ಬಳ್ಳಾರಿಯಲ್ಲಿ ಚರ್ಚೆಗೆ ಗ್ರಾಸವಾದ ಅಮಿತ್ ಶಾ, ಜನಾರ್ದನ ರೆಡ್ಡಿ ಭೇಟಿ

ಬಳ್ಳಾರಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಬಳ್ಳಾರಿಯ ಬಿಜೆಪಿ ನಾಯಕ ಶ್ರೀರಾಮುಲು ಬಯಸಿದ್ದರು. ಆದರೆ ಇತ್ತೀಚಿಗಷ್ಟೇ ಅವರ ವಿರುದ್ಧ ಮುನಿಸಿಕೊಂಡಿರುವ ಶಾಸಕ ಜನಾರ್ದನ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ರಾಮುಲುಗೆ ಅಮಿತ್ ಶಾ ಭೇಟಿಯಾಗುವ ಅವಕಾಶ ಸಿಗಲಿಲ್ಲ. ಇದು ಸದ್ಯ ಬಳ್ಳಾರಿ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡ ಬಳಿಕ ದೆಹಲಿಗೆ […]

Continue Reading

ಬಜೆಟ್‌ನಲ್ಲಿ ಹೊಸ ಜಿಲ್ಲೆಗಳ ಘೋಷಣೆ ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 7 ರಂದು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಇದ್ದಾರೆ. ಬಜೆಟ್‌ನಲ್ಲಿ ವಿಶೇಷ ಯೋಜನೆಗಳ ಜೊತೆಗೆ ಕೆಲವು ಜಿಲ್ಲೆಗಳ ರಚನೆ ಕುರಿತು ಶುಭಸುದ್ದಿ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 16ನೇ ಬಜೆಟ್‌ನಲ್ಲಿ ಗ್ಯಾರಂಟಿಗಳ ಹೊರತಾಗಿ ಈ ಬಾರಿಯ ಬಜೆಟ್‌ನಲ್ಲಿ ಹೊಸದೆನು ಇರಲಿದೆ ಎಂಬುದು ಕೂಡ ಚರ್ಚೆಯಾಗುತ್ತಿದೆ. ರೈತರಿಗೆ, ಮಹಿಳೆಯರಿಗೆ […]

Continue Reading

ಡಿಕೆಶಿ ನಟ್ಟು ಬೋಲ್ಟು ವಿವಾದ: ಡಿಸಿಎಂ ಹೇಳಿಕೆ ಸರಿಯಲ್ಲ ಎಂದ ರಮ್ಯಾ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ ಅವರು ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಎಂದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಹಾಗೆ ಮಾತನಾಡಬಾರದಿತ್ತು ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಅವರು ಹಾಗೆ ಮಾತನಾಡಬಾರದಿತ್ತು. ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ ಹೇಳಿಕೆ ತಪ್ಪು. ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. […]

Continue Reading

ನಟಿ ರನ್ಯಾರಾವ ಮನೆಯಲ್ಲಿ ಅತಿ ದೊಡ್ಡ ಕಾರ್ಯಾಚರಣೆ

ಬೆಂಗಳೂರು: ನಟಿ ರನ್ಯಾರಾವ ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ದಾಳಿಯ ಸಂದರ್ಭದಲ್ಲಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 17.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ, ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಖೈದಿ ನಂ 2198 14.2 ಕೆಜಿ ಚಿನ್ನ ಕಳ್ಳಸಾಗಾಟದಲ್ಲಿ ಜೈಲು ಸೇರಿದ್ದ ನಟಿ ರನ್ಯಾರಾವಗೆ ಜೈಲಾಧಿಕಾರಿಗಳು […]

Continue Reading

ಕೈಗೆಟುವ ಬೆಲೆಯಲ್ಲಿ ಸಿಗುತ್ತಂತೆ ಜಿಯೋ EV ಸೈಕಲ್‌

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಜಿಯೋ, ಈಗ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಬಟ್ಟೆಯಿಂದ ಪೆಟ್ರೋಲ್ ವರೆಗೆ ಜಿಯೋ ಬ್ರ್ಯಾಂಡ್ ಇಲ್ಲದ ಕ್ಷೇತ್ರವೆ ಇಲ್ಲ. ಈಗ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಪ್ರವೇಶಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಲಯನ್ಸ್ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ, ಈ ವರ್ಷದ ಅಂತ್ಯದವರೆಗೆ ಜಿಯೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಇ-ಬೈಕ್ ದೈನಂದಿನ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿದೆ […]

