ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದಿಂದ ‘ಸಂಚಾರ್ ಸಾಥಿ’ ಆ್ಯಪ್ ಪೂರ್ವ-ಸ್ಥಾಪನೆ ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ. ಈ ಹಿಂದೆ ಕೇಂದ್ರ ಸರ್ಕಾರ ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಮಾಡಲು ಸ್ಮಾರ್ಟ್ಫೋನ್ ಕಂಪನಿಗಳಿಗೆ ಆದೇಶಿಸಿತ್ತು. ಇದು ಜನರ ಮೇಲೆ ನಿರಂತರ ನಿಗಾ ವಹಿಸಲಿದೆ, ಸರ್ಕಾರ ಜನರ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎಂದು ವಿಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕಡ್ಡಾಯ ರದ್ದುಗೊಳಿಸಿ ಸರ್ಕಾರ ಸ್ಪಷ್ಟನೆ ನೀಡಿದೆ. ಎಲ್ಲಾ ನಾಗರಿಕರಿಗೆ ಸೈಬರ್ […]

Continue Reading

ಸಂವಿಧಾನದ ಅನುಷ್ಠಾನ, ಪಾಲನೆಯಲ್ಲಿ ವಕೀಲರ ಪಾತ್ರ ಅನನ್ಯ: ಬಸವರಾಜ ಬಿರಾದಾರ

ಕಲಬುರಗಿ: ದೇಶದ ರಕ್ಷಾ ಕವಚವಾದ ಸಂವಿಧಾನದ ಆಶಯಗಳು, ತತ್ವಗಳನ್ನು ಅನುಷ್ಠಾನ ಮತ್ತು ಪಾಲನೆ ಮಾಡುವುದರಲ್ಲಿ ವಕೀಲ್‌ರ ಪಾತ್ರ ಅನನ್ಯ ಎಂದು ಹಿರಿಯ ವಕೀಲ್ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಏರ್ಪಡಿಸಿದ್ದ ‘ರಾಷ್ಟ್ರೀಯ ವಕೀಲರ ಮತ್ತು ವಿಶ್ವ ವಿಶೇಷ ಚೇತನರ ದಿನಾಚರಣೆ’ಯಲ್ಲಿ ಗೌರವ ಸ್ವೀಕರಿಸಿ, ಮಾತನಾಡಿದ ಅವರು, ದೇಶದಲ್ಲಿನ ಎಂತಹ ದೊಡ್ಡ ವ್ಯಕ್ತಿಯಾಗಿದ್ದು, ಆ ವ್ಯಕ್ತಿ ತಪ್ಪು ಮಾಡಿದರೆ […]

Continue Reading

ಸಂಚಾರ್ ಸಾಥಿ ಆ್ಯಪ್ ವಿವಾದದ ನಡುವೆ ಹತ್ತುಪಟ್ಟು ಹೆಚ್ಚಾಯಿತು ಡೌನ್‌ಲೋಡ್

ನವದೆಹಲಿ: ಸೈಬರ್ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾದ ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಕೆ ಕಡ್ಡಾಯಗೊಳಿಸಿದ ಸರ್ಕಾರದ ಆದೇಶದ ಬೆನ್ನಲ್ಲೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ವಿವಾದದ ನಡುವೆಯೂ ಅಪ್ಲಿಕೇಷನ್ ಡೌನಲೋಡ್‌ಗಳು ಹೆಚ್ಚಾಗಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ದೂರಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ, ಮಂಗಳವಾರ ಸುಮಾರು 6 ಲಕ್ಷ ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಇದು ಸಾಮಾನ್ಯ ದಿನದಲ್ಲಿ ಸುಮಾರು 60 ಸಾವಿರ ಆಗಿತ್ತು. ಅಂದರೆ ಒಂದೆ ದಿನದಲ್ಲಿ ಡೌನ್‌ಲೋಡ್‌ಗಳು ಹತ್ತು ಪಟ್ಟು ಹೆಚ್ಚಾಗಿದೆ. […]

Continue Reading

ಮದುವೆಯಾಗಿ ಗಂಡನ ಮನೆಗೆ ಹೋದ 20 ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ನವ ವಧು

ನವದೆಹಲಿ: ವಿವಾಹವಾಗಿ ತನ್ನ ಪತಿಯ ಮನೆಗೆ ತಲುಪಿದ ಕೇವಲ 20 ನಿಮಿಷಗಳಲ್ಲೆ ವಧು ವಿಚ್ಛೇದನ ಕೇಳಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ನವೆಂಬರ್ 25 ರಂದು ಭಾಲ್ವಾನಿಯ ವಿಶಾಲ್ ಮಧೇಶಿಯಾ ಮತ್ತು ಸಲೇಂಪುರದ ಪೂಜಾ ಅವರ ಮದುವೆ ನಡೆದಿತ್ತು. ಸಂಜೆ 7 ಗಂಟೆಗೆ ವರನ ಮೆರವಣಿಗೆ ವಧುವಿನ ಮನೆ ತಲುಪಿ, ರಾತ್ರಿಯಿಡಿ ವಿವಾಹದ ಎಲ್ಲಾ ಆಚರಣೆಗಳು ಮುಗಿದಿದ್ದವು. ನಂತರ ವಧು ಪೂಜಾ ಗಂಡನ ಮನೆ ಹೋಗಿದ್ದಾಳೆ. ಆದರೆ ಗಂಡನ ಮನೆಯೊಳಗೆ ಕಾಲಿಟ್ಟ 20 ನಿಮಿಷಗಳಲ್ಲೆ […]

