ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಸುದೀಪ್ ನಿವೃತ್ತಿ ಬಗ್ಗೆ ಮಾತೆತ್ತಿದ್ದಾರೆ. ಎಲ್ಲಾ ಹೀರೋಗೂ ಒಂದು ಟೈಮ್ ಲೈನ್ ಅಂತ ಇರುತ್ತದೆ. ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಅಂತ ರಿಟೈರ್‌ಮೆಂಟ್ ಬಗ್ಗೆ ಸುದೀಪ್ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಸುದೀಪ್, ಟೆನ್ಶನ್ ಅಂತ ಅಲ್ಲ, ಸುಸ್ತಾಗಬಹುದು. ಆದರೆ ನೀವು ಮಾಡೋದೆಲ್ಲಾ ಕರೆಕ್ಟ್ ಮಾಡಿದ್ರೆ ಎಲ್ಲಿ ಸುಸ್ತಾಗುತ್ತೆ ? ನಮಗೆಲ್ಲರಿಗೂ ವಿಶ್ರಾಂತಿ ಬೇಕು. ಹೊಟ್ಟೆ ಇದೆ ಅಂತಾ ಸಿಕ್ಕಾಪಟ್ಟೆ ತಿನ್ನೊನಲ್ಲ. […]

Continue Reading

ಉತ್ತರ ಕನ್ನಡ ಸಂಸದ ಕಾಗೇರಿ ಮನೆಯಲ್ಲಿ ಚಿರತೆ ಪ್ರತ್ಯಕ್ಷ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ಆಹಾರ ಅರಸಿ ಬಂದ ಚಿರತೆಯೊಂದು ನುಗ್ಗಿದ್ದು, ಸಂಸದರ ಮನೆಯ ಸಾಕುನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ. ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಕುಟುಂಬದ ಸದಸ್ಯರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಇದೆ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು, ಮನೆಯ ಮುಂಭಾಗದಲ್ಲಿದ್ದ ಸಾಕುನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಸಾಕು […]

Continue Reading

ನಿಮಗೆ ಸಲಾಂ ಹೊಡಿಬೇಕಾ ?: ತಹಸೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

ಬೆಂಗಳೂರು: ಪೋಡಿ ದುರಸ್ತಿ ಮುಗಿದಿದ್ದರು ಎಡಿಎಲ್‌ಆರ್‌ಗಳಿಗೆ ಕಡತಗಳನ್ನು ಕಳುಹಿಸದಿರುವ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನ ನಿಮ್ಮ ಬಳಿ ಬಂದು ಸಲಾಂ ಹೊಡೀಬೇಕಾ ? ಅಲ್ಲಿ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದು, ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ನಿಮ್ಮಂತಹವರು ಮಾಡುತ್ತಿರುವ ಕೆಲಸದಿಂದ ಇಡಿ ಇಲಾಖೆಗೆ ಕೆಟ್ಟ ಹೆಸರು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಕಾಸಸೌಧದಿಂದ ರಾಜ್ಯದ ಎಲ್ಲಾ ತಹಸೀಲ್ದಾರ್‌ ಹಾಗೂ ಎಡಿಎಲ್‌ಆ‌ರ್‌ (ಭೂ ದಾಖಲೆಯ ಸಹಾಯ ನಿರ್ದೇಶಕರು) ಅಧಿಕಾರಿಗಳ ಜತೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಗತಿ ಪರಿಶೀಲನಾ […]

Continue Reading

ಕಾಡಿನಿಂದ ಹೊರಬಂದ ನಕ್ಸಲರು: ಶರಣಾದವರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ

ಬೆಂಗಳೂರು: 6 ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾಗಿದೆ, ಚಿಕ್ಕಮಗಳೂರು ಜಿಲ್ಲಾಡಳಿತ ಬದಲಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶರಣಾಗರಾಗುತ್ತಿದ್ದಾರೆ. ಹೀಗಾಗಿ 6 ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ, ಸಂಜೆ ವೇಳೆಗೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಲಿದ್ದಾರೆ. ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಿಸಿದೆ. ನಿನ್ನೆ ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ […]

Continue Reading

ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಬಾರಿಗೆ ಸಿಎಂ ಮುಂದೆ 6 ನಕ್ಸಲರು ಶರಣಾಗತಿ

ರಾಯಚೂರು: ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾಕೆಂದರೆ ಕಳೆದ ಹಲವು ವರ್ಷಗಳಿಂದ ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಈಗ ಮುಖ್ಯವಾಹಿನಿಗೆ ಬಂದಿದ್ದಾರೆ. 6 ನಕ್ಸಲರು ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮ್ಮುಳದಲ್ಲೇ ಶರಣಾಗಿದ್ದಾರೆ. ಇನ್ನು ಶರಣಾದ ನಕ್ಸಲರಿಗೆ ಸಿಎಂ ಸಂವಿಧಾನದ ಪುಸ್ತಕ ನೀಡಿದರು. ಈ ಮೂಲಕ ಕರ್ನಾಟಕ ನಕ್ಸಲ ಮುಕ್ತ ರಾಜ್ಯ ಎಂದು ವ್ಯಾಖ್ಯಾನಿಸಬಹುದು. […]

