20 ವರ್ಷಗಳಲ್ಲಿ 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಕಳ್ಳ, ಐಷಾರಾಮಿ ಜೀವನ ನಡೆಸುತ್ತಿದ್ದ ಎಂಬಿಎ ಪದವೀಧರ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ ?

ಚೆನ್ನೈ: 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದು ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿರುವ ಕಳ್ಳನೊಬ್ಬ 20 ವರ್ಷಗಳ ನಂತರ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. ರಾಜಸ್ಥಾನದ ಸತೇಂದ್ರ ಸಿಂಗ್ ಶೇಖಾವತ್ ಬಂಧಿತ. ಈತ ಕಳೆದ 20 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದಿದ್ದಾನೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಕಾರುಗಳನ್ನು ಕದ್ದು ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ […]

Continue Reading

20 ರೂಪಾಯಿಗಾಗಿ ತಾಯಿಯನ್ನು ಕೊಂದ ಪಾಪಿ ಮಗ

ಚಂಡೀಘಡ: 20 ರೂ. ಕೊಡಲು ನಿರಾಕರಿಸಿದ ತಾಯಿಯನ್ನು ಪಾಪಿ ಮಗನೊಬ್ಬ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದಿದೆ. ಜೈಸಿಂಗ್‌ಪುರ ಗ್ರಾಮದ ನಿವಾಸಿ ರಜಿಯಾ (56) ಹತ್ಯೆಯಾದ ತಾಯಿ. ಮಗ ಜಮ್ಶದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಜಮ್ಶದ್ ಗಾಂಜಾ ವ್ಯಸನಿಯಾಗಿದ್ದ. ಆರೋಪಿಯು ಶನಿವಾರ ರಾತ್ರಿ ತಾಯಿ ಬಳಿ 20 ರೂ. ಕೇಳಿದ್ದ. ರಜಿಯಾ ಹಣ ನೀಡಲು ನಿರಾಕರಿಸಿದ್ದಕ್ಕೆ ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ರಾತ್ರಿಯಿಡಿ ತಾಯಿಯ […]

Continue Reading

ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಸಿಗುವ ಸೌಲಭ್ಯ ಒಂದಾ, ಎರಡಾ, ಕೇಳಿದರೆ ದಂಗಾಗುತ್ತಿರಾ

ಭಾರತ ರತ್ನವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಜಾತಿ, ಮತ, ಲಿಂಗ ಅಥವಾ ಧರ್ಮ ಎಂದು ನೋಡದೆ, ಸಮಾಜಕ್ಕೆ ಅಸಾಧಾರಣ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿವರ್ಷ ಗರಿಷ್ಠ ಮೂರು ಜನರು ಈ ಪ್ರಶಸ್ತಿಗೆ ಭಾಜನರಾಗುತ್ತಾರೆ. ಈ ಪ್ರಶಸ್ತಿ ಪಡೆದವರು ವಿವಿಧ ಸೌಲಭ್ಯಗಳು ಪಡೆಯುತ್ತಾರೆ, ಆದರೆ ಈ ಪ್ರಶಸ್ತಿ ಹೆಸರನ್ನು ತಮ್ಮ ಹೆಸರಿಗೆ ಮೊದಲು ಅಥವಾ ಕೊನೆಯಲ್ಲಿ ಬಳಸಲು ಅನುಮತಿಯಿಲ್ಲ. ಈ ಪ್ರಶಸ್ತಿ ಆರಂಭವಾಗಿದ್ದು ಯಾವಾಗ ? 2 ಜನವರಿ 1954 ರಂದು ಭಾರತದ ಮೊದಲ […]

Continue Reading

ಆ ಒಂದು ಮಾತು ಆಡಿದ್ದಕ್ಕೆ ASI ಕೊಂದು ಆಕೆ ಕೆಲಸ ಮಾಡುತ್ತಿದ್ದ ಠಾಣೆಗೆ ಶರಣಾದ ಯೋಧ

ಗುಜರಾತ್​: ಕಚ್​ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಲಿವ್​ ಇನ್​ ಸಂಗಾತಿ ಹಾಗೂ ಸಿಆರ್​ಪಿಎಫ್​ ಕಾನ್​​ಸ್ಟೆಬಲ್​ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತಳನ್ನು ಅರುಣಾಬೆನ್ ನಾಥುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ದಿಲೀಪ್ ಡಾಂಗ್ಚಿಯಾ, ಅರುಣಾಬೆನ್​ರನ್ನು ಕೊಂದು, ಆಕೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ತೆರಳಿ ತನ್ನ ಅಪರಾಧವನ್ನು ದಿಲೀಪ್​ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅರುಣಾಬೆನ್ ಅವರು ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ […]

Continue Reading

ಮಗು ಸತ್ತಿದೆ ಗರ್ಭಪಾತ ಮಾಡಿಸಿ ಎಂದ ಸರ್ಕಾರಿ ಆಸ್ಪತ್ರೆ ವೈದ್ಯರು: ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ

