ಸುದ್ದಿ ಸಂಗ್ರಹ
ಅಭಿನಯ ಚಕ್ರವರ್ತಿ ನಟ ಸುದೀಪ್ ಅವರು ಮೂರು ವರ್ಷಗಳ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಮತ್ತು ಎಂ.ಎನ್ ಸುರೇಶ್ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ 7ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ನಟ ಸುದೀಪ್ ಅವರನ್ನ ನಿರ್ಮಾಪಕರ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸಿದರು.
ವಕೀಲರ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಲು ತಡವರಿಸಿದ್ರು ಅನ್ನೋದು ಗೊತ್ತಾಗಿದೆ. ನಿರ್ಮಾಪಕರು ಸುದೀಪ್ ವಿರುದ್ಧ, ʻಸಿನಿಮಾ ಕಾಲ್‌ಶೀಟ್ ನೀಡಲು 9 ಕೋಟಿ ರೂ ಪಡೆದಿದ್ದಾರೆʼ ಎಂದು ಆರೋಪಿಸಿದ್ದರು. ಈ ಆರೋಪಗಳ ವಿರುದ್ಧ ಸುದೀಪ್ 2023ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಸ್ತುತ ಪ್ರಕರಣವು ಎವಿಡೆನ್ಸ್ ಹಂತದಲ್ಲಿದ್ದು, ನಿನ್ನೆಯ ವಿಚಾರಣೆಯ ನಂತರ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2026ರ ಜೂನ್ 6ಕ್ಕೆ ಮುಂದೂಡಿದೆ.

