ಸುದ್ದಿ ಸಂಗ್ರಹ ಬೆಂಗಳೂರು
ಸಿಎಂ ಸಿದ್ದರಾಮಯ್ಯನವರು 2026–27ನೇ ಸಾಲಿನ ರಾಜ್ಯ ಬಜೆಟ್ ಇಂದು ಮಂಡಿಸಿದ್ದಾರೆ. ಈ ಮೂಲಕ ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಹೆಚ್ಚು ಸಮಯ ಬಜೆಟ್ ಭಾಷಣ ಮಂಡಿಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ದಾಖಲೆ ಬರೆದಿದ್ದಾರೆ.
ಹಲವು ನಿರೀಕ್ಷೆಗಳೊಂದಿಗೆ ಸಿದ್ದರಾಮಯ್ಯನವರು 4.48 ಲಕ್ಷ ಕೋಟಿ ಗಾತ್ರದ 17ನೇ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ತಮ್ಮ ಭಾಷಣವನ್ನು ಸುಮಾರು 3 ಗಂಟೆ 40 ನಿಮಿಷಗಳ ಕಾಲ ಮಂಡಿಸಿದರು. ಈ ಮೂಲಕ ಬಜೆಟ್ ಅಧಿವೇಶನದಲ್ಲಿ ಹೆಚ್ಚು ಸಮಯ ಭಾಷಣ ಮಾಡಿದವರಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ.
ಈ ಹಿಂದಿನ ಅವಧಿಯ 2025ರ ಬಜೆಟ್ ಅಧಿವೇಶನದಲ್ಲಿ ಸಿದ್ದರಾಮಯ್ಯನವರು 3 ಗಂಟೆ 15 ನಿಮಿಷ ಭಾಷಣ ಮಂಡಿಸಿದ್ದರು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ.
ಭಾಷಣದಲ್ಲಿ ಕುವೆಂಪು, ತೇಜಸ್ವಿ ಸೇರಿದಂತೆ ಹಲವು ಕವಿಗಳ ಪದ್ಯಗಳು ಮತ್ತು ವಚನಕಾರರ ತತ್ವಗಳು ಉಲ್ಲೇಖಿಸಿದರು. ವಿಧಾನಸಭೆಯ ಜಂಟಿ ಅಧಿವೇಶನ ಸೋಮವಾರಕ್ಕೆ ಮುಂದೂಡಲಾಗಿದೆ.

