ಐಸ್‌ಕ್ರೀಂನಲ್ಲಿ ಮಹಿಳೆಗೆ ಸಿಕ್ಕಿದ್ದೆನು ? ತೀವ್ರ ವಾಂತಿಯಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ

ಅಹ್ಮದಾಬಾದ್‌: ಕಳೆದ ವರ್ಷ ಮಹಾರಾಷ್ಟ್ರದ ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಐಸ್‌ಕ್ರೀಂನಲ್ಲಿ ಮನುಷ್ಯನ ಬೆರಳೊಂದು ಸಿಕ್ಕಿ ಬೆಚ್ಚಿ ಬೀಳುವಂತೆ ಮಾಡಿತ್ತು. ತನಿಖೆಯ ಬಳಿಕ ಇದು ಐಸ್‌ಕ್ರೀಂ ಕಾರ್ಖಾನೆಯ ಕಾರ್ಮಿಕನ ಬೆರಳು ಎಂಬುದು ತಿಳಿದು ಬಂದಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮೊದಲೆ ಈಗ ಗುಜರಾತ್‌ನ ಅಹ್ಮದಾಬಾದ್‌ನ ಮಹಿಳೆಯೊಬ್ಬರು ಐಸ್‌ಕ್ರೀಂನಲ್ಲಿ ಸಿಕ್ಕ ವಸ್ತುವನ್ನು ನೋಡಿ ಅಸ್ವಸ್ಥಗೊಂಡಿದ್ದಾರೆ. ನಿರಂತರವಾಗಿ ವಾಂತಿ ಮಾಡಲು ಶುರು ಮಾಡಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮಾನ್ಯವಾಗಿ ಖುಷಿ ಕ್ಷಣಗಳನ್ನು ಹಂಚಿಕೊಳ್ಳಲು ಅನೇಕರು ಐಸ್‌ಕ್ರೀಂ ಸೇವಿಸುತ್ತಾರೆ. ಆದರೆ ಗುಜರಾತ್‌ನ ಮಹಿಳೆಯೊಬ್ಬರಿಗೆ […]

Continue Reading

UPI ಪಾವತಿ ಬಂದ್: ಇಂದಿನಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಹೊಸ ನಿಯಮ

ಮಹಾರಾಷ್ಟ್ರ: ಮೇ.10 ರಿಂದ ಪೆಟ್ರೋಲ್ ಪಂಪ್‌ಗಳಲ್ಲಿ UPI ಮತ್ತು ಕಾರ್ಡ್‌ಗಳ ಮೂಲಕ ಪಾವತಿಸುವುದು ಕಷ್ಟವಾಗಬಹುದು. ಪೆಟ್ರೋಲ್ ಪಂಪ್ ಮಾಲೀಕರು ಇಂದಿನಿಂದ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ಮತ್ತು ಅವರ ಸಂಘಟನೆಗಳು UPI ಮತ್ತು ಕಾರ್ಡ್ ಪಾವತಿಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳುತ್ತಿದ್ದಾರೆ. ಈ ರೀತಿಯ ಪಾವತಿಗಳಿಂದ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಮೇ 10 ರಿಂದ UPI […]

Continue Reading

ಲಾಟರಿಯಿಂದ ಖರೀದಿಸಿದ ಜಮೀನಲ್ಲಿ ನಿಧಿ ಪತ್ತೆ: 20kg ತೂಕದ ಮಡಿಕೆಯಲ್ಲಿ ಸಿಕ್ಕಿತು ನಿಧಿ

ಭಾರತದಲ್ಲಿ ಹಲವು ಜನರಿಗೆ ನಿಧಿ ಸಿಕ್ಕಿದ ಉದಾಹರಣೆ ಇವೆ. ಎಷ್ಟೋ ಜನರು ನಿಧಿಗೋಸ್ಕರ ಅಪರಾಧ ಮಾಡಿ ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲೊರ್ವ ರೈತನಿಗೆ ಆತ ಇದ್ದಲ್ಲಿ ಅದೃಷ್ಟ ಎನ್ನುವದು ಒಂದಲ್ಲ, ಎರಡು ಬಾರಿ ಹುಡುಕಿಕೊಂಡು ಬಂದಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರಿದು ಡಿಸೆಂಬರ್ 2019ರ ಸುದ್ದಿಯಾಗಿದ್ದು, ಇದೀಗ ಪ್ರೆಶ್ ಸುದ್ದಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಲಾಟರಿಯಲ್ಲಿ ಬಂದ ಹಣದಿಂದ ಜಮೀನು ಖರೀದಿಕೇರಳದ ಕಿಲಿಮನೂರಿನ 66 ವರ್ಷದ ರೈತ ಬಿ ರತ್ನಾಕರನ್ ಪಿಳ್ಳೈ […]