Continue Reading

ಸರ್ಕಾರಿ ಶಾಲೆಗಳ LKG-UKG ಮಕ್ಕಳಿಗೂ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ

ಬೆಂಗಳೂರು: ಸರ್ಕಾರಿ ಶಾಲೆಗಳ ಎಲ್‌ಕೆಜಿ-ಯುಕೆಜಿ ಮಕ್ಕಳಿಗೂ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 1 ರಿಂದ ಅನ್ವಯವಾಗುವಂತೆ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು ಕೊಡಲಿದೆ. ಬಿಸಿಯೂಟ ಮಾಡುವ ಅಡುಗೆಯವರಿಗೂ ಗೌರವಧನ ನೀಡುವಂತೆ ಆದೇಶದಲ್ಲಿ ಶಿಕ್ಷಣ ಇಲಾಖೆ ಉಲ್ಲೇಸಿದೆ. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಮಾರ್ಗಸೂಚಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಈ ಯೋಜನೆಯ ಫಲಾನುಭವಿಗಳೆಂದು ಪರಿಗಣಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಯೋಜನೆಯ […]

Continue Reading

ಕಲಬುರಗಿ-ಬೆಂಗಳೂರು ವಂದೆ ಭಾರತ್ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ

ಕಲಬುರಗಿ: ಬಹುಕಾಲದ ಬೇಡಿಕೆಯಾಗಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಂದೆ ಭಾರತ್ ರೈಲು ಸಂಚಾರದ ಸಮಯವನ್ನು ಜನವರಿ 1 ರಿಂದ ಬದಲಾಯಿಸಲು ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿರುವುದು ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿದೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ. ಬಹುದಿನಗಳಿಂದ ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಂದೆ ಭಾರತ್ ರೈಲಿನ ಸಮಯ ಬದಲಾವಣೆ ಮಾಡುವಂತೆ ಕೋರಿ ಪ್ರಯಾಣಿಕರು ಒತ್ತಾಯಿಸುತ್ತಿದ್ದು, ರೈಲ್ವೆ ಇಲಾಖೆಯವರೊಂದಿಗೆ ಸತತವಾಗಿ ಚರ್ಚಿಸಿದ ಪರಿಣಾಮವಾಗಿ ಮುಂದಿನ ತಿಂಗಳು ಜನವರಿ 1 […]

Continue Reading

ಪರಿಸರ ಮಾಲಿನ್ಯ ತಡೆಗೆ ಸಾಮೂಹಿಕ ಪ್ರಯತ್ನ ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ: ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮ, ಸರ್ಕಾರ, ಕೆಲವು ಸಂಸ್ಥೆಗಳು, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆ ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ’ […]

Continue Reading

ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆ ಕೇಸ್: ಮಾಲೀಕ, ಮ್ಯಾನೇಜರ್ ವಿರುದ್ಧ ಎಫ್‌ಐಆರ್

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಮಾಲೀಕ ಹಾಗೂ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಿಂದ ತಪ್ಪಿಕೊಳ್ಳಲು ಯತ್ನಿಸಿದ್ದ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿರುದ್ಧ ಸುಳ್ಳು ದೂರು ನೀಡಿ, ಮಾನಹಾನಿ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಈ ಕುರಿತು ಯುವಕರು ವಿಡಿಯೋ ಮಾಡಿದ್ದರು. ಇದೆ ಸಮಯಕ್ಕೆ ಕೆಫೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಕರೆಯೊಂದು […]

Continue Reading

ಶಬರಿಮಲೆ ಅಯ್ಯಪ್ಪನ ಹುಂಡಿಗೆ 15 ದಿನದಲ್ಲಿ 92 ಕೋಟಿ ರೂ.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲೆ ಹುಂಡಿಗೆ 92 ಕೋಟಿ ರೂ. ಹರಿದುಬಂದಿದೆ. ಈ ಕುರಿತು ಶಬರಿಮಲೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೆ ಅವಧಿಯಲ್ಲಿ ದೇಗುಲಕ್ಕೆ 69 ಕೋಟಿ ರೂ. ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದೆ. ಇದೆ ಅವಧಿಯಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಇದು 23 ಕೋಟಿ ರೂ. ಅಧಿಕ. ಅದರಲ್ಲಿ 47 ಕೋಟಿ […]

Continue Reading

ಎಲ್ಲಾ ಫೋನ್‌ಗಳಲ್ಲಿ ಸಂಚಾರ್ ಸಾಥಿ ಕಡ್ಡಾಯ: ಈ ಆ್ಯಪ್ ವಿಶೇಷತೆ ಏನು ?

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೆ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಈ ಆದೇಶವನ್ನು ಸ್ಮಾರ್ಟ್‌ಫೋನ್ ತಯಾರಕರಿಗೆ ಖಾಸಗಿಯಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಏನಿದು ಪ್ರಿಲೋಡೆಡ್‌ […]

Continue Reading