ಶಾಸಕ ಮತ್ತಿಮೂಡ್ ಜನ್ಮದಿನ: ಬೈಕ್ ಸವಾರರಿಗೆ ಹೆಲ್ಮೆಟ್, ಆಟೋ ಚಾಲಕರಿಗೆ ಏಫ್ರಾನ್ ವಿತರಣೆ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಪಕ್ಷಬೇಧ ಮಾಡದೆ ಸರ್ವರಿಗೂ ಗೌರವ ಕೊಡುತ್ತಾ ಸದಾ ಹಸನ್ಮುಖಿಯಾಗಿರುವ ಶಾಸಕ ಬಸವರಾಜ ಮತ್ತಿಮೂಡ್ ಅವರ ಜನ್ಮ ದಿನದ ಪ್ರಯುಕ್ತ ಆಟೋ ಚಾಲಕರಿಗೆ ಏಫ್ರಾನ್ ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.

ನಗರದ ಶ್ರೀರಾಮ ಚೌಕಿನಲ್ಲಿ ಶಾಸಕ ಬಸವರಾಜ ಮತ್ತಿಮೂಡ್ ಅವರ 46ನೇ ಜನ್ಮದಿನದಂದು ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ನಂತರ ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಆಟೋ ಚಾಲಕರಿಗೆ ಏಫ್ರಾನ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶಾಸಕರು ಕಷ್ಟದಲ್ಲಿ ಇರುವರಿಗೆ ಸದಾ ಸಹಾಯ, ಸಹಕಾರ ಮಾಡಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡುತ್ತಿರುವ ಅಪರೂಪದ ಶಾಸಕರಾಗಿದ್ದಾರೆ, ಅವರ ರಾಜಕೀಯ ಭವಿಷ್ಯ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಪ್ರಮುಖರಾದ ಅರುಣಕುಮಾರ ಪಟ್ಟಣಕರ್, ಚಂದ್ರಕಾಂತ ಗೊಬ್ಬುರಕರ್, ಮತ್ತು ಕೆ. ರಮೇಶ ಭಟ್ಟ ಮಾತನಾಡಿದರು.

ಗೋರಕನಾಥ ಶಾಕಾಪುರ, ಶಿವಕುಮಾರ ಇಂಗಿನಶೆಟ್ಟಿ, ಭಾಗಿರತಿ ಗುನ್ನಾಪುರ, ನರೇಂದ್ರ ವರ್ಮ ವೇದಿಕೆ ಮೇಲೆ ಉಪಸ್ಥಿತರಿದ್ದರು. ‌

ಕಾರ್ಯಕ್ರಮದಲ್ಲಿ ಅನಿಲ ಬೋರಗಾವಕರ್, ಭೀಮರಾವ ಸಾಳುಂಕೆ, ಪದ್ಮಾ ಕಟಗೆ, ಶಶಿಕಲಾ ಸಜ್ಜನಶೆಟ್ಟಿ, ಅಮರ ಕೋರೆ, ಕಾಶಣ್ಣ ಚನ್ನೂರ, ದಿನೇಶ್ ಗೌಳಿ, ನಾಗು ಮಿಲಿಗಿರಿ ಮತ್ತು ಬಿಜೆಪಿ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

ಸಿದ್ರಾಮ ಕುಸಾಳೆ ಸ್ವಾಗತಿಸಿದರು, ದೇವದಾಸ ಜಾಧವ ನಿರೂಪಿಸಿದರು, ಬಸವರಾಜ ಬಿರಾದರ ವಂದಿಸಿದರು.

Leave a Reply

Your email address will not be published. Required fields are marked *