Continue Reading

ಕೂದಲೆಳೆ ಅಂತರದಲ್ಲಿ ಪಾರಾದ DMK ಸಂಸದ ರಾಜಾ

ಚೆನ್ನೈ: ಮೈಲಾಡುತುರೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಸಂಸದ ಎ ರಾಜಾ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿರುವಾಗ ಗಾಳಿ ಬೀಸುತ್ತಿತ್ತು. ಈ ವೇಳೆ ಬಲವಾದ ಗಾಳಿಯಿಂದಾಗಿ ವೇದಿಕೆಯ ಬಳಿ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದು ಡಯಾಜ್ ಮೇಲೆ ಬಿದ್ದಿದೆ. ಫೋಕಸ್‌ ದೀಪಗಳು ಬೀಳುವುದನ್ನು ನೋಡಿದ ರಾಜಾ ಅವರು ತಮ್ಮ ಎಡಗಡೆ ಸರಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಅವರು ಭಾಷಣ ಮಾಡುತ್ತಲೇ ಇರುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಇತ್ತು. ಓವರ್‌ಹೆಡ್ […]

Continue Reading

ಮೇ.1 ರಿಂದ ದೇಶವಾಸಿಗಳಿಗೆ ಸಿಗಲಿವೆ 10 ಸೇವೆಗಳು ಫ್ರೀ, ಫ್ರೀ

ನವದೆಹಲಿ: ಪ್ರತಿವರ್ಷ ಸರ್ಕಾರ ದೇಶದ ಜನತೆಗೆ ಹೊಸ ಹೊಸ ಯೋಜನೆ ನೀಡುತ್ತದೆ. ಹಾಗೆ ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಆದೇಶ ಪ್ರಕಟಿಸುತ್ತಿರುತ್ತದೆ. 2025ರಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಲಾಗಿದೆ, ಈ ಮೂಲಕ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶ ಸರ್ಕಾರ ಹೊಂದಿರುತ್ತದೆ. ಇದರ ಜೊತೆಗೆ ದೇಶವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಗುರಿ ಹೊಂದಿರುತ್ತವೆ. ಉಚಿತ ಪಡಿತರ ವಿತರಣೆ, ವಿದ್ಯುತ್, ಶಿಕ್ಷಣ, ಕೌಶಲ್ಯ ತರಬೇತಿ, ಪಿಂಚಣಿ, ತೆರಿಗೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒಳಗೊಂಡಿರುತ್ತದೆ. ಮೇ 1ರಿಂದ ದೇಶದ ಜನತೆಗೆ […]

Continue Reading

ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೆವೆ: ಘರ್ಜಿಸಿದ ಮೋದಿ

ಪಾಟ್ನಾ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದವರು ಮತ್ತು ಸಂಚು ರೂಪಿಸಿದವರ ಕಲ್ಪನೆಗೂ ಮೀರಿದ ರೀತಿಯಲ್ಲಿ ಶಿಕ್ಷೆ ಸಿಗಲಿದೆ ಎಂದು ಮೋದಿ ಗುಡುಗಿದ್ದಾರೆ. ಬಿಹಾರದ ಮಧುಬನಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಉಗ್ರರಿಗೆ ಎಚ್ಚರಿಕೆ ನೀಡಿದರು. ಪಹಲ್ಗಾಮ್ ದಾಳಿಯಲ್ಲಿ ಮೃತರಿಗೆ ಗೌರವ ಸಲ್ಲಿಸಲು 1 ನಿಮಿಷ ಮೌನ ಪ್ರಾರ್ಥನೆ ಮಾಡಿ ಮೋದಿ ಭಾಷಣ ಆರಂಭಿಸಿದರು. ಇಂದು ಬಿಹಾರದ ನೆಲದಲ್ಲಿ ನಿಂತು ನಾನು ಇಡಿ ಜಗತ್ತಿಗೆ […]

Continue Reading

ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ: ಇನ್ನುಮುಂದೆ ರೈಲಿನಲ್ಲೂ ಎಟಿಎಂ

ಮುಂಬೈ: ದೇಶದಲ್ಲೆ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಎಟಿಎಂ ಸ್ಥಾಪಿಸಲಾಗಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ […]

Continue Reading

ವಾಟ್ಸಪ್‌ ಫೋಟೋ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಾಗಿರಿ: ಫೋನ್‌ ಹ್ಯಾಕ್‌ ಆಗಬಹುದು

