ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಉದ್ಯೋಗವಕಾಶ: ಹಳ್ಳಿ

ಸುದ್ದಿ ಸಂಗ್ರಹ ಶಹಾಬಾದ್ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರವು ಜ್ಞಾನಾರ್ಜನೆ, ಉದ್ಯೋಗವಕಾಶ ಮತ್ತು ಸೃಜನಶೀಲತೆಗೆ ಅಪಾರ ಅವಕಾಶ ಒದಗಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮರಿಯಪ್ಪಾ ಹಳ್ಳಿ ಹೇಳಿದರು. ನಗರದ ಕೂಡಲಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 5ನೇ ದಿನದ ವಿಶೇಷ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಎ.ಐ ಯುಗದಲ್ಲಿ ಮಾಧ್ಯಮಗಳ ಮೂಲಕ ನೈಜ-ವೃತ್ತಿಪರ ಕೋರ್ಸ್’ಗಳ ಮಾಹಿತಿ ಮತ್ತು […]

Continue Reading

ಶಹಾಬಾದ್: ಎಮ್‌ಸಿಸಿ ಶಾಲೆಗೆ ಶೇ.97.83 ಫಲಿತಾಂಶ

ಸುದ್ದಿ ಸಂಗ್ರಹ ಶಹಾಬಾದ್ನಗರದ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್’ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆಯ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಶಾಲೆಯ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 64 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 27 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 17 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಒಟ್ಟು 138 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 135 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ‌.97.83 ಫಲಿತಾಂಶ ಬಂದಿದೆ. ಜೋಯಾ ಮಲಿಕ್ 603 (96.48), ಸಮೃದ್ಧಿ ಸುಗಂಧಿ 599 […]

Continue Reading

ಕಣ್ಣಿನ ಉಚಿತ ತಪಾಸಣೆ ಶಿಬಿರ

ಸುದ್ದಿ ಸಂಗ್ರಹ ಶಹಾಬಾದ್ನಗರದ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಇತ್ತೀಚೆಗೆ ಕರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಕಡಗಂಚಿ, ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಚಿತ್ತಾಪುರ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಹಾಗೂ ಸೇಂಟ್ ಥಾಮಸ್ ಚರ್ಚ್ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಫಾದರ್ ವಿಲಿಯಂ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಣ್ಣುನಮ್ಮ ದೇಹದ ಪ್ರಮುಖ ಅಂಗ. ಅದರ […]

Continue Reading

ಸಮಾನತೆಯ ಹರಿಕಾರ ವಿಶ್ವಮಾನವ ಬಸವಣ್ಣ

ಸುದ್ದಿ ಸಂಗ್ರಹ ಶಹಾಬಾದ ಮನುಷ್ಯನಿಗೆ ಹುಟ್ಟು ಸಾವು ಸ್ವಾಭಾವಿಕ, ಆದರೆ ಬದುಕಿದ್ದಾಗ ನಾಲ್ಕು ಜನರಿಗಾಗಿ ಉಪಯೋಗವಾಗುವಂತಹ ಕೆಲಸ ಮಾಡಿದ್ದರೆ, ಆತ ಸತ್ತ ನಂತರವೂ ಬದುಕಿರುತ್ತಾನೆ. ಅಂತಹ ಮಹತ್ವದ ಕೆಲಸ ಬಸವಣ್ಣನವರು ಮಾಡಿದ್ದು, ಇಂದು ಇಡಿ ವಿಶ್ವವೇ ಬಸವಣ್ಣನವರನ್ನು ವಿಶ್ವಮಾನವ ಎಂದು ಕೊಂಡಾಡುತ್ತಿದೆ ಎಂದು ಹಡಪದ ಅಪ್ಪಣ್ಣ ಮಠದ ಪೀಠಾಧಿಪತಿ ರಾಜಶಿವಯೋಗಿ ಪೂಜ್ಯರು ಹೇಳಿದರು.  ನಗರದ ಹಳೆ ಶಹಾಬಾದ ಬಡಾವಣೆಯಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಘಟಕ ಮತ್ತು ವೀರಭದ್ರೇಶ್ವರ ಜಾರಿಟೇಬಲ್ ಟ್ರಸ್ […]

Continue Reading

ಶಹಾಬಾದ್: ಮಹರ್ಷಿ ಭಗೀರಥ ಜಯಂತಿ ಆಚರಣೆ

ಸುದ್ದಿ ಸಂಗ್ರಹ ಶಹಾಬಾದ್ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರೇಡ್ -2 ತಹಸೀಲ್ದಾರ್ ಗುರುರಾಜ ಸಂಗಾವಿ, ಅಧಿಕಾರಿಗಳಾದ ಅಣವೀರಪ್ಪಾ, ವೀರಭದ್ರಪ್ಪ, ಉಪ್ಪಾರ ಸಮಾಜದ ಅಧ್ಯಕ್ಷ ವಸಂತ ಚೂರಿ, ಪ್ರಮುಖರಾದ ಹಣಮಂತ ಶಾಲಿ, ಪ್ರಕಾಶ ಗೋಗಿ, ಚಂದ್ರಶೇಖರ ನೀಡಲ್ ಸೇರಿದಂತೆ ಅನೇಕರು ಇದ್ದರು.