ಸತ್ನ: ಗರ್ಭದಲ್ಲೆ ಶಿಶು ಸತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೇಳಿದ ಬಳಿಕ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಆರೋಗ್ಯವಂತ ಮಗುವಿಗೆ ಜನ್ಮ  ನೀಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.   ದುರ್ಗಾ ದ್ವಿವೇದಿ ಎಂಬುವವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಮಹಿಳೆಯ ಗರ್ಭದಲ್ಲಿ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ಕೂಡಲೇ ಮಹಿಳೆಯ ಪತಿ ಪತ್ನಿಯನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು. ದುರ್ಗಾ ಅವರನ್ನು ಸೋಮವಾರ ರಾತ್ರಿ ಹೆರಿಗೆ ನೋವೆಂದು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 4 ಗಂಟೆ ಸುಮಾರಿಗೆ ತೊಂದರೆಯಾದ್ದರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಂಡು ಹೋಗಲಾಯಿತು. ದುರ್ಗಾ ಅವರ ಕುಟುಂಬದವರ ಪ್ರಕಾರ ಬೆಳಗ್ಗೆ 7.30ಕ್ಕೆ ಜಿಲ್ಲಾ ಆಸ್ಪತ್ರೆಗೆ ತಲುಪಿ ರಕ್ತ ಪರೀಕ್ಷೆ ಮಾಡಲಾಯಿತು. ಬೆಳಗ್ಗೆ 9 ಗಂಟೆಗೆ ವೈದ್ಯರು ಪರೀಕ್ಷೆ ಮಾಡಿದರು, ಆದರೆ ಮಗುವಿನ ಹೃದಯ ಬಡಿತ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಭ್ರೂಣದ ಚಲನೆ ಕಂಡುಬಂದಿಲ್ಲ […]

Continue Reading

ತನ್ನ ಪತ್ನಿ ಚಿಕನ್​ ತಿನ್ನಲ್ಲ ಎಂದಿದ್ದಕ್ಕೆ ಸೂಸೈಡ್​ ಮಾಡಿಕೊಂಡ ಗಂಡ

ತನ್ನ ಪತ್ನಿ ಚಿಕನ್ ತಿನ್ನಲ್ಲ ಎಂದಿದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ರವಿವಾರ ನಡೆದಿದೆ. ತಂಜವೂರು ಜಿಲ್ಲೆಯ ಕುಂಭಕೋಣ ತಾಲೂಕಿನ ಸಕ್ಕೋಟ್ಟೈ ಪ್ರದೇಶದ ನಿವಾಸಿ ಮಣಿಕಂಠನ್ ​(29) ಮೃತಪಟ್ಟಿದ್ದಾರೆ. ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನ್​, ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುಬ್ಬಲಕ್ಷ್ಮಿ (25) ಅವರನ್ನು ಪ್ರೀತಿಸುತ್ತಿದ್ದರು. ಒಂದು ತಿಂಗಳ ಹಿಂದೆ ಮನೆಯವರನ್ನು ದಿಕ್ಕರಿಸಿ ಇಬ್ಬರು ಮದುವೆಯಾಗಿದ್ದರು. ಕುಟುಂಬ ವಿರೋಧಿಸಿದ್ದರಿಂದ ತಿರುಪ್ಪೂರು ಜಿಲ್ಲೆಯ ವೆಲ್ಲಾ ಕೋವಿಲ್‌ನ ಪುತ್ತೂರಿನಲ್ಲಿರುವ ಸುಬ್ಬಲಕ್ಷ್ಮಿಯ ಸಹೋದರಿ ಮೇನಕಾ ಅವರ ಮನೆಯಲ್ಲಿ ಉಳಿದುಕೊಂಡರು. […]

Continue Reading

ಇಂಜಿನಿಯರಿಂಗ್ ವೃತ್ತಿ ತೊರೆದು ಕೃಷಿಗೆ ಮರಳಿದ ಈಕೆ ಈಗ ಕೋಟ್ಯಾಧಿಪತಿ

ಛತ್ತೀಸ್‌ಗಢ: ಕೃಷಿಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅಧುನಿಕ ತಂತ್ರಜ್ಞಾನವನ್ನು ಬಳಸಿದರೆ ಯಶಸ್ಸು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅನೇಕ ಯುವ ಕೃಷಿಕರಿದ್ದಾರೆ ಅವರೊಲ್ಲಬರು ಛತ್ತೀಸ್‌ಗಢದ ಸ್ಮರಿಕಾ ಚಂದ್ರಕರ್ ಆಗಿದ್ದಾರೆ. ಛತ್ತಿಸ್‌ಗಢದ ಚಾರ್ಮುಡಿಯಾ ಎಂಬ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಕೃಷಿಯನ್ನು ನೋಡುತ್ತಲೇ ದೊಡ್ಡವಳಾದ ಸ್ಮರಿಕಾ ಓದಿದ್ದು ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ. ಇಷ್ಟು ಓದಿದ ಅವರು ಪುಣೆಯಲ್ಲಿ 5 ವರ್ಷಗಳ ಕಾಲ ಹಿರಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ. 5 ವರ್ಷಗಳ ಕಾಲ ಹೊರಗೆ ಕೆಲಸ […]

