ಮಗ ಮದುವೆಯಾಗಬೇಕಿದ್ದ ಯುವತಿಯನ್ನೆ ವರಿಸಿದ ಅಪ್ಪ

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ 55 ವರ್ಷದ ವ್ಯಕ್ತಿಯೊಬ್ಬ ತನ್ನ ಮಗ ಮದುವೆಯಾಗಬೇಕಿದ್ದ ವಧುವನ್ನೇ ಮದುವೆಯಾಗಿರುವ ಶಾಕಿಂಗ್ ಘಟನೆ ನಡೆದಿದೆ. 6 ಮಕ್ಕಳ ತಂದೆ ಮತ್ತು ಮೂರು ಮಕ್ಕಳ ಅಜ್ಜನಾಗಿರುವ ಶಕೀಲ್ ಎಂಬವರೇ ಮಗನಿಗೆ ನಿಶ್ಚಿಯವಾಗಿದ್ದ ಮಹಿಳೆಯನ್ನು ವರಿಸಿದರಾಗಿದ್ದು, ತಮ್ಮ ಮಗಳ ಮದುವೆಯ ನಂತರ ಸಮೀಪದ ಹಳ್ಳಿಯ 22 ವರ್ಷದ ಆಯೇಷಾ ಎಂಬ ಮಹಿಳೆಯನ್ನು ಪದೆ ಪದೆ ಭೇಟಿಯಾಗುತ್ತಿದ್ದರು ಎಂದು ಅವರ ಪತ್ನಿ ಶಬಾನಾ ಹೇಳಿದ್ದಾರೆ. ಮಗ ಅಮಾನ್ ಜೊತೆ ಆಯೇಷಾಳ ಮದುವೆ ನಿಶ್ಚಯ […]

Continue Reading

ಈತ ಕಲಿಯುಗದ ಷಹಜಹಾನ್‌: ಪತ್ನಿಗಾಗಿ ತಾಜ್‌ಮಹಲ್ ನಂತಹ ಮನೆ ಕಟ್ಟಿಸಿದ ಭೂಪ

ಭೋಪಾಲ್: ತಾಜ್‍ ಮಹಲ್ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಾರೆ. ಆದರೆ ಮಧ್ಯಪ್ರದೇಶದ ದಂಪತಿ ತಮ್ಮ ಮನೆಯನ್ನು ಈ ಐತಿಹಾಸಿಕ ಸ್ಮಾರಕದ ಪ್ರತಿಕೃತಿಯಂತೆ ವಿನ್ಯಾಸಗೊಳಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಈ ಮನೆಯನ್ನು ನೋಡಿ ಫುಲ್‌ ಫಿದಾ ಆಗಿದ್ದಾರೆ. ಆನಂದ್ ಪ್ರಕಾಶ್ ಚೌಕ್ಸೆ ಮತ್ತು ಇತನ ಪತ್ನಿ ಒಡೆತನದ ನಾಲ್ಕು ಬೆಡ್ ರೂಂಗಳಿರುವ ಮನೆ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿದೆ. ಈ ಮನೆಯನ್ನು ಮಕ್ರಾನಾ ಅಮೃತಶಿಲೆಯನ್ನು […]

Continue Reading

ಅಹಮದಾಬಾದ್‌ ವಿಮಾನ ಪತನ: ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದ ಹುಡುಗನಿಗೆ ಶುರುವಾಗಿದೆ ಭಯ

ಅಹಮದಾಬಾದ್‌: ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಅಹಮದಾಬಾದ್‌ ವಿಮಾನ ನಿಲ್ದಾಣದ ಬಳಿ ಏರ್’ಇಂಡಿಯಾ ಪತನಗೊಂಡ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ದುರಂತ ನೆನೆಪು ಮಾಡಿಕೊಂಡರೆ ಈ ಕ್ಷಣವೂ ಕಣ್ತುಂಬಿಕೊಳ್ಳುತ್ತದೆ. 12 ಸಿಬ್ಬಂದಿ ಸೇರಿದಂತೆ 241 ಜನ ದುರ್ಘಟನೆಯಲ್ಲಿ ಸಾವಿಗೀಡಾದರು. ವಿಮಾನ ಪತನಗೊಂಡ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರಲ್ಲೂ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ವಿಡಿಯೋವೊಂದು ಎಲ್ಲರ ಗಮನ ಸೆಳೆಯಿತು. ಆ ವಿಡಿಯೋ ಮಾಡಿದ್ದು ಆರ್ಯನ್ ಎಂಬ ಹುಡುಗ. ಈ ವಿಡಿಯೋ ವೈರಲ್ ಆದ ನಂತರ […]