Continue Reading

ಪುಸ್ತಕಗಳು ದೇಶ ಕಟ್ಟುವ ಸಾಧನಗಳು: ಎಚ್.ಬಿ ಪಾಟೀಲ

ಸುದ್ದಿ ಸಂಗ್ರಹ ಶಹಾಬಾದ್ಪುಸ್ತಕಗಳು ಕೇವಲ ಅಕ್ಷರಗಳ ಗುಚ್ಛವಲ್ಲ, ಅವು ಜ್ಞಾನ, ಮೌಲ್ಯ ಮತ್ತು ಸಂಸ್ಕೃತಿಯ ವಾಹಕಗಳು. ನಾಗರಿಕತೆ ಮತ್ತು ಬ್ರಹ್ಮಾಂಡದ ಅರಿವು ಮೂಡಿಸುವ ಮೂಲಕ ಸದೃಢ ಮಾನವ ಸಂಪನ್ಮೂಲ ನಿರ್ಮಿಸಿ, ದೇಶವನ್ನು ಕಟ್ಟುವ ಶಕ್ತಿ ಪುಸ್ತಕಗಳಿಗಿದೆ ಎಂದು ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ ಪಾಟೀಲ ಹೇಳಿದರು. ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರ, ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಪುಸ್ತಕ ದಿನಾಚರಣೆ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ […]

Continue Reading

ಶಹಾಬಾದ: ವಿಶ್ವ ಭೂಮಿ ದಿನ ಆಚರಣೆ

ಸುದ್ದಿ ಸಂಗ್ರಹ ಶಹಾಬಾದ ನಗರದ ಹೈ.ಕ ಶಿ‌ಕ್ಷಣ ಸಂಸ್ಥೆಯ ಎಸ್.ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ಹಿರೇಮಠ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮಣ ರಾಠೋಡ, ಡಾ.ಎಚ್.ವಿ ಸೇಡಂಕರ್, ಡಾ.ಸುರೇಖಾ ನಾಟೇಕರ್, ಡಾ.ಕಾವೇರಿ, ಜ್ಯೋತಿ ಗಂಟಿಮಠ, ನಾಗರಾಜ ದೇವತ್ಕಲ್, ಸಾಯಿರಾಮ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Continue Reading

ಬಿಜೆಪಿ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಆಚರಣೆ‌

ಸುದ್ದಿ ಸಂಗ್ರಹ ಶಹಾಬಾದ್ನಗರದ ತಾಲೂಕು ಬಿಜೆಪಿ ಕಚೇರಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೊಳಕರ, ಅ.ಭಾ ವೀರಶೈವ ಮಹಾಸಭಾದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಮುಖಂಡರಾದ ದೇವದಾಸ ಜಾಧವ, ಅರುಣ ಪಟ್ಟಣಕರ, ಭಿಮರಾವ ಸಾಳೂಂಕೆ, ಗಿರಿಮಲ್ಲಪ್ಪ ವಳಸಂಗ ಸೇರಿದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ಶಹಾಬಾದ್: ಸರ್ಕಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ 

ಶಹಾಬಾದ: ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಆಯುಕ್ತರಿಗೆ ಎಸ್’ಯುಸಿಐ(ಸಿ) ಪಕ್ಷದ ಶಹಾಬಾದ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.      ಈ ಸಂದರ್ಭದಲ್ಲಿ ಕಾ.ಗಣಪತಿರಾವ್ ಮಾನೆ, ಕಾ.ರಾಘವೇಂದ್ರ ಎಂ.ಜಿ, ಕಾ.ಜಗನ್ನಾಥ್ ಎಸ್.ಎಚ್, ಕಾ.ತಿಮ್ಮಣ್ಣ ಮಾನೆ, ಕಾ.ನೀಲಕಂಠ ಹುಲಿ, ರಮೇಶ ಇದ್ದರು.

Continue Reading

ಕಲಬುರಗಿ: ವಾಹನ ಡಿಕ್ಕಿ ಹೊಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಸಾವು

ಸುದ್ದಿ ಸಂಗ್ರಹ ಕಲಬುರಗಿವಾಹನ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್‌ ಕಾನ್‌ಸ್ಟೆಬಲ್‌ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ್ (ಬಿ) ಗ್ರಾಮದ ಬಳಿ ನಡೆದಿದೆ. ಧರೆಪ್ಪ ಅಂಜುಟಗಿ (26) ಮೃತ KSRP ಪೇದೆ. ಧರೆಪ್ಪ ಕಲಬುರಗಿಯಿಂದ ಶಿರವಾಳ್ ಗ್ರಾಮಕ್ಕೆ ಹೊರಟಿದ್ದರು. ಗೊಬ್ಬರ (ಬಿ) ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪೊಲೀಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. […]

Continue Reading