Continue Reading

ರಾಜ​ಕುಮಾರ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ

ವರನಟ ಡಾ.ರಾಜಕುಮಾರ ಕೇವಲ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಪರಭಾಷೆಯವರೂ ರಾಜ್​ಕುಮಾರ್ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಹಾಡಿನ ಬಗ್ಗೆ, ಅವರ ಕಂಠದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಆದರೆ ಈಗ ಸಂಜಯನಾಗ ಹೆಸರಿನ ಗಾಯಕ ರಾಜಕುಮಾರ ಬಗ್ಗೆ ಟೀಕೆ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ಎದುರಾದ ಟೀಕೆಗಳಿಂದ ಟ್ವಿಟರ್ ಖಾತೆಯನ್ನೆ ಅಳಿಸಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಬಲವಾಗಿದೆ. […]

Continue Reading

ಕ್ರಿಕೆಟ್ ಆಡುತ್ತಾ ಜಾರಿ ಬಿದ್ದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ

ಮಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದಾಗ ರನೌಟ್​ನಿಂದ ಬಚಾವಾಗಲು ಯತ್ನಿಸಿದ ವೇಳೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕುಮಾರ ರೈ ಜಾರಿಬಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಶಾಸಕರು ಜಾರಿಬಿದ್ದರು. ಬಂಟರ ಸಂಘದ ವತಿಯಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಶಾಸಕ ಅಶೋಕುಮಾರ ರೈ ಕ್ರಿಕೆಟ್ ಆಡಿದರು. ಬಿದ್ದ ಶಾಸಕರನ್ನು ಸಹ ಆಟಗಾರರು ಎಬ್ಬಿಸಿದರು.

Continue Reading

10 ವರ್ಷ ಜೈಲು, 5 ಲಕ್ಷ ದಂಡ: ಲೇವಾದೇವಿದಾರರ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ

ಬೆಂಗಳೂರು: ಲೇವಾದೇವಿದಾರರ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆಗೆ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಇನ್ನುಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೆ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ತರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ – 2025ಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮಾರ್ಚ್ 3 ರಿಂದ‌ ಆರಂಭವಾಗುವ ಅದಿವೇಶನದಲ್ಲಿ‌ ಈ ಬಾರಿ ತಿದ್ದುಪಡಿ ವಿಧೇಯಕ‌ ಮಂಡನೆಗೆ ತೀರ್ಮಾನಿಸಲಾಗಿದೆ. ಮಿತಿ […]

Continue Reading

ಇನ್ನುಮುಂದೆ 10 ನಿಮಿಷದಲ್ಲಿ ಮುಗಿಯುತ್ತೆ ಜಮೀನು ಸರ್ವೆ

ಬೆಂಗಳೂರು: ಜಮೀನು ಸರ್ವೆ ಮಾಡುವ ವಿಧಾನದಲ್ಲಿ ಕಂದಾಯ ಇಲಾಖೆಯು ಐತಿಹಾಸಿಕ ಬದಲಾವಣೆ ತಂದಿದೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಚೈನ್ ಹಿಡಿದು ಜಮೀನು ಅಳತೆ ಮಾಡುವ ಪದ್ಧತಿಗೆ ಗುಡ್‌ಬೈ ಹೇಳಿದೆ. ಚೈನ್‌ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್‌ ಭೂ ಮಾಪಕರಿಗೆ ವಿತರಿಸಿದೆ. ಸರ್ವೆ ಆಯುಕ್ತರ ಕಚೇರಿಯಲ್ಲಿ ಫೆ.20 ರಂದು ಗುರುವಾರ ನಡೆದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ಈ ಆಧುನಿಕ ತಂತ್ರಜ್ಞಾನವುಳ್ಳ ರೋವರ್ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದರು. ಸರ್ವೆ ಕೆಲಸವನ್ನು ಮೊದಲಿನಿಂದಲೂ ಚೈನ್ ಹಿಡಿದು ಭೂಮಿ […]

Continue Reading

ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ

ಬೆಂಗಳೂರು: ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ಆದರೆ ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿ ಮಾತ್ರೆ ಕೇಳಿದ ಘಟನೆ ನಡೆದಿದೆ. ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅತ್ತೆಯನ್ನು ಕೊಲ್ಲುವ ಪ್ಲ್ಯಾನ್‌ ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲಕುಮಾರ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು […]

Continue Reading