ಯಾಗಾಪೂರ: SSLC ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಉಚಿತ ಪ್ರಯಾಣ ವ್ಯವಸ್ಥೆ

ಸುದ್ದಿ ಸಂಗ್ರಹ ಚಿತ್ತಾಪುರಯಾಗಾಪೂರ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ನಾಲವಾರ ಗ್ರಾಮದ ಸಮಾಜ ಸೇವಕ ಶಿವಕುಮಾರ ಸುಣಗಾರ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ. ತಾಲೂಕಿನ ಯಾಗಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ದೂರದ ನಾಲವಾರ ಗ್ರಾಮಕ್ಕೆ ಹೋಗಬೇಕಾಗಿದ್ದು, ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳುವ ಉದ್ದೇಶದಿಂದ ನಾಲವಾರ ಗ್ರಾಮದ ಸಮಾಜ ಸೇವಕ ಮತ್ತು ಕೋಲಿ ಸಮಾಜದ ಯುವ ಮುಖಂಡ ಶಿವಕುಮಾರ ಸುಣಗಾರ ಉಚಿತ ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. […]

Continue Reading

ಸಚಿವರ ಅನುದಾನದಿಂದ ಬಿಜೆಪಿ ನಾಯಕರಿಗೆ ದಿಗ್ಭ್ರಮೆ‌

ಸುದ್ದಿ ಸಂಗ್ರಹ ಚಿತ್ತಾಪುರಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿನಾಟಕ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು, ಸಚಿವರು ತಮ್ಮ ಸತತ ಪ್ರಯತ್ನದಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿರುವುದನ್ನು ಸಹಿಸದ ಬಿಜೆಪಿ ನಾಯಕರು ದಿಗ್ಭ್ರಮೆಗೊಂಡು ಆಧಾರರಹಿತ ಹೇಳಿಕೆಗಳು ನೀಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ 224 ಶಾಸಕರಲ್ಲಿ ಅತಿ ಹೆಚ್ಚು ಅನುದಾನ […]

Continue Reading

ಭಾರತೀಯ-ಅಮೆರಿಕನ್ ಕುಟುಂಬದ ಜ್ಯುವೆಲರಿ ಶಾಪ್‌ಗೆ ನುಗ್ಗಿ 16 ಕೋಟಿಯ ಚಿನ್ನಾಭರಣ ದರೋಡೆ

ಸುದ್ದಿ ಸಂಗ್ರಹ ವಾಷಿಂಗ್ಟನ್ ಭಾರತೀಯ-ಅಮೆರಿಕನ್‌ ಕುಟುಂಬದ ಒಡೆತನದ ಜ್ಯುವೆಲರ್ಸ್‌ನಲ್ಲಿ ಮುಸುಕುಧಾರಿ ದರೋಡೆಕೋರರ ಗುಂಪೊಂದು 16 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ. ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಯಲ್ಲಿ, ದರೋಡೆಕೋರರು ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿ ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಳೆದ ವರ್ಷ ಜೂನ್ 18 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರೋಡೆಯ ಸಮಯದಲ್ಲಿ ಅಂಗಡಿಯು […]

Continue Reading

ಭಾರತಕ್ಕೆ ಪ್ರಯಾಣಿಸುತ್ತಿದ್ದ ಥಾಯ್‌ ಸರಕು ಹಡಗಿನ ಮೇಲೆ ಇರಾನ್‌ ದಾಳಿ

ಸುದ್ದಿ ಸಂಗ್ರಹ ಟೆಹ್ರಾನ್ ಯುಎಇ ಬಂದರಿನಿಂದ ಹೊರಟ ಸ್ವಲ್ಪ ಸಮಯದಲ್ಲೆ ಥಾಯ್‌ ಧ್ವಜ ಹೊತ್ತ ಸರಕು ಹಡಗಿನ ಮೇಲೆ ಹಾರ್ಮುಜ್‌ ಜಲಸಂಧಿಯ ಬಳಿ ದಾಳಿ ನಡೆದಿದೆ. ಸರಕು ಹಡಗಿನ ಮೇಲೆ ಬುಧವಾರ ದಾಳಿ ನಡೆದಿದೆ ಎಂದು ರಾಯಲ್‌ ಥಾಯ್‌ ನೌಕಾಪಡೆ ತಿಳಿಸಿದೆ. ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ. ಆದರೆ ಮೂವರು ಇನ್ನೂ ಪತ್ತೆಯಾಗಿಲ್ಲ. ಥಾಯ್ ಕಂಪನಿ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನರಿ, ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿಗೆ […]

