ವೈದ್ಯಾಧಿಕಾರಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ, ಕೆಲವರಿಗಷ್ಟೇ ವಿನಾಯಿತಿ

ಬೆಂಗಳೂರು: ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸದ, 50 ವರ್ಷ ಮೀರದ ವೈದ್ಯಾಧಿಕಾರಿಗಳ ಮತ್ತು ಇತರ ಸಿಬ್ಬಂದಿಯನ್ನು ಗುರುತಿಸಿ ತಕ್ಷಣವೆ ಗ್ರಾಮೀಣ ಪ್ರದೇಶದ ಸೇವೆಗೆ ವರ್ಗಾವಣೆ ಮಾಡಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ವಿಶೇಷ ತಜ್ಞರು ಮತ್ತು ಹಿರಿಯ ವಿಶೇಷ ತಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಸುತ್ತಿದ್ದಲ್ಲಿ ಅವರ ಸೇವೆಯನ್ನು ಕೂಡಲೇ ಹಿಂಪಡೆದು ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಕನಿಷ್ಠ ಮೂರು ವರ್ಷ ಗ್ರೂಪ್‌ ‘ಎ’ ಹುದ್ದೆಯಲ್ಲಿ, ಕನಿಷ್ಠ […]

Continue Reading

ಸರಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿ ವೇತನ ಹೆಚ್ಚಳ: ಹಳೆ ವೈದ್ಯರ ಕಿವಿಗೆ ಹೂವು ಇಟ್ಟ ಸರ್ಕಾರ

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳ ವೇತನ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ಮೂಲಕ ಮಹತ್ವದ ಘೋಷಣೆ ಮಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನ ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಈಗಿರುವ ಸಿಬ್ಬಂದಿಗೆ ಇದೆ ವೇತನ ಮುಂದುವರೆಯಲಿದೆ. ಅವರು ಕೂಡ […]

Continue Reading

ಈ ಕುಟುಂಬದ 50 ಕ್ಕೂ ಹೆಚ್ಚು ಜನರಿಗೆ 24 ಬೆರಳುಗಳಿವೆ, ಮದುವೆಯಾಗುತ್ತಿಲ್ಲ… ಕೆಲಸ ಸಿಗುತ್ತಿಲ್ಲ…

ಬಿಹಾರ: ಗಯಾ ಜಿಲ್ಲೆಯ ತೀಯುಸಾ ಗ್ರಾಮದ ಚೌಧರಿ ಟೋಲಾ ಪ್ರದೇಶದಲ್ಲಿ ವಾಸಿಸುವ ಸುಖರಿ ಚೌಧರಿ ಅವರ ಕುಟುಂಬ ಈ ದುಸ್ಥಿತಿ ಎದುರಿಸುತ್ತಿದೆ. 24 ಬೆರಳುಗಳ ಸಮಸ್ಯೆ ಮೊದಲು ಸುಖರಿ ಚೌಧರಿಯಿಂದ ಪ್ರಾರಂಭವಾಯಿತು. ಅವರು 24 ಬೆರಳುಗಳೊಂದಿಗೆ ಜನಿಸಿದರು. ಅವರು ಕೆಲವು ವರ್ಷಗಳ ಹಿಂದೆ ನಿಧನರಾದರು. ಸುಖರಿ ಚೌಧರಿ ಅವರ ಕುಟುಂಬವು 24 ಬೆರಳುಗಳು ಹೊಂದಿದ್ದು, 7 ತಿಂಗಳ ಶಿಶುಗಳಿಂದ 60 ವರ್ಷದ ವಯಸ್ಕರವರೆಗೆ ಇದೆ. ಕಳೆದ ನಾಲ್ಕು ತಲೆಮಾರುಗಳಿಂದ ಈ ಕುಟುಂಬದ ಅನೇಕ ಜನರು 24 ಬೆರಳುಗಳೊಂದಿಗೆ […]

Continue Reading

ಇನ್ನುಮುಂದೆ ಚಿಕ್ಕ ಮಕ್ಕಳಿಗೂ PAN Card ಮಾಡಿಸಿ: ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ

ಸಾಮಾನ್ಯವಾಗಿ ಭಾರತದಲ್ಲಿ ಮಗು ಹುಟ್ಟಿದ ಕೂಡಲೆ ಮಗುವಿನ ಭವಿಷ್ಯದ ವಿಚಾರವಾಗಿ ಅದರ ದಾಖಲೆಗಳನ್ನು ಸಂಗ್ರಹಿಸಲು ಪಾಲಕರು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಧಾರ್​ ಸೇರಿದಂತೆ ಅದರಲ್ಲೂ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಅನೇಕ ಜನರು ಪ್ಯಾನ್ ಕಾರ್ಡ್ ವಯಸ್ಕರಿಗೆ ಮಾತ್ರ ಬೇಕಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ಅಲ್ಲ. ನಿಮ್ಮ ಮಗುವಿಗೆ ನೀವು ಪ್ಯಾನ್ ಕಾರ್ಡ್ ಮಾಡಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಪ್ಯಾನ್ ಕಾರ್ಡ್ […]

Continue Reading

ಮೇ.15 ರಿಂದ ಜೂನ್‌ 14ರವರೆಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ

ಬೆಂಗಳೂರು: ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮೇ.15 ರಿಂದ ಜೂನ್‌ 14ರವರೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) ಈ ಬಗ್ಗೆ ಸಚಿವ ಸಂಪುಟ ಸಭೆಯ ಅನುಮೋದನೆಗೆ ಪ್ರಸ್ತಾವ ಮಂಡಿಸಿದೆ. ಗ್ರೂಪ್‌ ಎ, ಬಿ, ಸಿ ಮತ್ತು ಡಿ ವರ್ಗದ ನೌಕರರನ್ನು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6 ರಷ್ಟನ್ನು ಮೀರದಂತೆ ವರ್ಗಾವಣೆ ಮಾಡಬಹುದು. ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಸಚಿವರಿಗೆ […]

