ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ– 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

ಬೆಂಗಳೂರು/ಕಾರವಾರ: ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದೆ, ಸದ್ಯ ಆಕೆಯ ಪ್ರಿಯಕರ ತನ್ನ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದಾರೆ. ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಪ್ರಿಯಕರ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್ ಸ್ಪೇನ್ ವ್ಯಾಪಾರಿ, ಮ್ಯೂಜಿಸಿಯನ್ ಆಗಿದ್ದರು. ಮಕ್ಕಳನ್ನು ಪ್ರಿಯಾ ಮತ್ತು ಅಮಾ ಎಂದು ಗುರುತಿಸಲಾಗಿದೆ‌. ಸುದ್ದಿ ಮಾಧ್ಯಮದೊಂದಿಗೆ ಪ್ರಿಯಕರ ಮಾತನಾಡಿ, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರ ವರೆಗೂ ನಾವಿಬ್ಬರು ಲಿವಿಂಗ್ […]

Continue Reading

ನಟಿ ಸುಧಾರಾಣಿ ಅವರಿಗೆ ಗಂಡು ಮಗು ಜನನ, ಕುಟುಂಬಸ್ಥರ ಸಂಭ್ರಮ

ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಮಾತ್ರವಲ್ಲ, ಕನ್ನಡದ ಸೀರಿಯಲ್ ಲೋಕದಲ್ಲೂ ಕೂಡ ನಟಿ ಸುಧಾರಾಣಿ ಅವರು ಭಾರಿ ದೊಡ್ಡ ಹೆಸರು ಮಾಡಿ ಕರ್ನಾಟಕ ಜನತೆಯ ಗಮನ ಸೆಳೆದಿದ್ದಾರೆ. ಇದೆ ಕಾರಣಕ್ಕೆ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಕೈತುಂಬಾ ಸಿನಿಮಾ ಆಫರ್ಸ್ ಪಡೆದಿದ್ದಾರೆ. ಕನ್ನಡದ ಹೆಮ್ಮೆಯ ನಟಿ ಸುಧಾರಾಣಿ ಅವರು ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾ ಮಾಡಿ ಸ್ಕ್ರೀನ್ ಶೇರ್ ಮಾಡಿಕೊಂಡು ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 51 ವರ್ಷ ವಯಸ್ಸಿನ ನಟಿ […]

Continue Reading

ವಾರಕ್ಕೆ ಎರಡು ಮೊಬೈಲ್‌ ಖರೀದಿಸಿ ಜೈಲಲ್ಲಿ ಉಗ್ರರಿಗೆ ನೀಡುತ್ತಿದ್ದ ವೈದ್ಯ

ಬೆಂಗಳೂರು: ಜೈಲಿನಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಮನೋವೈದ್ಯ ಸೇರಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ. 6 ದಿನಗಳ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಆರೋಪಿಗಳಾದ ಮನೋವೈದ್ಯ ಡಾ.ನಾಗರಾಜ, ಎಎಸ್‌ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರ ಜುನೈದ್‌ ಅಹಮದ್‌ನ ತಾಯಿ ಅನೀಸ್‌ ಫಾತಿಮಾಳನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. […]

Continue Reading

ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 34 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ವಿಪರೀತ ಅಕ್ರಮಗಳ ಬಗ್ಗೆ ಸರಣಿ ವರದಿಗಳಾಗುತ್ತಿರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ನಡೆದಿದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ (ವರ್ಗ ಮಾಡಿರುವ ಹುದ್ದೆ)

Continue Reading

ಎಸ್.ಎಂ ಕೃಷ್ಣ ಅವರಿಗೆ ಮನಸೋತಿದ್ದರೆ ಅಭಿನಯ ಸರಸ್ವತಿ ? ಈ ಪ್ರೇಮ್ ಕಹಾನಿ ಬಗ್ಗೆ ಗೊತ್ತೆ ?

ಬೆಂಗಳೂರು: ಒಂದು ಕಾಲದಲ್ಲಿ ಚಿತ್ರೋದ್ಯಮದಲ್ಲಿ ಬೆಳೆಯುತ್ತಿದ್ದ ನಟಿ ಸರೋಜಾ ದೇವಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಡುವೆ ಪ್ರೀತಿ ಅರಳಿತ್ತು. ರಾಜಕೀಯ ರಂಗಕ್ಕೆ ಆಗಷ್ಟೇ ಎಸ್‌.ಎಂ ಕೃಷ್ಣ ಅವರು ಪಾದಾರ್ಪಣೆ ಮಾಡಿದ್ದರು. ತಮ್ಮ ಬುದ್ದಿವಂತಿಕೆ, ಶಾಂತ ಚಿತ್ತದ ಆಕರ್ಷಕ ವ್ಯಕ್ತಿತ್ವನ್ನು ಹೊಂದಿದ್ದ ಕೃಷ್ಣ ಅವರು ಕರ್ನಾಟಕದ ಜನತೆಯ ಮನಸ್ಸನ್ನು ಮಾತ್ರವಲ್ಲ ಸರೋಜಾ ದೇವಿಯವರ ಹೃದಯವನ್ನೂ ಗೆದ್ದಿದ್ದರು. ಇವರಿಬ್ಬರ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ […]

