ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೆನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಸುದ್ದಿ ಸಂಗ್ರಹ ಕಾರವಾರ ಹೆರಿಗೆ ಆಸ್ಪತ್ರೆಯಲ್ಲಿ ಬಡವರ ಹತ್ತಿರ ಹಣ ಸುಲಿಗೆ ಮಾಡಿದರೆ ಕೈಕಾಲು ಮುರಿಯುತ್ತೆನೆ. ನನ್ಮೇಲೆ ಕ್ರಿಮಿನಲ್ ಕೇಸ್​ ಆದರೂ ಪರವಾಗಿಲ್ಲ ಎಂದು ಶಾಸಕ ಆರ್​​ವಿ ದೇಶಪಾಂಡೆ ವೈದ್ಯರಿಗೆ ಖಡಕ್​​ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷ ಸಮಿತಿ ಸಭೆಯಲ್ಲಿ ವೈದ್ಯರಾದ ಡಾ.ಅಖಿಲ್ ಕಿತ್ತೂರು​​ ಮತ್ತು ಡಾ.ಕೀರ್ತಿಗೆ ತರಾಟೆ ತೆಗೆದುಕೊಂಡಿದ್ದಾರೆ. ವೈದ್ಯರ ಚಳಿ ಬಿಡಿಸಿದ ಶಾಸಕ ಆರ್​​ವಿ ದೇಶಪಾಂಡೆಹೆರಿಗೆ ಮಾಡಿದರೆ ಯಾಕೆ ಹಣ ಪಡೆಯುತ್ತಿರಿ ಎಂದು ಸಭೆಯಲ್ಲಿ ಶಾಸಕ […]

Continue Reading

ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಡ್ರಗ್​​ ಕಂಟ್ರೋಲರ್

ಸುದ್ದಿ ಸಂಗ್ರಹ ಕೋಲಾರಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಜಿಲ್ಲಾ ಡ್ರಗ್​​ ಕಂಟ್ರೋಲರ್​​ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಮುಖಂಡ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಅನ್ವಯ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಾಲೂರು […]

Continue Reading

ಇರಾನ್‌ ಯುದ್ಧ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದ್ ಭೀತಿ

ಸುದ್ದಿ ಸಂಗ್ರಹ ಮಂಗಳೂರು ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದೀಗ ಕರಾವಳಿಯ ಪ್ಲಾಸ್ಟಿಕ್ ಉದ್ಯಮದ ಮೇಲೆ‌ ಭಾರಿ ಹೊಡೆತ ಬಿದ್ದಿದೆ. ಕರಾವಳಿಯ ಪ್ಲಾಸ್ಟಿಕ್ ಪ್ಯಾಕ್ಟರಿಗಳು ಬಂದ್ ಆಗುವ ಭೀತಿ ಎದುರಾಗಿದೆ. ಪೆಟ್ರೋಲಿಯಂ ಬೈ ಪ್ರಾಡೆಕ್ಟ್‌ನ‌ ಕಚ್ಚಾ ವಸ್ತುವಿನಿಂದ ತಯಾರಿಸಲಾಗುವ ಪ್ಲಾಸ್ಟಿಕ್ ಉತ್ಪನ್ನಗಳ ಸುಮಾರು 50 ಕ್ಕೂ ಹೆಚ್ಚು ಫ್ಯಾಕ್ಟರಿಗಳು ಮಂಗಳೂರು ಹಾಗೂ ಉಡುಪಿಯಲ್ಲಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚ ಭರಿಸಲು ಫ್ಯಾಕ್ಟರಿಗಳು ಪರದಾಡುತ್ತಿದೆ‌. ಕಚ್ಚಾ ತೈಲದ ಬೆಲೆ‌ ಪ್ರತಿ […]

Continue Reading

ದೇಶದಲ್ಲಿ ಸಿಲಿಂಡರ್ ಎಮರ್ಜೆನ್ಸಿಗೆ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ: ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಬೀದರ್ ಇರಾನ್ ಮತ್ತು ಇಸ್ರೆಲ್ ವಾರ್‌ನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿಗೆ ಪ್ರಧಾನಿ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಬೀದರ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಲಿಂಡರ್ ಎಮರ್ಜೆನ್ಸಿ ಕುರಿತು ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭವಾಗೋದಕ್ಕೂ ಮೊದಲು ಇಸ್ರೆಲ್‌ನಲ್ಲಿ ಏನು ಕೆಲಸ ಇತ್ತು, ಏಕಾಏಕಿ ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ರಿ. ಏನು ಸಮಸ್ಯೆ ಇಲ್ಲಾ ಅಂದರೆ […]

