ಇಂದಿನಿಂದ ಭಾರಿ ಮಳೆ ಸಾಧ್ಯತೆ: 28 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರದಿಂದ ಭಾರಿ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, 28 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವೆಡೆ ಸೋಮವಾರ ಮತ್ತು ಮಂಗಳವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ಬುಧವಾರ ಈ ಜಿಲ್ಲೆಗಳಿಗೂ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಒಂದೆರಡು ಸ್ಥಳಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ […]

Continue Reading

ನಕಲಿ ಆನ್‌ಲೈನ್‌ ಕ್ಲೀನಿಂಗ್‌ ಸೇವೆಗೆ 9 ರೂ. ಪಾವತಿಸಿ 99 ಸಾವಿರ ರೂ. ಕಳೆದುಕೊಂಡ ಮಹಿಳೆ

ಮುಂಬೈ: ನಕಲಿ ಆನ್‌ಲೈನ್ ಕ್ಲೀನಿಂಗ್ ಸೇವೆಗೆ 9 ರೂ. ಪಾವತಿ ಮಾಡಿದ ನಂತರ ಮಹಿಳೆಯೊಬ್ಬರು ಬರೋಬ್ಬರಿ 99,000 ರೂ. ಕಳೆದುಕೊಂಡಿದ್ದಾರೆ. ಮುಂಬೈನ ಅಂಧೇರಿ ಪಶ್ಚಿಮದಿಂದ ಆಘಾತಕಾರಿ ಸೈಬರ್ ವಂಚನೆ ವರದಿಯಾಗಿದೆ. ಮಧುಮೇಹ ಶಿಕ್ಷಕಿಯಾಗಿರುವ ಮಹಿಳೆ ತನ್ನ ಕಚೇರಿಯನ್ನು ಸ್ವಚ್ಛಗೊಳಿಸಲು ಆನ್‌ಲೈನ್ ಸೇವೆಯನ್ನು ಹುಡುಕುತ್ತಿದ್ದಳು. ಇಂಟರ್ನೆಟ್‌ನಲ್ಲಿ ಹುಡುಕುತ್ತಿರುವಾಗ, ‘ಅರ್ಬನ್ ಕ್ಲಬ್’ ಎಂಬ ಶುಚಿಗೊಳಿಸುವ ಸೇವೆಯನ್ನು ಕಂಡುಕೊಂಡಳು. ನಂತರ ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ ನಾನು ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಮಹಿಳೆಗೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದ್ದಾನೆ. […]

Continue Reading

ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಮಗಳನ್ನೆ ಕೊಂದ ತಾಯಿ

ಹಾಸನ: ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೆ ತಾಯಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಸಾನ್ವಿ (6) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಗಳು. ಶ್ವೇತಾ (36) ಮಗಳನ್ನೇ ಕೊಂದ ಆರೋಪಿ. ಕಳೆದ 7 ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿದ್ದರು. ಆರಂಭದಿಂದಲೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ 4 ವರ್ಷಗಳಿಂದ ಸಾನ್ವಿಯನ್ನು ರಘು ಪೋಷಕರು ಸಾಕುತ್ತಿದ್ದರು. ಗಂಡನಿಂದ ದೂರವಾಗಿ ಶ್ವೇತಾ […]

Continue Reading

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ 1.5 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನರೇಂದ್ರಕುಮಾರ್ (51) ಬೆಂಗಳೂರಿನ ಕೆಐಎಡಿಬಿಯಲ್ಲಿ ಸರ್ವೇ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸ್ಕೆಚ್ ಸಿದ್ಧಪಡಿಸಲು ಮತ್ತು ಅದಕ್ಕೆ ಅನುಮೋದನೆ ನೀಡಲು ಆರೋಪಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರುದಾರ ರವಿ ಆರೋಪಿಸಿದ ನಂತರ ಲೋಕಾಯುಕ್ತ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆರೋಪಿ ಸರ್ಕಾರಿ […]