Continue Reading

ಸಿಗಂದೂರು ಸೇತುವೆ ವಿಶೇಷತೆಗಳೇನು ? ಕೇಬಲ್ ಬ್ರಿಡ್ಜ್​’ನ ಹಲವು ಪ್ರಯೋಜನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು ಸಂಪರ್ಕಿಸುವ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಯಾಗುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇತುವೆಯನ್ನು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಸುಮಾರು 2.1 ಕಿಲೋಮೀಟರ್​​ ಉದ್ದವಿರುವ ಈ ಸೇತುವೆ ದೇಶದ ಎರನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿದೆ. ಸಿಂಗದೂರು ಸೇತುವೆಯ ವಿಶೇಷತೆಗಳು ಮತ್ತು ಪ್ರಯೋಜನಗಳು

Continue Reading

ಇನ್ನುಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆಗೆ ಟಯರ್‌, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಾಗಿಸಬಹುದು, ಯಾವುದಕ್ಕೆ ಎಷ್ಟು ದರ ?

ಬೆಂಗಳೂರು: ಇನ್ನುಮುಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಾಣಿಗಳು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಹ ಸಾಗಿಸಬಹುದು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಈಗ ಆದಾಯ ಸಂಗ್ರಹಿಸಲು ನಾನಾ ದಾರಿ ಹುಡುಕುತ್ತಿರುವ ಕೆಎಸ್‌ಆರ್‌ಟಿಸಿ ಲಗೇಜ್‌ಗೆ ಹೊಸ ದರ ನಿಗದಿ ಮಾಡಿದೆ. ಗರಿಷ್ಠ 30 ಕೆಜಿ ಮೇಲೆ ಲಗೇಜ್‌ ಇದ್ದರೆ ಕಡ್ಡಾಯವಾಗಿ ಹಣವನ್ನು ಪಾವತಿ ಮಾಡಲೇಬೇಕಾಗುತ್ತದೆ. ನಾಯಿಯನ್ನ ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು. ಪ್ರಯಾಣಿಕರು 4 ಅಥವಾ […]

Continue Reading

6 ಶಾಲೆಯಲ್ಲಿ ಒಬ್ಬ,12 ಕಡೆ ಇಬ್ಬರು ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಸಂಖ್ಯೆ ಐದಕ್ಕಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಪಕ್ಕದ ಸರ್ಕಾರಿ ಶಾಲೆಗಳಿಗೆ ವಿಲೀನ ಮಾಡಬೇಕು ಎನ್ನುವ ವಿಚಾರ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸುಮಾರು 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಅಚ್ಚರಿ ಎಂದರೆ ಕೇವಲ ಒಬ್ಬ ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಹೊಂದಿರುವ 18 ಸರ್ಕಾರಿ ಪ್ರಾಥಮಿಕ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೆ ಈ ಶಾಲೆಗಳು ಕಾರ್ಯಾರಂಭವಾಗಿವೆ. ಜಿಲ್ಲೆಯ 6 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರು ಮತ್ತು 12 […]

Continue Reading

ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯೊಂದಿಗೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇಂಟರ್‌ನೆಟ್ ಇಲ್ಲದೆ, ಸೆಟ್‌ಲೈಟ್ ಸಂಪರ್ಕ ಇಲ್ಲದೆ, ವೈಫೈನೂ ಇಲ್ಲದೆ ಕಾರ್ಯನಿರ್ವಹಿಸಬಹುದಾದ ಹೊಸ ಮೆಸೆಂಜರ್ ಆಪ್ ಒಂದನ್ನು ಡೋರ್ಸಿ ಅವರು ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ. ಬಿಟ್ ಚಾಟ್ ಎಂಬ ಪಿ2ಪಿ ಮೆಸೆಂಜರ್‌ ಆಪ್‌ ಅನ್ನು ಜಾಕ್ ಡೊರ್ಸಿ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಆಯಪ್ ಆಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್‌ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ. […]

Continue Reading

ಭಾರತದಲ್ಲಿ ಲೈಸನ್ಸ್ ಅಗತ್ಯವಿಲ್ಲದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇದರ ಬೆಲೆ ಫೋನ್​ಗಿಂತ ಕಡಿಮೆ

ಬೆಂಗಳೂರು: ಒಡಿಸ್ಸೆ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ರೇಸರ್ ನಿಯೋವನ್ನು ಪರಿಚಯಿಸಿದೆ. ಇದನ್ನು ಕಡಿಮೆ ವೇಗದ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್​ನ ಆರಂಭಿಕ ಬೆಲೆ ರೂ.52,000. ಕಡಿಮೆ ಬೆಲೆಗೆ ಉತ್ತಮ ಸ್ಕೂಟರ್ ಬಯಸುವವರಿಗಾಗಿ ಈ ಸ್ಕೂಟರ್ ವಿನ್ಯಾಸಗೊಳಿಸಲಾಗಿದೆ. ರೇಸರ್ ನಿಯೋ, ರೇಸರ್ ಸ್ಕೂಟರ್‌ನ ಹೊಸ ಮತ್ತು ಸುಧಾರಿತ ಮಾದರಿಯಾಗಿದ್ದು, ಇದು ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಇದರ ಬ್ಯಾಟರಿ ಕೂಡ ಮೊದಲಿಗಿಂತ ಉತ್ತಮವಾಗಿದೆ. ಈ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. […]

Continue Reading