Continue Reading

ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ರಾವೂರ ಶ್ರೀ

ಸುದ್ದಿ ಸಂಗ್ರಹ ಶಹಾಬಾದ್ಉತ್ತಮ ಫಲಿತಾಂಶ ಬರಲು ಶಾಲೆಯ ಶಿಕ್ಷಕರ ಪರಿಶ್ರಮ ಅಷ್ಟೆ ಮುಖ್ಯ ಎಂದು ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಮಗುವಿನ ಸರ್ವಾಂಗಿಣ ವಿಕಾಸವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಬರಿ ಫಲಿತಾಂಶದ ದೃಷ್ಟಿಯಲ್ಲಿ ಮಕ್ಕಳನ್ನು ಸೀಮಿತಗೊಳಿಸಿದ್ದಾರೆ. ಇಂತಹ ಮಕ್ಕಳು ಸಮಾಜದಲ್ಲಿ ಸಾಮಾಜಿಕರಣ ಆಗುವುದು ಕಷ್ಟ. ದೈಹಿಕ, ಮಾನಸಿಕ, ಪಠ್ಯ […]

Continue Reading

ಸಂಜು ಬ್ಯಾಟಿಂಗ್‌, ಬುಮ್ರಾ ಬೌಲಿಂಗ್‌, ಅಕ್ಷರ್‌ ಸ್ಟನ್ನಿಂಗ್‌ ಕ್ಯಾಚ್‌ – 7 ರನ್‌ಗಳ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ

ಸುದ್ದಿ ಸಂಗ್ರಹ ಮುಂಬೈ ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್‌ ಪಟೇಲ್‌ ಸ್ಟನ್ನಿಂಗ್‌ ಕ್ಯಾಚ್‌, ಕೊನೆಯಲ್ಲಿ ಬುಮ್ರಾ ಬೌಲಿಂಗ್‌ ಕಮಾಲ್‌ನಿಂದ ಇಂಗ್ಲೆಂಡ್‌ ವಿರುದ್ಧ ಭಾರತ 7 ರನ್‌ಗಳ ರೋಚಕ ಜಯದೊಂದಿಗೆ ನಾಲ್ಕನೇ ಬಾರಿ ಟಿ20 ಫೈನಲ್‌ ಪ್ರವೇಶಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಬೆಥೆಲ್‌ ಸ್ಫೋಟಕ ಶತಕ ಸಿಡಿಸಿಯೂ 7 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸೋಲು ಒಪ್ಪಿಕೊಂಡಿತು. […]

Continue Reading

ಅಂಗಡಿ ಮಾಲಿಕನಿಗೆ ಚಾಕು ಇರಿತ: ಚಿತ್ರದುರ್ಗದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಸುದ್ದಿ ಸಂಗ್ರಹ ಚಿತ್ರದುರ್ಗ ಮೊಬೈಲ್‌ ಅಂಗಡಿ ಮಾಲಿಕನಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಚಿತ್ರದುರ್ಗದ ಸಂತೆ ಮೈದಾನದಲ್ಲಿ ನಡೆದಿದೆ. ವಿಕ್ರಮ್‌ ಚೌದ್ರಿ ಎಂಬವರ ಅಂಗಡಿಗೆ ಯುವಕನೊಬ್ಬ ಮೊಬೈಲ್‌ ಸ್ಕ್ರೀನ್‌ ಹಾಕಿಸಲು ಬಂದಿದ್ದ. ಈ ವೇಳೆ ಬೇರೆ ಬ್ರ್ಯಾಂಡ್‌ನ ಮೊಬೈಲ್‌ ಸ್ಕ್ರೀನ್‌ಗೆ 100 ರೂ. ಹೆಚ್ಚುವರಿ ಆಗುತ್ತದೆ ಎಂದು ಹೇಳಿದ್ದಾರೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ ಚಾಕು ಇರಿದಿದ್ದಾನೆ. ಯುವಕ ಚಾಕು ಇರಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಕ್ರಮ್‌ ಚೌದ್ರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ […]

