ಕನ್ನಡಕ್ಕೆ ಕಾರಂತರ ಕೊಡುಗೆ ಅಪಾರ: ಎಚ್.ಬಿ ಪಾಟೀಲ      

ಕಲಬುರಗಿ: ಕನ್ನಡದ “ಕಡಲತೀರದ ಭಾರ್ಗವ” ಎಂದೆ ಪ್ರಸಿದ್ಧರಾದ ಡಾ.ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಮೇರು ವ್ಯಕ್ತಿ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ ಮತ್ತು ವೈಜ್ಞಾನಿಕ ಬರಹಗಾರ. ಕನ್ನಡಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ್ ಹೇಳಿದರು. ಜಿಲ್ಲೆಯ ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿನ ನರೇಂದ್ರ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಕೆ.ಶಿವರಾಮ ಕಾರಂತರ 123ನೇ  ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರಂತರು 200ಕ್ಕೂ ಹೆಚ್ಚು ಕೃತಿಗಳನ್ನು […]

Continue Reading

ಅಂಬಿಗರ ಚೌಡಯ್ಯ ಮೂರ್ತಿ ಭಗ್ನ: ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ‌

ಸುದ್ದಿ ಸಂಗ್ರಹ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ, ಕೋಲಿ ಸಮಾಜದ ಸ್ವಾಭಿಮಾನ ಕೆರಳಿಸಿದಂತಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ನಿಂಗಪ್ಪ ಹುಳಗೋಳಕರ ಉಗ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಮುತ್ತಗಾ ಗ್ರಾಮದ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಘಟನೆ ವಿರೋಧಿಸಿ ಕೋಲಿ ಸಮಾಜದ ವತಿಯಿಂದ ಶುಕ್ರವಾರ ಭಂಕೂರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು ಸಾಮಾಜಿಕ ಹರಿಕಾರರು, ಅವರು […]

Continue Reading

ಮುತ್ತಗಾ ಗ್ರಾಮದಲ್ಲಿ ಚೌಡಯ್ಯ ಮೂರ್ತಿ ಭಗ್ನ: ಉದ್ವಿಘ್ನ ಪರಿಸ್ಥಿತಿ ನಿರ್ಮಾಣ

ಶಹಾಬಾದ: ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಗುರುವಾರ ರಾತ್ರಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಪರಿಣಾಮ ತಾಲೂಕಿನಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದುಷ್ಕರ್ಮಿಗಳು ಕಲ್ಲಿನಿಂದ ಮೂರ್ತಿಯ ಕೈ ಕಟ್ ಮಾಡಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆಯೇ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪಾ ಪಾಳಾ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶ್ವಾನದಳ ಅಧಿಕಾರಿಗಳು ಮತ್ತು ಗ್ರಾಮ ಲೇಖಾಧಿಕಾರಿ ರೇವಣಸಿದ್ದಪ್ಪ ಪಾಟಿಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ […]

Continue Reading

ಭಜನೆಯಿಂದ ಸಾಮಾಜಿಕ ಸಾಮರಸ್ಯ: ತೆಂಗಳಿ ಶ್ರೀ

ಚಿತ್ತಾಪುರ: ಭಜನೆಯಿಂದ ಸಮಾಜದ ಸಂಘಟನೆಯೊಂದಿಗೆ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ತೆಂಗಳಿ- ಮುಂಗಲಗಿಯ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ಸಮೀಪದ ತೆಂಗಳಿ ಗ್ರಾಮದಲ್ಲಿ ಸೀಗಿ ಹುಣ್ಣಿಮೆ ಪ್ರಯುಕ್ತ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಅಂಡಗಿ ಮನೆತನದ ವತಿಯಿಂದ ಅಂಬಾ ಭವಾನಿಗೆ ಉಡಿ ತುಂಬುವ ಕಾರ್ಯಕ್ರಮದ 48ನೇ ವಾರ್ಷಿಕೋತ್ಸವ ಮತ್ತು ನವರಾತ್ರಿಯಲ್ಲಿ 9 ದಿನಗಳ ಪರ್ಯಂತ ಭಜನೆ ಮಾಡಿ ಧಾರ್ಮಿಕ ಸೇವೆ ಸಲ್ಲಿಸಿದ ವಿವಿಧ ಭಜನಾ ಮಂಡಳಿ ಅಧ್ಯಕ್ಷರಿಗೆ ‘ಸೇವಾಶ್ರೀ ಪ್ರಶಸ್ತಿ’ ವಿತರಿಸಿ ಮಾತನಾಡಿದ ಅವರು, […]

Continue Reading

ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮದ ಜನರ ಸಮಸ್ಯೆ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಮಳೆ ಹಾಗೂ ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ನಿರಂತರ ಸುರಿವ ಮಳೆಯ ಮಧ್ಯೆಯೇ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇರಿಸಿದರು. […]

Continue Reading

ಚಿತ್ತಾಪುರ: ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಚಿತ್ತಾಪುರ: ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ನಿರಂತರವಾಗಿ ಸುರಿದ ಮಳೆಗೆ ತಾಲೂಕಿನಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಸುರಿದ ಮಳೆಯಿಂದ ಬೆಳಗ್ಗೆ ಜೀವನಾವಶ್ಯಕ ಸಾಮಗ್ರಿ ಖರೀದಿಸಲು, ದೈನಂದಿನ ಜೀವನಕ್ಕೆ ತೀವ್ರ ಅಡಚಣೆ ಉಂಟಾಯಿತು. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಮಳೆಯಿಂದ ತೀವ್ರ ತೊಂದರೆ ಅನುಭವಿಸಿದರು. ಮಳೆಯಿಂದ ಹೊಲಗದ್ದೆಗಳು ನೀರುಮಯವಾಗಿವೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಮಳೆಯು ಕೂಲಿಕಾರ್ಮಿಕರಿಗೆ ಕೆಲಸವಿಲ್ಲದೆ ಮನೆಯಲ್ಲಿಯೆ ಇರುವಂತೆ ಮಾಡಿದೆ.

