟ್ ಮಾಡಿಸುತ್ತಿದ್ದಾರೆ. ಹಾಸನ ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಶ್ ಮ್ಯಾನೆಜ್‍ಮೆಂಟ್ ಸರ್ವಿಸಸ್ ಕಚೇರಿಯಿದ್ದು, ಪ್ರತಿನಿತ್ಯ ನಗರದಲ್ಲಿರುವ ಕೆನರಾ ಬ್ಯಾಂಕ್, ಎಸ್‍ಬಿಐ, ಬ್ಯಾಂಕ್ […]

Continue Reading

ಗದಗ: ಶಿವರಾತ್ರಿಯಂದೆ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು

ಸುದ್ದಿ ಸಂಗ್ರಹ ಗದಗ ನಾಡಿನೆಲ್ಲಡೆ ಮಹಾ ಶಿವರಾತ್ರಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಶಿವನ ಆರಾಧನೆ ದಿನವೆ ದುಷ್ಕರ್ಮಿಗಳು ಶಿವಲಿಂಗ ಹಾಗೂ ನಂದಿ ವಿಗ್ರಹ ಭಗ್ನಗೊಳಿಸಿದ ಘಟನೆ ಮುಂಡರಗಿ ತಾಲೂಕಿನ ಶಿಂಗಟಾಲೂರ ಬಳಿ ನಡೆದಿದೆ. ಗ್ರಾಮದ ಹೊರವಲಯದ ಶ್ರೀ ರಾಮಲಿಂಗೇಶ್ವರ, ನಂದಿ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಈ ದುಷ್ಕೃತ್ಯ ಮೆರೆದಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆ ಗ್ರಾಮಸ್ಥರು ಶನಿವಾರ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಹಚ್ಚಿ ಬಂದಿದ್ದರು. ಬೆಳಿಗ್ಗೆ ಪೂಜೆಗೆ ತೆರಳಿದಾಗ ಮೂರ್ತಿ ಭಗ್ನವಾಗಿರುವ ವಿಷಯ ಬೆಳಕಿಗೆ ಬಂದಿದೆ. […]

Continue Reading

ಹೊಸ ಜಿಲ್ಲೆ ವಿಜಯನಗರ ಪ್ರಗತಿಗೆ 394 ಕೋಟಿ ರೂ. ಒದಗಿಸಿ

ಸುದ್ದಿ ಸಂಗ್ರಹ ಹಂಪಿ ವಿಜಯನಗರವು ನೂತನ ಜಿಲ್ಲೆಯಾಗಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಮುಂಬರುವ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಮೀಸಲಿಡಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದರು. ಶುಕ್ರವಾರ ರಾತ್ರಿ ಹಂಪಿ ಉತ್ಸವದ ಮೊದಲ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಕಳೆದ 3 ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಈ ಉತ್ಸವ ಆಚರಿಸಲಾಗುತ್ತಿದೆ. ಹಿಂದೆ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ […]

Continue Reading

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಸುದ್ದಿ ಸಂಗ್ರಹ ಗದಗ ಪುರಾತನ ದೇಗುಲಗಳ ಊರು ಎಂದೆ ಖ್ಯಾತವಾಗಿರುವ ಲಕ್ಕುಂಡಿಯಲ್ಲಿ ಬಂಗಾರದ ನಿಧಿ ದೊರೆತ ಬಳಿಕ, ಅದೆ ಗ್ರಾಮದ ಮನೆಯೊಳಗೆ ಹುದುಗಿ ಹೋಗಿದ್ದ ಮತ್ತು ಅಭಿವೃದ್ಧಿಯಾಗದೆ ಉಳಿದಿದ್ದ 5 ದೇವಾಲಯಗಳು ಪತ್ತೆಯಾಗಿವೆ. 5 ದೇವಾಲಯಗಳಿಗೆ, 5 ಬಾವಿಗಳಿಗೆ ಸಚಿವ ಎಚ್.ಕೆ ಪಾಟೀಲ್ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ. 10 ಅಡಿ ಆಳದಲ್ಲಿ ಮುಚ್ಚಿಹೋಗಿದ್ದ ಚೌಕಿಮಠದ ಅರ್ಧಲಿಂಗೇಶ್ವರ ದೇವಾಲಯ, ವಿದ್ಯಾಶಂಕರಲಿಂಗ ದೇವಾಲಯ, ಸೋಮಲಿಂಗೇಶ್ವರ ದೇವಾಲಯಗಳು ಹುದುಗಿ ಹೋಗಿವೆ. ಸಮರ್ಪಕ ಪರಿಹಾರ ಕೊಟ್ಟರೆ ಮನೆ ಬಿಡುವುದಾಗಿಯೂ ಕುಟುಂಬಸ್ಥರು ಹೇಳಿದ್ದಾರೆ. ಕಲಾಕೃತಿಯಿರುವ […]

Continue Reading

ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ: ಮಗು ಸೇರಿ ಮೂವರಿಗೆ ಗಾಯ

ಸುದ್ದಿ ಸಂಗ್ರಹ ಮೈಸೂರು ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಬಳಿ ನಡೆದಿದೆ. ಚಿರತೆ ದಾಳಿಯಿಂದ ಬೈಕ್‌ನಲ್ಲಿದ್ದ ಮಗು ಮತ್ತು ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚುಂಚನಹಳ್ಳಿ ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಹಾಗೂ ಮಗು ಗಂಭೀರ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ದಾಳಿ ನಡೆಸಿದ ಚಿರತೆ ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Continue Reading

ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್: ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 8.76 ಲಕ್ಷ ರೂ ದಂಡ

ಸುದ್ದಿ ಸಂಗ್ರಹ ಬೆಳಗಾವಿ ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. 8 ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ ನಾಲ್ವರಿಗೆ ಕಠಿಣ ಶಿಕ್ಷೆ ಪ್ರಕಟಿಸಲಾಗಿದೆ. ಸಾಕೀಬ್ ನಿಜಾಮಿ (22), ರವಿ ನಾಯ್ಯೋಡಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, 8.76 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ್, ಅಶುತೋಷ್ ಪಾಟೀಲ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಈ ಇಬ್ಬರಿಗೂ […]

Continue Reading

ಕಲಬುರಗಿ: 10 ಸಾವಿರ ರೂ ಲಂಚ ಪಡೆಯುತ್ತಿದ್ದ ಎಫ್‌ಡಿಎ ಲೋಕಾಯುಕ್ತ ಬಲೆಗೆ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯ ಕಮಲಾಪುರ ತಹಸೀಲ್ದಾರ್ ಕಚೇರಿಯಲ್ಲಿ 10 ಸಾವಿರ ರೂ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಶಿಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಮೀನು ದಾಖಲೆ ಪತ್ರ ನೀಡಲು ಶಶಿಕುಮಾರ್, ಕಿಶನ್ ರಾಠೋಡ ಅವರಿಗೆ 20 ಸಾವಿರಕ್ಕೂ ಹೆಚ್ಚು ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಕಿಶನ್ ರಾಠೋಡ ದೂರು ನೀಡಿದ್ದರು. ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತರು, ಹಣ ಪಡೆಯುತ್ತಿದ್ದ ಆರೋಪಿ ಶಶಿಕಾಂತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. […]

Continue Reading