Continue Reading

JEEಯಲ್ಲಿ ಮಗ ದೇಶಕ್ಕೆ ಟಾಪರ್: 4 ಸಾವಿರ ಶಾಲಾ ಮಕ್ಕಳಿಗೆ ಸಿಹಿಯೂಟ ಹಾಕಿ ಸಂಭ್ರಮಿಸಿದ ತಾಯಿ

ಸುದ್ದಿ ಸಂಗ್ರಹ ಮೈಸೂರು‌ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಬಿ.ಆರ್ಕ್, ಬಿ ಪ್ಲಾನಿಂಗ್‌ ಫೇಸ್ 1ರಲ್ಲಿ ಮಗ ದೇಶಕ್ಕೆ ಟಾಪರ್ ಆದ ಖುಷಿಯಲ್ಲಿ ತಾಯಿ ಶಾಲಾ ಮಕ್ಕಳಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದ ನಿವಾಸಿಗಳಾಗಿರುವ ಎ.ಸಿ ನೇತ್ರಾವತಿ ಮತ್ತು ಎಂ.ಡಿ ಗುರುಸ್ವಾಮಿ ದಂಪತಿಯ ಪುತ್ರ ಎಂ.ಜಿ ನಾಗದೇವ 2026ರ ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಜೆಎಸ್ಎಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ, ಸುತ್ತೂರಿನ ವಸತಿ ಶಾಲೆಯಲ್ಲಿ […]

Continue Reading

ರಾಷ್ಟ್ರದ ರಕ್ಷಣೆಯಲ್ಲಿ ಸಿಐಎಸ್‌ಎಫ್ ಸೇವೆ ಅನನ್ಯ: ಎಚ್.ಬಿ ಪಾಟೀಲ್

ಸುದ್ದಿ ಸಂಗ್ರಹ ಕಲಬುರಗಿವಿಧ್ವಂಸಕ ಕೃತ್ಯ ತಡೆ, ಅಗ್ನಿಶಾಮಕ ಸೇವೆ ಮತ್ತು ವಿವಿಐಪಿ ರಕ್ಷಣೆ ನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಿಐಎಸ್‌ಎಫ್ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ಮಹಾಗಾಂವ ಕ್ರಾಸ್ ಸಮೀಪದ ಸಂಜೀವಿನ ವೃದ್ಧಾಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಿಐಎಸ್‌ಎಫ್ ದಿನಾಚರಣೆ’ಯಲ್ಲಿ  ನಿವೃತ್ತ ಸಿಐಎಸ್‌ಎಫ್ ಯೋಧ ಕಾಮಣ್ಣ ಮದಗುಣಕಿ ಅವರನ್ನು ಸತ್ಕರಿಸಲಾಯಿತು, ನಂತರ ಮಾತನಾಡಿದ ಅವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು 1969ರಲ್ಲಿ ಸ್ಥಾಪಿತವಾದ ಪ್ರಮುಖ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ದೇಶದ […]

Continue Reading

ಸರ್ಕಾರಕ್ಕೆ ಸೀರೆ ವಾಪಸ್ ಕೊಡುವ ಅಭಿಯಾನ: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಘೋಷಣೆ

ಸುದ್ದಿ ಸಂಗ್ರಹ ಹಾವೇರಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡುವ ಬದಲಾಗಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೇವಲ ಸೀರೆ ಕೊಟ್ಟು ಅಪಮಾನ ಮಾಡಿದೆ. ಇದನ್ನು ಖಂಡಿಸಿ ಸೀರೆ ವಾಪಸ್ ಕೊಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಮ್ಮ ರೇವಣಕರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ […]

Continue Reading

ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ

ಸುದ್ದಿ ಸಂಗ್ರಹ ಯಾದಗಿರಿ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯ ಅರ್ಜಿ ವಜಾಗೊಳಿಸಿದೆ. ಅರ್ಜಿ ವಜಾ ಬೆನ್ನಲ್ಲೆ ಇದೀಗ ಮುತ್ಯಾ ಭಕ್ತರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜಾಮೀನು […]

Continue Reading

ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ, ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ ಪಡೆಯಲು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಕಲಬುರಗಿ ಜಿಲ್ಲಾ ಸಮಿತಿಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ.10 ರಿಂದ ನಗರದ ಪತ್ರಿಕಾ ಭವನದಲ್ಲಿ ಅರ್ಜಿ ಪಡೆಯಬಹುದು. ಅರ್ಜಿ ನವೀಕರಣ ಅಥವ ನೂತನ ಸದಸ್ಯತ್ವ ಪಡೆಯಲು […]

Continue Reading

ಸತ್ತಿದ್ದ ವ್ಯಕ್ತಿ ಮತ್ತೆ ಜೀವಂತ: ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಮಾತಾಡಿದ್ದನ್ನು ಕಂಡು ಮನೆಯವರೆ ಶಾಕ್

ಸುದ್ದಿ ಸಂಗ್ರಹ ಬಾಗಲಕೋಟೆ ಸತ್ತಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಬದುಕಿ ಮತ್ತೆ ಮಾತನಾಡಿರುವ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಮೊಮಿನ್ ಗಲ್ಲಿಯ ನಿವಾಸಿ 65 ವರ್ಷದ ಮುಬಾರಕ್ ಅವಟಿ ಅನಾರೋಗ್ಯದ ಹಿನ್ನೆಲೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಊರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಲೋಕಾಪುರ ಬಳಿ ರೋಡ್ ಹಂಪ್ಸ್ ಬರುತ್ತಿದ್ದತೆ ವಾಹನ ಅಲುಗಾಡಿದೆ. ಆಗ ಮುಬಾರಕ್ ಹಠಾತ್ ಉಸಿರಾಡಲು ಆರಂಭಿಸಿ, ಕುಟುಂಬಸ್ಥರ […]

Continue Reading