Continue Reading

ಬದುಕಿನ ಸಂಘರ್ಷಕ್ಕೆ ತಾಳ್ಮೆಯೆ ಮದ್ದು: ಗವಿಸಿದ್ದೇಶ್ವರ ಶ್ರೀಗಳು

ಸುದ್ದಿ ಸಂಗ್ರಹ ನಾಲವಾರಜೀವನವೆಂಬುದು ಸಮುದ್ರದ ಅಲೆಗಳಿದ್ದಂತೆ, ಇಲ್ಲಿ ಏರಿಳಿತಗಳು ಸಹಜ. ಆದರೆ ಅಲೆಗಳಿಗೆ ಹೆದರಿ ದಡ ಸೇರುವುದು ನಿಲ್ಲಿಸಬಾರದು. ಸೋತಾಗ ಹತಾಶರಾಗದೆ, ಗೆದ್ದಾಗ ಉನ್ಮಾದಕ್ಕೊಳಗಾಗದೆ ಬದುಕನ್ನು ಸಮಚಿತ್ತದಿಂದ ಸಾಗಿಸುವುದೆ ನಿಜವಾದ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು. ಕಲ್ಯಾಣ ಕರ್ನಾಟಕ ಭಾಗದ ಮತ್ತೊಂದು ಪ್ರತಿಷ್ಠಿತ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಮಧ್ಯರಾತ್ರಿಯ ಸಮಯದಲ್ಲೂ ನೆರೆದಿದ್ದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ಬದುಕಿನ ಸಂಕಷ್ಟ ಹಾಗೂ […]

Continue Reading

ಕಲಬುರಗಿ: ನಾಗಾವಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ ಮಲೇಷ್ಯಾ ಕರೆನ್ಸಿ

ಸುದ್ದಿ ಸಂಗ್ರಹ ಚಿತ್ತಾಪುರ ಪಟ್ಟಣದ ಹೊರವಲಯದ ನಾಗಾವಿಯ ಮುಜರಾಯಿ ಇಲಾಖೆಯ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ತೆರೆದು ಹಣ ಎಣಿಸುವಾಗ ಮಲೇಷ್ಯಾ ದೇಶದ ಕರೆನ್ಸಿ ಪತ್ತೆಯಾಗಿದೆ. ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಶನಿವಾರ ಹುಂಡಿ ಹಣ ಎಣಿಕೆಯಲ್ಲಿ ಮಲೇಷ್ಯಾದ 18 ನೋಟು ಮತ್ತು 2 ನಾಣ್ಯಗಳು ದೊರೆತಿವೆ. ಒಂದು ರಿಂಗಿತ್‌ಗೆ ಭಾರತದ ರೂ.23.26 ಪೈಸೆ ಮೌಲ್ಯವಾಗುತ್ತದೆ ಎಂದು ಹೇಳಿದ್ದಾರೆ. ಹುಂಡಿಯಲ್ಲಿ 500 ರೂ ಮುಖಬೆಲೆಯ 556 ನೋಟು, 200 ರೂ ಮುಖಬೆಲೆಯ 455 ನೋಟು, 100 ರೂ ಮುಖಬೆಲೆಯ […]

Continue Reading

ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಸುದ್ದಿ ಸಂಗ್ರಹ ಕಲಬುರಗಿ ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಘಟನೆ ನಡೆದಿದೆ. ರಾವೂರ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಶಿವಾಜಿ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಡಿಜೆ ಹಾಕಿ ಡ್ಯಾನ್ಸ್ ಮಾಡುವ ವೇಲೆ ಮತ್ತೊಂದು ಸಮುದಾಯ ಕಿರಿಕಿರಿ ಮಾಡಿದೆ. ಸೌಂಡ್ ಕಡಿಮೆ ಮಾಡುವಂತೆ ಕಿರಿಕ್ […]

Continue Reading