Continue Reading

ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ

ಬೆಳಗಾವಿ: ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಶಿಯವರು ಬೇರೆ ಯಾರು ಅಲ್ಲ. ಅವರು ಕರ್ನಾಟಕದ ಬೆಳಗಾವಿಯ ಹೆಮ್ಮೆಯ ಸೊಸೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಾರತೀಯರ ಹತ್ಯಾಕಾಂಡದ ಪ್ರತೀಕಾರವಾಗಿ ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಹೆಸರಿನ ಏರ್‌ಸ್ಟ್ರೈಕ್‌ ಮಾಡಿತ್ತು. ಈ ಕಾರ್ಯಚರಣೆಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ. ಮೂಲತಃ ಗುಜರಾತ್ ರಾಜ್ಯದ […]

Continue Reading

ಶಾಲಾ ಮಕ್ಕಳಿಗೆ ನೀಡಿದ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ

ಪಾಟ್ನಾ: ಸರ್ಕಾರಿ ಶಾಲೆಯಲ್ಲಿ ನೀಡಲಾದ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆಯಾಗಿದೆ. ಬಿಹಾರದ ಪಾಟ್ನಾ ಜಿಲ್ಲೆಯ ಮೊಕಾಮಾ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಅಸ್ವಸ್ಥರಾದ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಆಲೂಗಡ್ಡೆ ಕರಿಯಲ್ಲಿ ಸತ್ತ ಹಾವು ಪತ್ತೆಯಾಗಿದೆ. ಈ ಘಟನೆ ಏಪ್ರಿಲ್ 26 ರಂದು ವರದಿಯಾಗಿದೆ. 500 ಮಕ್ಕಳಿಗೆ ಆಹಾರ ಒದಗಿಸಲಾಯಿತು. ಈ ಮಕ್ಕಳಲ್ಲಿ ಸುಮಾರು 100 ಮಕ್ಕಳು ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಮಕ್ಕಳ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಪೊಲೀಸರು ಆಗಮಿಸಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. […]

Continue Reading

SSLC ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು: ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ಅಥಿಕೃತ ಮಾಹಿತಿ ಹೊರ ಬಿದ್ದಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷ ಎಚ್.ಬಸವರಾಜೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ದಿ: 21 ಮಾರ್ಚ್ 2025 ರಿಂದ 04 ಎಪ್ರಿಲ್ 2025ರವರೆವಿಗೆ ನಡೆಸಲಾಯಿತು ಎಂದಿದ್ದಾರೆ. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು […]

Continue Reading

ಕರ್ನಾಟಕದಲ್ಲಿ ಇಂದಿನಿಂದ ಒಂದೆ ಗ್ರಾಮೀಣ ಬ್ಯಾಂಕ್‌

ಧಾರವಾಡ: ರಾಜ್ಯಕ್ಕೆ ಈಗ ಒಂದೆ ಗ್ರಾಮೀಣ ಬ್ಯಾಂಕ್‌ ಅಸ್ವಿತ್ವಕ್ಕೆ ಬಂದಿದೆ. ಧಾರವಾಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ (ಕೆವಿಜಿ ಬ್ಯಾಂಕ್‌) ಮತ್ತು ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌’ಗಳು ಪರಸ್ಪರ ವಿಲೀನಗೊಂಡಿದ್ದು, ಮೇ 1ರ ಗುರುವಾರದಿಂದ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಉದಯಿಸಲಿದೆ. ಒಂದು ರಾಜ್ಯ, ಒಂದು ಗ್ರಾಮೀಣ ಬ್ಯಾಂಕ್ ಎಂಬ ನೀತಿಯನ್ವಯ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಮೇರೆಗೆ ರಾಜ್ಯಕ್ಕೆ ಈಗ ಒಂದೆ ಗ್ರಾಮೀಣ ಬ್ಯಾಂಕ್‌ ಅಸ್ವಿತ್ವಕ್ಕೆ ಬಂದಿದೆ. ನೂತನ […]

Continue Reading

ಮುಂದಿನ 4 ದಿನ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಒಣಹವೆಯ ವಾತಾವರಣ ಇದೆ, ತಿಂಗಳಾಂತ್ಯಕ್ಕೆ ತಾತ್ಕಾಲಿಕವಾಗಿ ಕೊನೆಯಾಗಲಿದೆ. ಎಲ್ಲೆಡೆ ಮಬ್ಬು ವಾತಾವರಣ ಸೃಷ್ಟಿಯಾಗಲಿದೆ. ಸಾಧಾರಣದಿಂದ ಭಾರಿ ಮಳೆಯಾಗುವ ಲಕ್ಷಣಗಳು ಇವೆ. ಏಪ್ರಿಲ್ 28 ರಿಂದ ಮೇ 1ರವರೆಗೆ 4 ದಿನಗಳ ಕಾಲ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಏಪ್ರಿಲ್ 28ರವರೆಗೆ ಅಧಿಕ ತಾಪಮಾನದ ವಾತವರಣ ಮುಂದುವರೆಯಲಿದೆ. ಕೆಲವೆಡೆ ಲಘು ಮಳೆಯಾಗಬಹುದು. ನಂತರ 4 ದಿನಗಳ ಕಾಲ ಗುಡುಗು ಮಿಂಚು […]

Continue Reading