Continue Reading

ಭಕ್ತರ ಕೈಯಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಪರ್ಸ್‌ ಕಸಿದು ಪರಾರಿಯಾದ ಮಂಗ

ಉತ್ತರಪ್ರದೇಶ: ಭಕ್ತರೊಬ್ಬರ ಕೈಯಲ್ಲಿದ್ದ ಸುಮಾರು 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹೊಂದಿರುವ ಪರ್ಸ್‌ ಮಂಗವೊಂದು ಕಸಿದುಕೊಂಡು ಪರಾರಿಯಾಗಿರುವ ಘಟನೆ ಮಥುರಾ ಸಮೀಪದ ಠಾಕೂರ್‌ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಅಲಿಗಢ್‌ ನಿವಾಸಿ ಅಭಿಷೇಕ್‌ ಅಗರ್ವಾಲ್‌ ತಮ್ಮ ಕುಟುಂಬದ ಸದಸ್ಯರ ಜೊತೆಗೆ ವೃಂದಾವನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ತೆರಳಿ ವಾಪಸ್‌ ಆಗುವಾಗ ಅಗರ್ವಾಲ್‌ ಅವರ ಪತ್ನಿಯ ಕೈಯಲ್ಲಿದ್ದ ಪರ್ಸ್‌ನ್ನು ಮಂಗ ಕಸಿದುಕೊಂಡು ಪರಾರಿಯಾಗಿದೆ. ಪರ್ಸ್‌’ನಲ್ಲಿ ಬೆಲೆಬಾಳುವ ಚಿನ್ನಾಭರಣ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ […]

Continue Reading

ಮಗಳ ಮೇಲೆ ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗೊಕೆ ಹೆತ್ತ ತಾಯಿಯೆ ಸಪೋರ್ಟ್‌: ಬಿಜೆಪಿ ಮಾಜಿ ನಾಯಕಿ ಅರೆಸ್ಟ್‌

ಹರಿದ್ವಾರ: ಉತ್ತರಾಖಂಡದ ಹರಿದ್ವಾರದ ಮಾಜಿ ಬಿಜೆಪಿ ನಾಯಕಿ ಮತ್ತು ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ಅವರ ವಿರುದ್ಧ ತನ್ನ 13 ವರ್ಷದ ಮಗಳ ಮೇಲೆ ತನ್ನ ಪ್ರಿಯಕರ ಮತ್ತು ಅವನ ಸಹಾಯಕನಿಂದ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಆರೋಪ ಕೇಳಿಬಂದಿದೆ. ಈ ಘಟನೆ ಜನವರಿಯಿಂದ ಮಾರ್ಚ್ 2025ರವರೆಗೆ ಹಲವು ಬಾರಿ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿದ್ವಾರ, ಆಗ್ರಾ, ಮತ್ತು ಬೃಂದಾವನದಲ್ಲಿ ಅನಾಮಿಕಾ ಶರ್ಮಾ ಅವರ 30ರ ವಯಸ್ಸಿನ ಪ್ರಿಯಕರ ಸುಮಿತ್ ಪಟ್ವಾಲ್ […]

