ರಾಜ್ಯದ ಜನತೆಗೆ ಕರೆಂಟ್‌ ಶಾಕ್‌: ಫಿಕ್ಸೆಡ್ ಚಾರ್ಜ್ ದರ 25 ರೂ ಏರಿಕೆ

ಬೆಂಗಳೂರು: ಕಳೆದ ವಾರ ಇಂಧನ ಇಲಾಖೆಯ ಸಿಬ್ಬಂದಿ ಪಿಂಚಣಿ ಗ್ರಾಚ್ಯುಟಿಯನ್ನು ಸರ್ಕಾರ ಪಾವತಿ ಮಾಡದೆ ಇರುವದಕ್ಕೆ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 36 ಪೈಸೆ ಕೆಇಆರ್‌ಸಿ ದರ ಏರಿಕೆ ಬರೆ ಹಾಕಿತ್ತು. ಇದರ ಬೆನ್ನಲ್ಲೆ ಇಂದು ವಾರ್ಷಿಕ ವಿದ್ಯುತ್ ದರ ಏರಿಕೆ ಆದೇಶ ಹೊರಡಿಸಿದೆ. ವಿದ್ಯುತ್ ಶುಲ್ಕ ಇಳಿಸಿ ನಿಗದಿತ ಶುಲ್ಕ ಏರಿಸಿ ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ. ‌ ಏನಿದೆ ಆದೇಶದಲ್ಲಿ ? ಇಳಿಕೆ ಏನು ? ಸೋಲಾರ್ ಅಳವಡಿಕೆಗೆ ಪ್ರೋತ್ಸಾಹಸೋಲಾರ್ ಅಳವಡಿಸಿಕೊಂಡ ಗೃಹಬಳಕೆಯ ಗ್ರಾಹಕರಿಗೆ 10 […]

Continue Reading

ಪನ್ನೀರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ

ಬೆಂಗಳೂರು: ಇತ್ತೀಚೆಗೆ ಆಹಾರ ಇಲಾಖೆ ಕಳಪೆ ಆಹಾರ ಪದಾರ್ಥಗಳ ವಿರುದ್ಧ ಸಮರ ಸಾರಿತ್ತು. ರಾಸಾಯನಿ ಬಳಕೆಗಳ ವಿರುದ್ಧ ಚಾಟಿ ಬೀಸಿತ್ತು. ಹೀಗಾಗಿ ಪನ್ನೀರ್ ಸೇರಿದಂತೆ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್​ಗೆ ಒಳಪಡಿಸಲಾಗಿತ್ತು. ಇದೀಗ ಅದರ ವರದಿ ಬಂದಿದೆ, ಪನ್ನೀರ್​ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವದು ದೃಢವಾಗಿದೆ. ಆ ಮೂಲಕ ಪನ್ನೀರ್​​​​​ ಪ್ರಿಯರಿಗೆ ಆಹಾರ ಇಲಾಖೆ ಶಾಕ್​ ನೀಡಿದೆ. ಉಳಿದ ಸ್ಯಾಂಪಲ್​​ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ. ಪನ್ನೀರ್​ನಲ್ಲಿ ಅಸುರಕ್ಷಿತ ಅಂಶ ಪತ್ತೆ ಕಲಬೆರಕೆ ಹಿನ್ನೆಲೆಯಲ್ಲಿ ಕಳೆದ […]

Continue Reading

ಕರೆಂಟ್‌ಗೂ ಟೋಲ್ ಮಾದರಿ ಶುಲ್ಕ: ಸ್ಮಾರ್ಟ್ ಮೀಟರ್ ಹೆಸರಲ್ಲಿ ಜನರಿಂದ ಲೂಟಿ

ಬೆಂಗಳೂರು: ಸ್ಮಾರ್ಟ್ ಮೀಟರ್ ವಿರುದ್ಧ ಬೆಂಗಳೂರಿನ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಕರೆಂಟ್ ಬಿಲ್ ಹೆಚ್ಚು ಬರುತ್ತಿದ್ದು, ಅದರ ಜೊತೆಗೆ ಮತ್ತೆ ಈಗ ಲೂಟಿ ಮಾಡುವ ಪ್ಲ್ಯಾನ್ ಎಂದು ಕಿಡಿಕಾರಿದ್ದಾರೆ. ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಇಂಧನ ಇಲಾಖೆ ಜಾರಿಗೊಳಿಸಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ 2024ರ ಮಾ.6 ರಂದು ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ […]

Continue Reading

ಅತ್ತಿಗೆಯನ್ನು ಮಂಚಕ್ಕೆ ಕರೆದ ಮೈದುನ: ಒಪ್ಪದಿದ್ದಕ್ಕೆ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ

ಧಾರವಾಡ: ಅತ್ತಿಗೆ ಎಂದರೆ ತಾಯಿ ಸಮಾನ ಅಂತಾರೆ. ಹೀಗಾಗಿ ಅತ್ತಿಗೆಗೆ ಯಾವಾಗಲೂ ತಾಯಿಯ ಸ್ಥಾನಮಾನ ನೀಡಲಾಗುತ್ತದೆ. ಅದಕ್ಕಾಗಿಯೆ ಅವರ ಬಗ್ಗೆ ಯಾವಾಗಲೂ ಗೌರವದ ಭಾವನೆ ಇರಬೇಕು. ಆದರೆ ಇಲ್ಲೊರ್ವ ವ್ಯಕ್ತಿ, ಅಣ್ಣನ ಹೆಂಡತಿ‌ ಮೇಲೆ ಕಣ್ಣು ಹಾಕಿ ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ. ಆದರೆ ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗದ ವರ್ತನೆ ತೋರಿದ್ದಾನೆ‌. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ […]