ನವದೆಹಲಿ: ವಾಟ್ಸಪ್‌ನಲ್ಲಿ ಬರುವ ಎಲ್ಲಾ ಚಿತ್ರಗಳನ್ನು ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಾಗಿರಿ. ಡೌನ್‌ಲೋಡ್‌ ಆದ ಚಿತ್ರದಿಂದಲೇ ನಿಮ್ಮ ಫೋನ್‌ ಹ್ಯಾಕ್‌ ಆಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಲಿಂಕ್‌, ಇತ್ಯಾದಿಗಳನ್ನು ಕಳುಹಿಸಿ ಸೈಬರ್‌ ಕಳ್ಳರು ಫೋನ್‌ ಹ್ಯಾಕ್‌ ಮಾಡುತ್ತಿದ್ದರು. ಆದರೆ ತಂತ್ರಜ್ಞಾನ ಮುಂದುವರಿದಂತೆ ಫೋಟೋವನ್ನು ಕಳುಹಿಸಿ ಹ್ಯಾಕ್‌ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಹ್ಯಾಕರ್‌ಗಳು ಒಂದು ಫೋಟೋವನ್ನು ಸೃಷ್ಟಿಸಿ ಅದರಲ್ಲಿ ಮಾಲ್ವೇರ್‌ (ಕುತಂತ್ರಾಂಶ) ತುರುಕಿಸಿ ಕಳುಹಿಸುತ್ತಾರೆ. ಈ ಫೋಟೋವನ್ನು ವಾಟ್ಸಪ್‌ನಲ್ಲಿ ಯಾರೆಲ್ಲ ಡೌನ್‌ಲೋಡ್‌ ಮಾಡುತ್ತಾರೋ ಅವರ ಫೋನ್‌ ಹ್ಯಾಕ್‌ […]

Continue Reading

₹10, ₹500 ಹೊಸ ನೋಟು ಬಿಡುಗಡೆ ಶೀಘ್ರ: ಆರ್‌ಬಿಐ

ಮುಂಬೈ: ಶೀಘ್ರವೇ ಮಹಾತ್ಮಗಾಂಧಿ ಅವರ ಭಾವಚಿತ್ರ ಮತ್ತು ಗವರ್ನರ್ ಸಂಜಯ್ ಮಲ್ಹೊತ್ರಾ ಅವರ ಸಹಿ ಇರುವ ₹10 ಮತ್ತು ₹500 ಮುಖಬೆಲೆಯ ಹೊಸ ನೋಟುಗಳ ಸರಣಿಯನ್ನು ಚಲಾವಣೆಗೆ ಬಿಡುಗಡೆ ಮಾಡಲಾಗುವದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ಮಹಾತ್ಮಗಾಂಧಿ (ಹೊಸ) ಸರಣಿಯ ನೋಟುಗಳಮಾದರಿಯಲ್ಲಿಯೇ ಈ ಹೊಸ ನೋಟುಗಳು ಇರಲಿವೆ ಎಂದು ಹೇಳಿದೆ. ಗವರ್ನರ್ ಮಲ್ಹೊತ್ರಾ ಅವರ ಸಹಿ ಇರುವ ₹100 ಮತ್ತು ₹200 ಮುಖಬೆಲೆಯ ಹೊಸ ನೋಟುಗಳನ್ನೂ ಚಲಾವಣೆಗೆ ಬಿಡುಗಡೆ ಮಾಡುವದಾಗಿ ಕಳೆದ ತಿಂಗಳು ಆರ್‌ಬಿಐ […]

Continue Reading

ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ, ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಲಂಡನ್‌ನಿಂದ ಹಿಂದಿರುಗಿದ ನಂತರ ಅನಾರೋಗ್ಯ ಕಾಣಿಸಿಕೊಂಡಿದೆ, ಶನಿವಾರ ರಾತ್ರಿಯೇ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು. ನಿರ್ಜಲೀಕರಣದಿಂದ ಅಸ್ವಸ್ಥತೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಂಜಾನ್‌ ಉಪವಾಸದಲ್ಲಿರುವುದರಿಂದ ಮತ್ತಷ್ಟು ಉಲ್ಬಣಗೊಂಡಿದೆ ಎಂದು ರೆಹಮಾನ್ ವಕ್ತಾರರೊಬ್ಬರು ತಿಳಿಸಿರುವದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರೆಹಮಾನ್ ಅವರ ಆಪ್ತ ಮೂಲಗಳು ತಿಳಿಸಿವೆ.

Continue Reading