ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಮರಳು ಲೂಟಿ: ಗಣಿ ಸಚಿವರ ತವರಿನಲ್ಲೆ ಅಕ್ರಮ ಮರಳು ಗಣಿಗಾರಿಕೆ
ದಾವಣಗೆರೆ: ಅಕ್ರಮ ಮರಳು ದಂಧೆಕೋರರು ಅನಧಿಕೃತವಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಮರಳು ಲೂಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗಣಿ ಸಚಿವರ ತವರಲ್ಲೆ ಈ ಕೃತ್ಯ ನಡೆಯುತ್ತಿದೆ. ಅನಧಿಕೃತವಾಗಿ ಬೃಹತ್ ಪೈಪ್‌ಗಳು, ಕಲ್ಲು ಬಂಡೆಗಳನ್ನು ಬಳಸಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಮರಳು ತೆಗೆಯಲು ನದಿಯ ದಡದಲ್ಲಿರುವ ಹತ್ತಾರು ತೆಪ್ಪಗಳು, ನದಿಯ ತಟದಲ್ಲೆ ಇರುವ ಮರಳು ಫಿಲ್ಟರ್ ಹಾಗೂ ಜರಡಿ ಬಾವಿಯಲ್ಲಿ ಕಾಣಿಸಿಕೊಂಡಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ […]
Continue Reading