Continue Reading

ಅನಾಮಧೇಯ ಭಕ್ತನಿಂದ ಶಿರಡಿ ಸನ್ನಿಧಿಗೆ 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ಮೌಲ್ಯದ ಆಭರಣ ದಾನ

ಮುಂಬೈ: ಗುರುಪೂರ್ಣಿಮೆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 59 ಲಕ್ಷದ ಚಿನ್ನದ ಕಿರೀಟ ಸೇರಿದಂತೆ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದಾನವಾಗಿ ನೀಡಿದ್ದು, ಬಾಬಾ ಕೃಪೆಗೆ ಪಾತ್ರರಾಗಿದ್ದಾರೆ. ದೇಣಿಗೆ ನೀಡಲಾದ 65 ಲಕ್ಷ ರೂ. ಮೌಲ್ಯದ ಆರಭರಣಗಳ ಪೈಕಿ 566 ಗ್ರಾಂ ತೂಕದ 59 ಲಕ್ಷ ಮೌಲ್ಯದ ಚಿನ್ನದ ಕಿರೀಟ, 54 ಗ್ರಾಂ ತೂಕದ ಚಿನ್ನದ ಹೂವುಗಳು (ಆಭರಣ), 2 ಕೆಜಿ ತೂಕದ ಬೆಳ್ಳಿಯ ಹಾರ ಸೇರಿವೆ. ಆಭರಣವನ್ನು ಬಾಬಾಗೆ ಅರ್ಪಿಸುವಾಗ ಭಕ್ತರು […]

Continue Reading

ಆಸ್ಪತ್ರೆಯಲ್ಲಿ ಸತ್ತಿದೆ ಎಂದ ಕಂದಮ್ಮ ಅಂತ್ಯಕ್ರಿಯೆಗೂ ಮುನ್ನ ಜೀವಂತ

ಮಹಾರಾಷ್ಟ್ರ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಸತ್ತಿದೆ ಎಂದು ಘೋಷಿಸಿದ ನವಜಾತ ಶಿಶು ಸುಮಾರು 12 ಗಂಟೆಗಳ ನಂತರ, ಅಂತ್ಯಕ್ರಿಯೆಗಿಂತ ಕೆಲವೇ ಕ್ಷಣಗಳ ಮೊದಲು ಜೀವಂತವಾಗಿ ಪತ್ತೆಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಅಂಬಾಜೋಗೈನಲ್ಲಿರುವ ಸ್ವಾಮಿ ರಮಾನಂದ ತೀರ್ಥ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಜುಲೈ 7ರ ರಾತ್ರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ನವಜಾತ ಶಿಶು ರಾತ್ರಿ 8:00 ಗಂಟೆ ಸುಮಾರಿಗೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ, […]

Continue Reading

ರಸ್ತೆಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

ಫರೀದಾಬಾದ್: ನಾಯಿ ಮರಿಯನ್ನು ತಂದು ಮುದ್ದಾಗಿ ಸಾಕುತ್ತಾರೆ. ಆದರೆ ನಾಯಿಗೆ ವಯಸ್ಸಾದರೆ, ಆರೋಗ್ಯ ಹದಗೆಟ್ಟಿದ್ದರೆ, ನಾಯಿ ಮಾತು ಕೇಳದಿದ್ದರೆ ಕೆಲವರು ಸಾಕಿದ ನಾಯಿಯನ್ನು ರಸ್ತೆಯಲ್ಲಿ ಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಾಲೀಕ ಸಾಕಿದ ನಾಯಿಯನ್ನು ಮನೆಯಿಂದ ಹಲವು ಕಿಲೋಮೀಟರ್ ದೂರದವರೆಗೆ ಕಾರಿನಲ್ಲಿ ಕರೆದುಕೊಂಡು ಬಂದು ಮಾರುಕಟ್ಟೆ ಬಳಿ ಕಾರಿನಿಂದ ಕೆಳಗಿಳಿಸಿ, ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ. ಮಾಲೀಕನ ಕಾರು ತೆರಳುತ್ತಿರುವುು ಗಮನಿಸಿದ ನಾಯಿ ಕಾರನ್ನು ಹಿಂಬಾಲಿಸಿದೆ. ಹಲವು ಕಿಲೋಮೀಟರ್ ವರೆಗೆ ನಾಯಿ ಕಾರು ಹಿಂಬಾಲಿಸಿ ಬಸವಳಿದ ಘಟನೆ […]

Continue Reading