Continue Reading

ವಿಚಕ್ಷಣ ದಳದ ದಾಳಿಗೆ ಹೆದರಿ ಕಿಟಕಿಯಿಂದ ನೋಟುಗಳ ಬಂಡಲ್ ಎಸೆದ ಇಂಜಿನಿಯರ್‌: 2.1 ಕೋಟಿ ಜಪ್ತಿ

ಭುವನೇಶ್ವರ: ನಿನ್ನೆಯಷ್ಟೇ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ವಿಚಕ್ಷಣ ದಳದ ದಾಳಿಗೆ ಹೆದರಿ ಸಿಕ್ಕಿ ಬೀಳುವ ಭಯದಲ್ಲಿ ವಿಲೇಜ್ ಅಕೌಂಟೆಂಟ್‌ ಒಬ್ಬರು ತಾವು ಪಡೆದ ಲಂಚದ ಹಣವನ್ನು ನುಂಗಿದಂತಹ ಘಟನೆ ನಡೆದ ಬಗ್ಗೆ ವರದಿಯಾಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಒಡಿಶಾದಲ್ಲಿ ಇದೆ ರೀತಿಯ ಘಟನೆಯೊಂದು ನಡೆದಿದೆ. ಮನೆ ವಿಚಕ್ಷಣ ದಳದ ದಾಳಿ ನಡೆಯುವುದು ತಿಳಿಯುತ್ತಿದ್ದಂತೆ ಸರ್ಕಾರಿ ಅಧಿಕಾರಿಯೊಬ್ಬ ತಮ್ಮ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ನೋಟುಗಳನ್ನು ಕಿಟಿಕಿಯ ಮೂಲಕ ಹೊರಗೆ ಎಸೆದಂತಹ ಘಟನೆ ನಡೆದಿದೆ. ಈತನ ಬಳಿಯಿಂದ 2.1 […]

Continue Reading

ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

ನವದೆಹಲಿ: ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರಗಳ ನೆರವಿನ ಮಧ್ಯೆ ಭಾರತವು ತನ್ನದೆ ಆದ ಸ್ಟೆಲ್ತ್‌ ಫೈಟರ್‌ ಜೆಟ್‌ ಯೋಜನೆಗೆ ಅನುಮೋದನೆ ನೀಡಿದೆ. ಭಾರತದ ವಾಯು ಪ್ರಾಬಲ್ಯವನ್ನು ಎದುರಿಸಲು ತನ್ನ ಶಸ್ತ್ರಾಗಾರವನ್ನು ಬಲಪಡಿಸಲು ಪಾಕಿಸ್ತಾನಕ್ಕೆ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪೂರೈಸುವ ಯೋಜನೆಯನ್ನು ಚೀನಾ ತ್ವರಿತಗೊಳಿಸುತ್ತಿದೆ. ಈ ನಡುವೆ ದೇಶದ ಮೊದಲ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ಈ ಫೈಟರ್ ಜೆಟ್ ಅವಳಿ-ಎಂಜಿನ್, 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಈ ಕಾರ್ಯಕ್ರಮವನ್ನು […]

Continue Reading

ಕೋಲಾರದಲ್ಲಿ ಏರ್‌ಬಸ್‌-ಟಾಟಾ ಕಾಪ್ಟರ್ ಘಟಕ: ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಫ್ಯಾಕ್ಟರಿ

ನವದೆಹಲಿ: ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆ ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ. ಬೆಂಗಳೂರಿನಿಂದ ಕೇವಲ 2 ತಾಸು ದೂರದಲ್ಲಿರುವ, ಕೋಲಾರದ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ತಲೆ ಎತ್ತಲಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ. ಅತ್ಯಂತ ಪ್ರತಿಷ್ಠಿತವಾಗಿರುವ ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳು […]

Continue Reading

ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ, ಆ ಮಗಳಿಂದಲೆ ಕೊಲೆಯಾದ ತಾಯಿ

ಭುವನೇಶ್ವರ: ಅಪ್ಪ-ಅಮ್ಮನಿಗೆ ಬೇಡವಾದ ಮಗು ಕಸದಬುಟ್ಟಿಯಲ್ಲಿ, ರಸ್ತೆಯ ಬದಿಯಲ್ಲಿ ಸೇರುತ್ತದೆ. ಇನ್ನು ಕೆಲವರು ಹೆಣ್ಣುಮಗು ಹುಟ್ಟಿತೆಂಬ ಕಾರಣಕ್ಕೆ ಅದನ್ನು ಕೊಲ್ಲುವವರೂ ಇದ್ದಾರೆ. ಆದರೆ ಒಡಿಶಾದ ಮಹಿಳೆ ರಾಜಲಕ್ಷ್ಮಿಕರ್ ಎಂಬುವವರಿಗೆ ಮಕ್ಕಳೆಂದರೆ ಜೀವ. ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನುಪ್ರಕಾರ ಆ ಮಗುವನ್ನು ದತ್ತು ಪಡೆದು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ […]

Continue Reading

13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿಯಾದ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್‌ ಅನುಮತಿ

ಗಾಂಧಿನಗರ: 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ, ಆತನಿಂದಲೇ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಪ್ರಕರಣದಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ. ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿರುವ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು […]

Continue Reading