Continue Reading

ಬೆಂಗಳೂರು ಕಾಲ್ತುಳಿತ ಕೇಸ್‌: ವಿರಾಟ್‌ ಕೊಹ್ಲಿ ವಿರುದ್ಧ ದೂರು ದಾಖಲು

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ಕೊಹ್ಲಿ ವಿರುದ್ಧ ನೈಜ್ಯ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ, ಈ ನೂಕು ನುಗ್ಗಲಿಗೆ ಕೊಹ್ಲಿ ಸಹ ಕಾರಣ ಎಂದು ಆರೋಪಿಸಲಾಗಿದೆ. ಅಲ್ಲದೆ ದುರಂತ ನಡೆದ ಕುಟುಂಬವನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಅಲ್ಲು ಅರ್ಜುನ್ ಸಿನಿಮಾ ಸಂದರ್ಭದಲ್ಲಿ ದುರಂತಕ್ಕೆ ನಟ ಕಾರಣ […]

Continue Reading

RCB ಸಂಭ್ರಮಾಚರಣೆ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಜನ ಸಾವು

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಬೆಂಗಳೂರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆಯಲಿದೆ. ಈ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ 10 ಜನ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ.​ ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಆರಕ್ಕೂ ಹೆಚ್ಚು ಆರ್​ಸಿಬಿ ಅಭಿಮಾನಿಗಳ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನು ಶಿವಾಜಿನಗರದಲ್ಲಿರುವ ಬೌರಿಂಗ್ […]

Continue Reading

ಆರೋಪಿ ಮೊಬೈಲ್ ಬಳಸಿ ಆನ್‌ಲೈನ್ ಬೆಟ್ಟಿಂಗ್: ಪಿಎಸ್‌ಐ ಅಮಾನತು

ತುರುವೇಕೆರೆ: ಆರೋಪಿಯೊಬ್ಬನ ಮೊಬೈಲ್‌ನಿಂದ ಆನ್‌ಲೈನ್‌ ಬೆಟ್ಟಿಂಗ್‌ ಆಡಿದ ಆರೋಪದ ಮೇಲೆ ಪಟ್ಟಣದ ಪಿಎಸ್‌ಐ ಸಂಗಮೇಶ ಮೇಟಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ. ಪ್ರಕರಣವೊಂದರ ಆರೋಪಿಯೊಬ್ಬನನ್ನು ಜೈಲಿಗೆ ಬಿಡಬೇಕಾದ ಸಂದರ್ಭದಲ್ಲಿ ಆತನಿಂದ ಮೊಬೈಲ್‌ ಮತ್ತು ಫೊನ್ ಪೇ ಪಾಸ್‌ವರ್ಡ್‌ ಪಡೆದ ಸಂಗಮೇಶ್‌ ಮೇಟಿ ಆನ್‌ಲೈನ್‌ ಬೆಟ್ಟಿಂಗ್‌ ಆಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸಬ್‌ ಇನ್‌ಸ್ಪೆಕ್ಟರ್‌ ಸಂಗಮೇಶ ಮೇಟಿ ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ಆಡಲು ನನ್ನ ಮೊಬೈಲ್‌ ಬಳಸಿದ್ದಾರೆ. ನನ್ನ ಫೋನ್‌ ಪೇನಲ್ಲಿದ್ದ ಸುಮಾರು ₹95 ಸಾವಿರ ದುರುಪಯೋಗಪಡಿಸಿಕೊಳ್ಳಲಾಗಿದೆ’ […]

Continue Reading

ಕೊನೆಗೂ ಆರ್‌ಸಿಬಿಗೆ ಸಿಕ್ಕಿತು ಕಪ್‌: ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕೊಹ್ಲಿ

