ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲೆಯಾಳಂ ನಟ, ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ

ಸುದ್ದಿ ಸಂಗ್ರಹ ಉಡುಪಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲೆಯಾಳಂ ನಟ ಮತ್ತು ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ಮತ್ತು ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ ನೀಡಿದ್ದ ಸುರೇಶ್‌ ಗೋಪಿ ಅವರು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ತೀರ್ಥರ ಪರ್ಯಾಯ ಸಮಾಪ್ತಿ ವೇಳೆ ಭೇಟಿ ಮಾಡಲಾಯಿತು. ಕೇಂದ್ರ ಸಚಿವರಿಗೆ ಮಠದ ವತಿಯಿಂದ […]

Continue Reading

ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ: ಐವರು ಅರೆಸ್ಟ್‌

ಸುದ್ದಿ ಸಂಗ್ರಹ ಕೋಲಾರ ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು ತಯಾರು ಮಾಡುತ್ತಿದ್ದ ಅಡ್ಡೆ ಮೇಲೆ ಕೆಜಿಎಫ್ ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರ್ರ ಮೂಲದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಜಿಎಫ್ ತಾಲೂಕಿನ ಬಳ್ಳಗೆರೆ ಗ್ರಾಮದ ಬಳಿ ಅಕ್ರಮ ಕಲಬೆರಕೆ ಹಾಲು ತಯಾರಿಸುತ್ತಿದ್ದರು. ಬಂಧಿತರಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಉಪಕರಣ ಮತ್ತು ಕಲಬೆರೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಮಾಯಲ್, ಮಿಲ್ಕ್ ಪೌಡರ್, […]

Continue Reading

ಪಾಲಿಕೆ ಆಯುಕ್ತರ ಡಿಪಿ ಹಾಕೊಂಡು ಉಪ ಆಯುಕ್ತರಿಗೆ ಹಣಕ್ಕೆ ಮೆಸೇಜ್‌: ಸೈಬರ್‌ ಖದೀಮರ ಹೊಸ ಆಟ

ಸುದ್ದಿ ಸಂಗ್ರಹ ಬೆಳಗಾವಿ ಸೈಬರ್‌ ವಂಚಕರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ವಂಚನೆಗಿಳಿದಿದ್ದಾರೆ. ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಡಿಪಿ ಹಾಕಿಕೊಂಡು ಉಪ ಆಯುಕ್ತ ಉದಯಕುಮಾರ್ ತಳವಾರಗೆ ಹಣಕ್ಕಾಗಿ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಿದ್ದಾರೆ. ಮೆಸೇಜ್‌ನಲ್ಲಿ ತುರ್ತಾಗಿ 50 ಸಾವಿರ ರೂ. ಅಕೌಂಟ್‍ಗೆ ಹಾಕಿ. ನಾನು ಮೀಟಿಂಗ್‍ನಲ್ಲಿರುವೆ, ಹಣ ಹಾಕಿ ಸ್ಕ್ರೀನ್ ಶಾಟ್ ಕಳಿಸಿ ಎಂದು ವಂಚಕರು ಮೆಸೆಜ್‌ ಕಳುಹಿಸಿದ್ದಾರೆ. ಮೆಸೇಜ್ ನೋಡಿ ಕಕ್ಕಾಬಿಕ್ಕಿಯಾದ ಉಪ ಆಯುಕ್ತ ಉದಯಕುಮಾರ್ ತಳವಾರ, ಹಣ ಕೇಳಿದ ನಂಬರ್‌ಗೆ ವಾಟ್ಸಪ್ ಕಾಲ್ […]

Continue Reading

ನಿನ್ನೆ ಅಧಿಕಾರ ಸ್ವೀಕಾರ, ಇಂದು ತಲೆದಂಡ: ಬಳ್ಳಾರಿ ಎಸ್‌ಪಿ ಅಮಾನತು

ಸುದ್ದಿ ಸಂಗ್ರಹ ಬೆಂಗಳೂರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್‌ಪಿ ತಲೆದಂಡವಾಗಿದೆ. ನಿನ್ನೆ ಜ.1ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈಗ ಬ್ಯಾನರ್‌ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ. ಬಳ್ಳಾರಿ ರೇಂಜ್ ಡಿಐಜಿ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ […]

Continue Reading

ನನ್ನ ಹತ್ಯೆಗೆ ನಾರಾಭರತ್ ರೆಡ್ಡಿ ಯತ್ನ: ಬುಲೆಟ್‌ ಪ್ರದರ್ಶಿಸಿದ ರೆಡ್ಡಿ

ಸುದ್ದಿ ಸಂಗ್ರಹ ಬಳ್ಳಾರಿ ಬಳ್ಳಾರಿ‌ ನಗರ ಶಾಸಕ ನಾರಾ ಭರತ್ ರೆಡ್ಡಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮನೆಯ ಮುಂದೆ ನಡೆದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಕ್ಷೇತ್ರದ ಕೆಲಸಕ್ಕೆ ಹೋಗಿದ್ದೆ. ನಾನು ಇಲ್ಲದ ಸಮಯದಲ್ಲಿ ಭರತ್‌ ರೆಡ್ಡಿ ಬೆಂಬಲಿಗರು ಮನೆಯ ಮುಂದೆ ಕುರ್ಚಿ ಹಾಕಿ ಗಲಾಟೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ನಾನು ಶ್ರೀರಾಮುಲು ಅವರಿಗೆ ತಿಳಿಸಿದ್ದೆ. ಅವರು […]