Continue Reading

209 ತಾಲೂಕುಗಳಲ್ಲಿ ಭೂ ಸುರಕ್ಷಾ ಪ್ರಾರಂಭ: ಕಂದಾಯ ಇಲಾಖೆ

ಬೆಂಗಳೂರು: ತಾಲೂಕು ಕಚೇರಿಯಲ್ಲಿರುವ ಪ್ರಮುಖ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ‘ಭೂ ಸುರಕ್ಷತಾ ಯೋಜನೆ’ಯ ಎರಡನೇ ಹಂತಕ್ಕೆ ಇದೆ ಜನವರಿಯಿಂದ ಚಾಲನೆ ನೀಡಲಾಗುವದು ಎಂದು ಕಂದಾಯ ಇಲಾಖೆ ಹೇಳಿದೆ. ತಾಲೂಕು ಕಚೇರಿಗಳಲ್ಲಿ ಸಂಗ್ರಹವಾಗಿರುವ ಅತ್ಯಂತ ಪ್ರಮುಖವಾದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಒಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡಿರುವ ಈ ಕಾರ್ಯದಲ್ಲಿ ಇದುವರೆಗೂ 7.95 ಕೋಟಿ ಪುಟಗಳನ್ನು ಒಳಗೊಂಡ 14.87 ಲಕ್ಷ […]

Continue Reading

ವಿಮೆ ದುರಾಸೆಗೆ ತಂದೆಯನ್ನೇ ಕೊಲ್ಲಿಸಿದ ಪುತ್ರ

ಕಲಬುರಗಿ: ಸಾಲದ ಹಣ ತರೋಣವೆಂದು ನಂಬಿಸಿ ತಂದೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದ ಪುತ್ರ ಮಾರ್ಗ ಮಧ್ಯದಲ್ಲಿ ಟ್ರ್ಯಾಕ್ಟರ್‌ನಿಂದ ಎರಡು ಬಾರಿ ಡಿಕ್ಕಿ ಹೊಡೆಸಿ ಆತನನ್ನು ಕೊಲ್ಲಿಸಿ ವಿಮೆಯ ಹಣದಲಿ, ಸಾಲ ತೀರಿಸಲು ಹವಣಿಸಿದ್ದವನು ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಜುಲೈ 2024ರಲ್ಲಿ ದಾಖಲಾಗಿದ್ದ ಅಪಘಾತ ಪ್ರಕರಣವನ್ನು ಭೇದಿಸಿದ್ದ ಪೊಲೀಸರಿಂದ ಕೊಲೆಯಾದ ಮಾಳಿಂಗರಾವ ಅವರ ಮಗ ಸತೀಶನ ಭೀಭತ್ಸ ಕೃತ್ಯ ಬಯಲಾಗಿದೆ. ಆರೋಪಿಗಳು ರೂಪಿಸಿದ್ದ ಕೊಲೆಯ ಸಂಚು ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಕೃತ್ಯದ […]

Continue Reading

ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ನಂದಿನಿ ವತಿಯಿಂದ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದರು. ಮಾರುಕಟ್ಟೆಯಲ್ಲಿ ಇನ್ನುಮುಂದೆ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ದೊರೆಯಲಿದೆ. ಈ ಸಂದರ್ಭದಲ್ಲಿ ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ವೆಂಕಟೇಶ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್, […]

Continue Reading

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಎನ್.ಆರ್ ಪುರ ತಾಲೂಕಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಜೀವಂತ ಆನೆಯನ್ನೂ ನಾಚಿಸುವಂತೆ ರೋಬೋಟಿಕ್ ಆನೆ ಇದೆ. ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ. ಈ ರೋಬೋಟಿಕ್ ಆನೆ ಸದಾ ಮಠದ ಆವರಣದಲ್ಲೇ ಇದ್ದು, ಭಕ್ತರನ್ನು ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ. ಸದಾ ಕಣ್ಣು ಬಿಟ್ಟು, ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನು […]

Continue Reading

ಸಂತಾನಹರಣ ಶಸ್ತ್ರಚಿಕಿತ್ಸೆ ನಂತರವೂ ಮಗುವಿಗೆ ಜನ್ಮ ನೀಡಿದ ಮಹಿಳೆ: ವೈದ್ಯನಿಗೆ ದಂಡ

ಚಿತ್ರದುರ್ಗ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು 5 ವರ್ಷದ ನಂತರ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸರಿಯಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55 ಸಾವಿರ ರೂ. ದಂಡ ವಿಧಿಸಿದೆ. 28 ಏಪ್ರಿಲ್ 2014ರಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 2 ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ. ಕೆ ಶಿವಕುಮಾರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಮೇಲೆ ಕೂಡ ಲಕ್ಷ್ಮಮ್ಮ ಗರ್ಭಿಣಿಯಾಗಿ 26 ಜನೆವರಿ 2020 ರಂದು ಮಗುವಿಗೆ ಜನ್ಮ ನೀಡಿದ್ದರು. ವೈದ್ಯರು […]

Continue Reading