ಅಹಮದಾಬಾದ್: 18 ವರ್ಷಗಳ ವನವಾಸ ಕೊನೆಗೂ ಅಂತ್ಯಗೊಂಡಿದೆ, 18ರ ನಂಟಿಗೆ ಜಯ ಸಿಕ್ಕಿದೆ. ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಆನಂದಬಾಷ್ಪ ಉಕ್ಕಿ ಹರಿಯಿತು. ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್‌ ಕೊಹ್ಲಿ ಕಣ್ಣೀರು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ಅತ್ತುಬಿಟ್ಟರು. 18 ಆವೃತ್ತಿಗಳಲ್ಲಿ ಯಾವುದೆ ತಂಡಕ್ಕೆ ಹೋಗದೆ ಹಠ ಹಿಡಿದು ಆರ್‌ಸಿಬಿಯಲ್ಲೇ ಇದ್ದ ವಿರಾಟ್‌ ಕೊಹ್ಲಿ ಟ್ರೋಫಿ ಗೆಲ್ಲುವ ಆಸೆ ಕೊನೆಗೂ ಈಡೇರಿದೆ. ಕಪ್‌ ಗೆಲುವು ಖಚಿತವಾಗುತ್ತಿದ್ದಂತೆ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಆ ಒಂದು ಕ್ಷಣ ಅಭಿಮಾನಗಳು ತೃಪ್ತಿ […]

Continue Reading

ಒಂದೆ ಬಾರಿಗೆ 20 ಜನ ಎಸ್ಪಿಗಳಿಗೆ ಮುಂಬಡ್ತಿ, 20 ಡಿಐಜಿ ಕೇಡರ್ ಹುದ್ದೆ, 1 ಡಿಜಿಪಿ ಹುದ್ದೆ ಸೃಷ್ಟಿ

ಬೆಂಗಳೂರು: ರಾಜ್ಯ ಪೊಲೀಸ್ ವ್ಯವಸ್ಥೆಗೆ ಮೇಜರ್ ಸರ್ಜರಿ ನಡೆಸಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಹೊಸದಾಗಿ 20 ಉಪ ಮಹಾನಿರೀಕ್ಷಕ (ಡಿಐಜಿ) ಕೇಡರ್ ಹುದ್ದೆಗಳು ಹಾಗೂ ಒಂದು ಡಿಜಿಪಿ ಹುದ್ದೆ ಸೃಷ್ಟಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪೊಲೀಸ್‌ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈ ಮನವಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸಕಾರಾತ್ಮಕವಾಗಿ ಸ್ಪಂದಿಸಿದರೆ ಮೊದಲ ಬಾರಿಗೆ ಒಂದೆ ಹಂತದಲ್ಲಿ 20 ಎಸ್ಪಿಗಳಿಗೆ ಡಿಐಜಿ ಸ್ಥಾನಕ್ಕೆ ಮುಂಬಡ್ತಿ ಪಡೆಯುವ ಭಾಗ್ಯ ಸಿಗಲಿದೆ. ಅದೆ ರೀತಿ ಡಿಜಿ-ಐಜಿಪಿ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ […]

Continue Reading

ಹೈಕೋರ್ಟ್​ ಆದೇಶಕ್ಕೆ ಮಣಿದ ಸರ್ಕಾರ: ಐಪಿಎಸ್​ ಅಧಿಕಾರಿ ರೂಪಾಗೆ ಮುಂಬಡ್ತಿ

ಬೆಂಗಳೂರು: ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್​ ಮಹಿಳಾ ಅಧಿಕಾರಿ ಡಿ.ರೂಪಾ ಮೌದ್ಗಿಲ್​ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. 2000ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ರೂಪಾ ಅವರನ್ನು ಐಜಿಪಿಯಿಂದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕಿಯಾಗಿ (ಎಡಿಜಿಪಿ) ಸರ್ಕಾರವು ಮುಂಬಡ್ತಿ ನೀಡಿ, ಈಗ ಇರುವ ಹುದ್ದೆಯಲ್ಲೆ ಮುಂದುವರೆಸಿದೆ. ಮುಂಬಡ್ತಿ ಸಂಬಂಧ ಡಿ. ರೂಪಾ ಅವರು ಏಪ್ರಿಲ್ 25 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು […]

Continue Reading