ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ 893ನೇ ಜಯಂತಿ ಆಚರಿಸಲಾಯಿತು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಸವ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ರಮೇಶ ಪಾಟೀಲ ಮರಗೋಳ, ತಾ.ಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಮುಖಂಡರಾದ ಶಾಂತಣ್ಣ ಚಾಳಿಕಾರ, ನಾಗುಗೌಡ ಅಲ್ಲೂರು, ಭೀಮಣ್ಣ ಹೊತಿನಮಡಿ, ರಾಮಲಿಂಗ ಬಾನರ್, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಹಣಮಂತ ಸಂಕನೂರ, ದೇವು, ವೀರೇಶ ಬೊಮ್ಮನಳ್ಳಿ, ಸಂಗನಬಸವ ರಾವೂರ, ಹಣಮಂತಗೌಡ ಸೇರಿದಂತೆ ಅನೇಕರು ಇದ್ದರು.