Continue Reading

ವಿಜಯಪುರ: ಪ್ರತಿಭಟನೆ ತಡೆಯಲು ಮುಂದಾದ PSI, ಪೇದೆಗೆ ಸ್ವಾಮಿಜಿ ಕಪಾಳಮೋಕ್ಷ

ಸುದ್ದಿ ಸಂಗ್ರಹ ವಿಜಯಪುರ ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿಗೆ ವಿರೋಧಿಸಿ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಪ್ರತಿಭಟನೆಯಲ್ಲಿ ಸ್ವಾಮಿಜಿಗಳು ಪಾಲ್ಗೊಂಡಿದ್ದಾರೆ. ಇದೆ ವೇಳೆ ಪ್ರತಿಭಟನಾಕಾರರು ಸಚಿವ ಎಂ.ಬಿ ಪಾಟೀಲ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನನಿರತರನ್ನು ಸೊಲ್ಲಾಪುರ ರಸ್ತೆಯಲ್ಲಿ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕಾಟ ತಳ್ಳಾಟ ನಡೆದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಗನಬಸವ ಸ್ವಾಮಿಜಿ ಸಿಟ್ಟಿಗೆದ್ದು ಪಿಎಸ್ಐ ಮತ್ತು ಪೊಲೀಸ್ ಪೇದೆಗೆ […]

Continue Reading

ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರ: ಮುಡುಬಿ ಗುಂಡೇರಾವ

ಸುದ್ದಿ ಸಂಗ್ರಹ ಕಲಬುರಗಿ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಆಳಿದ ಪುಣ್ಯ ನೆಲ, ಪ್ರಾಚೀನ ಕಾಲದಿಂದಲೂ ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರವಾಗಿದೆ ಎಂದು ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು. ಜಿಲ್ಲೆಯ ಜೇವರ್ಗಿ ಪಟ್ಟಣದ ಹನುಮಾನ ಮಂದಿರದ ಪರಿಸರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಹಮ್ಮಿಕೊಂಡಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -46 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಗರನಾಡಿನಲ್ಲಿ ದೊರೆಯುವ ಪಾಚೀನ ಸ್ಮಾರಕಗಳು, ಕೋಟೆಕೊತ್ತಲಗಳು, ದೇವಾಲಯಗಳು, ಶಾಸನ, ವೀರಗಲ್ಲುಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಕಲ್ಯಾಣ […]

Continue Reading

ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ: ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಜನರಿಗೆ ಗಾಯ

ಸುದ್ದಿ ಸಂಗ್ರಹ ಹಾಸನ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಬಸ್ ಚಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಬೈಪಾಸ್‌ನಲ್ಲಿ ನಡೆದಿದೆ. ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಾಳುಗಳ ಪೈಕಿ 13 ಜನ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಉಳಿದವರಿಗೆ ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಬಸ್ ಹಾಗೂ ಲಾರಿ ಬೆಂಗಳೂರಿನಿಂದ ಹಾಸನದ […]

Continue Reading

ಖಾಸಗಿ ಬಸ್‌ ದುರಂತ– ಏನಾಗಿದೆ ಅಂತ ಗೊತ್ತಾಗಲಿಲ್ಲ: ಶಾಕ್‌ನಲ್ಲೆ ವಿವರಿಸಿದ ಕ್ಲೀನರ್‌

ಸುದ್ದಿ ಸಂಗ್ರಹ ಚಿತ್ರದುರ್ಗಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಭೀಕರ ಬಸ್‌ ದುರಂತದಲ್ಲಿ 4 ಜನ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್‌ನ ಕ್ಲೀನರ್‌ ಸಾಧಿಕ್‌, ನಮಗೆ ಏನಾಯ್ತು ಅಂತಾನೆ ಗೊತ್ತಾಗಲಿಲ್ಲ ಎಂದು ಶಾಕ್‌ನಲ್ಲೆ ಮಾತಾಡಿದ್ದಾರೆ. ರಾತ್ರಿ 1‌.30 ರಿಂದ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ನಾನು ರಾತ್ರಿ ಮಲಗಿದ್ದೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಿಂದ ಹೊರಗೆ ಬಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿದಿದೆ. ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ […]

Continue Reading

ನ್ಯೂಜಿಲೆಂಡ್ ವರ, ಕರ್ನಾಟಕದ ವಧು: ಸಾಗರದಾಚೆಗಿನ ವಿವಾಹಕ್ಕೆ ಸಾಕ್ಷಿಯಾದ ಬೆಣ್ಣೆನಗರಿ

ಸುದ್ದಿ ಸಂಗ್ರಹ ದಾವಣಗೆರೆ ನ್ಯೂಜಿಲೆಂಡ್ ವರ, ಕರ್ನಾಟಕದ ವಧು. ಇವರಿಬ್ಬರ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದು ಬೆಣ್ಣೆನಗರಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಪೂಜಾ ನಾಗರಾಜ್ ಹಾಗೂ ನ್ಯೂಜಿಲೆಂಡ್‌ನ ಕ್ಯಾಂಬೆಲ್ ವಿಲ್ ವರ್ಥ್ ಹಿಂದೂ ಸಂಪ್ರದಾಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಪೂಜಾ ನಾಗರಾಜ್ ದಂತವೈದ್ಯೆ. ಕ್ಯಾಂಬೆಲ್ ವಿಲ್ ವರ್ಥ್ ಸಾಫ್ಟ್‌ವೇರ್‌ ಇಂಜಿನಿಯರ್. ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೂಜಾ ತಂದೆ ನಾಗರಾಜ್ ಸಿವಿಲ್ ಇಂಜಿನಿಯರ್ ಆಗಿದ್ದು, 2005 ರಲ್ಲಿ ನ್ಯೂಜಿಲೆಂಡ್‌ಗೆ ಹೋಗಿ […]

Continue Reading