Continue Reading

ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

ಬೆಂಗಳೂರು: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ. ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ […]

Continue Reading

ರಾಜ್ಯದ ಈ ಜಿಲ್ಲೆಗಳಲ್ಲಿ ವರ್ಷಧಾರೆ: ಬೇಸಿಗೆಯಲ್ಲಿ ತಂಪೆರೆದ ವರುಣ

ಬೆಂಗಳೂರು: ಬೇಸಿಗೆಯಲ್ಲಿ ರಾಜ್ಯದ ವಿವಿಧೆಡೆ ವರ್ಷಧಾರೆಯಾಗಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸುಮಾರು 10 ನಿಮಿಷಗಳ ಕಾಲ ಮಳೆಯಾಗಿದೆ, ಜನರು ಹರ್ಷಗೊಂಡಿದ್ದಾರೆ. ಹೊಸಪೇಟೆಯಲ್ಲೂ ಮೇಘರಾಜ ತಂಪು ಸೂಸಿದ್ದಾನೆ. ವರ್ಷದ ಮೊದಲ ಮಳೆಯಲ್ಲಿ ಮಕ್ಕಳು ಖುಷಿಯಿಂದ ಆಟವಾಡಿದ್ದಾರೆ. ಹಾವೇರಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರವಾಗಿದೆ. ಬಾಲಕರ ಹಾಸ್ಟೆಲ್‌ಗೆ ನೀರು ನುಗ್ಗಿದೆ. ದಾವಣಗೆರೆ, ಬಾಗಲಕೋಟೆಯಲ್ಲೂ ಕೆಲವೆಡೆ ತುಂತುರು ಮಳೆಯಾಗಿದೆ. ದಾವಣಗೆರೆಯಲ್ಲಿ ವರ್ಷಧಾರೆಯಾಗಿದೆ, ತುಂತುರು ಮಳೆಯಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಜಿಲ್ಲೆಯ ಹೆಬ್ಬಾಳ, ಅನಗೋಡು ಸೇರಿದಂತೆ ಹಲವು ಕಡೆ […]

Continue Reading

ಹೊತ್ತಿ ಉರಿದ KKRTC ಬಸ್: ಪ್ರಯಾಣಿಕರು ಪಾರು

ಔರಾದ್: ತಾಲ್ಲೂಕಿಗೆ ಸಮೀಪದ ಕಪ್ಪೆಕೇರಿ ಬಳಿ ಬುಧವಾರಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಬೀದರ್ ಕಡೆಯಿಂದ ಬರುತ್ತಿದ್ದ ಔರಾದ್ ಘಟಕದ ಬಸ್‌ ಕಪ್ಪೆಕೇರಿ ಬಳಿ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ ಹೊಗೆ ಬೆಂಕಿಯಾಗಿ ಇಡೀ ಬಸ್ ಧಗ ಧಗನೇ ಹೊತ್ತಿ ಉರಿದಿದೆ. ತಕ್ಷಣ ಸ್ಥಳಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಬಸ್ಸಿನಲ್ಲಿದ್ದ 25 […]

Continue Reading

8ನೇ ಕ್ಲಾಸ್ ಓದಿದವನು ಲೋಕಾಯುಕ್ತ ಅಂತ ಹೇಳಿಕೊಂಡು ಮಹಿಳಾ ಆಧಿಕಾರಿಗೆ ಬ್ಲ್ಯಾಕ್‌ಮೇಲ್

ಚಿಕ್ಕಬಳ್ಳಾಪುರ: 8ನೇ ತರಗತಿ ಓದಿದ ಯುವಕನೊರ್ವ ನಾನು ಲೋಕಾಯುಕ್ತ ಅಧಿಕಾರಿ ಅಂತ ಹೇಳಿಕೊಂಡು ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಅದರ ಪರಿಣಾಮ ಈಗ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿಯಾಗಿದ್ದಾನೆ. ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್‌ಗೆ ಕರೆ ಮಾಡಿ ತಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ, ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಿರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ […]

Continue Reading

ಮದುವೆಗೆ ಹೆಣ್ಣು ಸಿಗದೆ ಖಿನ್ನತೆ: ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ಯುವಕ

ಚಾಮರಾಜನಗರ: ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಟಿಸಿ ಹುಂಡಿ ಬಳಿ ನಡೆದಿದೆ. ಮಸಣಶೆಟ್ಟಿ (27) ಸಾವನ್ನಪ್ಪಿದ ಯುವಕ. ಹೆಣ್ಣು ಸಿಗದೆ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಕಂಬ ಏರಿದ್ದ. ಕಂಬದಿಂದ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇಳಿಯುವ ವೇಳೆ ಆಯತಪ್ಪಿ ವಿದ್ಯುತ್ ವೈರ್ ತಗುಲಿ ಯುವಕ ಸಾವನ್ನಪ್ಪಿದ್ದಾನೆ. ಮದುವೆಗೆ ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯದ್ದು […]

Continue Reading

ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಹಿಂಪಡೆಯಲು ಒತ್ತಾಯ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ ಅರವಿಂದ್‌ ಒತ್ತಾಯಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ಮದುವೆಯ ಅರತಕ್ಷತೆಗೆ ಫೇಸ್‌ಬುಕ್‌ ಲೈವ್‌ ಮೂಲಕ ಸಾರ್ವಜನಿಕರನ್ನು ಆಹ್ವಾನಿಸುವ ಸಂದರ್ಭದಲ್ಲಿ ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌, ಅವುಗಳನ್ನು ನೀಡುವುದು ಬೇಡವೆಂದು ಮನವಿ ಮಾಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು […]

Continue Reading