Continue Reading

ಮರತೂರ: ಶ್ರೀಶೈಲ ಮಹಾಸ್ವಾಮಿಗಳ ಮೌನಾನುಷ್ಠಾನ

ಸುದ್ದಿ ಸಂಗ್ರಹ ಶಹಾಬಾದ್ ತಾಲೂಕಿನ ಮರತೂರ ಗ್ರಾಮದ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಶೈಲ ಮಹಾಸ್ವಾಮಿಗಳು ಲೋಕಕಲ್ಯಾಣ ಮತ್ತು ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ ಒಂದು ತಿಂಗಳ ಕಾಲ ಮೌನ ಅನುಷ್ಠಾನ ಕೈಗೊಂಡಿದ್ದಾರೆ, ಕಲಬುರಗಿಯ ಮುಕ್ತಂಪುರಿನ ಗುರುಬಸವೇಶ್ವರ ಬೃಹನ್ಮಠದ ಶಿವಾನಂದ ಮಹಾಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಮೌನ ಅನುಷ್ಠಾನ ಪ್ರಾರಂಭಿಸಿದರು. ಇದೆ ಸಂದರ್ಭದಲ್ಲಿ ಶಿರೋಳಿಯ ಶಿವಬಸವ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಅ.7 ರಂದು ಮೌನ ಅನುಷ್ಠಾನ ಮಂಗಲ ಸಮಾರಂಭ ನಡೆಯಲಿದೆ, ನಾಡಿನ ಪೂಜ್ಯರು, ವಿವಿಧ ರಾಜಕೀಯ ಪಕ್ಷದ ಮುಖಂಡರು […]

Continue Reading

ಧಾರಾಕಾರ ಮಳೆಗೆ ಮನೆ ನೆಲಸಮ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

ಚಿತ್ತಾಪುರ: ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಯೊಂದು ಸಂಪೂರ್ಣವಾಗಿ ನೆಲಕ್ಕುರುಳಿದ ಘಟನೆ ತಾಲೂಕಿನ ಸುಗೂರ (ಎನ್) ಗ್ರಾಮದಲ್ಲಿ ನಡೆದಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸೆ.22 ರಂದು ಸೋಮುವಾರ ತಡರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಉಮಾದೇವಿ ಗುರಯ್ಯಾಸ್ವಾಮಿ ಮಠಪತಿ ಅವರ ಮನೆಯ ಒಂದು ಕೋಣೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ತಾಯಿ ಮತ್ತು ಇಬ್ಬರು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಲೆ ಊರಿನ ಗ್ರಾಮಸ್ಥರು ಭೇಟಿ ನೀಡಿ ಧೈರ್ಯ ಹೇಳಿದರು. […]

Continue Reading

ಕಾಗಿಣಾದಲ್ಲಿ ತಗ್ಗಿದ ಪ್ರವಾಹ: ದಂಡೋತಿ ಸೇತುವೆ ಸಂಚಾರಕ್ಕೆ ಮುಕ್ತ

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹತ್ತಿರಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆಪ್ರವಾಹ ಕಡಿಮೆಯಾಗಿ ಕಳೆದ 30 ಗಂಟೆಗಳ ಕಾಲಮುಳುಗಡೆಯಾಗಿದ್ದ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಸೇತುವೆ ಮೇಲೆ ದುರಸ್ತಿ ಮಾಡಿದ್ದ ರಸ್ತೆ ಅಲ್ಲಲ್ಲಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದೆ. ವಾಹನಗಳ ಸಂಚಾರ ಇನ್ನೂ ಪ್ರಾರಂಭವಾಗಿಲ್ಲ. ಬೈಕ್, ಕಾರು, ಜೀಪು ಸಂಚಾರಕ್ಕೆ ಸಮಸ್ಯೆಯಿಲ್ಲ. ಸೇತುವೆ ಮೇಲೆಯೆ ಸಿಮೆಂಟ್ ಕಂಬಗಳ ಹತ್ತಿರ ಅಳವಡಿಸಿದ್ದ ಮೊಬೈಲ್ ನೆಟವರ್ಕ್ ಕೇಬಲ್ ವೈ‌ರ್ ಕಿತ್ತು ಹೋಗಿದೆ. ಬಸ್‌ ಸಂಚಾರ ಪ್ರಾರಂಭವಾಗದ ಕಾರಣ ನದಿಯ ಆಚೆಗಿರುವ ಗ್ರಾಮಗಳ […]

Continue Reading

ಚಿತ್ತಾಪುರ: ಗುಂಡಗುರ್ತಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ, ಪರಿಶೀಲನೆ

ಚಿತ್ತಾಪುರ: ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ಗುಂಡಗುರ್ತಿ ಗ್ರಾಮದ ಮನೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ದವಸ ಧಾನ್ಯ ಸೇರಿದಂತೆ ಇನ್ನಿತರ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಾಮದ ಪ್ರಮುಖ ರಸ್ತೆ ಸೇರಿದಂತೆ ಮನೆಗಳಲ್ಲಿನೀರು ನುಗ್ಗಿ ಅನಾಹುತ ಸಂಭವಿಸಿದ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ, ಏನೆಲ್ಲ ಸಮಸ್ಯೆಗಳಾಗಿವೆ ಎನ್ನುವುದರ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಹಳ್ಳದ ನಾಲಾ ಸ್ವಚ್ಛತೆ ಕೈಗೊಳ್ಳಲು ಸ್ಥಳದಲ್ಲೇ […]

Continue Reading