Site icon ಸುದ್ದಿ ಸಂಗ್ರಹ

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಸುದ್ದಿ ಸಂಗ್ರಹ ಗದಗ
ಪುರಾತನ ದೇಗುಲಗಳ ಊರು ಎಂದೆ ಖ್ಯಾತವಾಗಿರುವ ಲಕ್ಕುಂಡಿಯಲ್ಲಿ ಬಂಗಾರದ ನಿಧಿ ದೊರೆತ ಬಳಿಕ, ಅದೆ ಗ್ರಾಮದ ಮನೆಯೊಳಗೆ ಹುದುಗಿ ಹೋಗಿದ್ದ ಮತ್ತು ಅಭಿವೃದ್ಧಿಯಾಗದೆ ಉಳಿದಿದ್ದ 5 ದೇವಾಲಯಗಳು ಪತ್ತೆಯಾಗಿವೆ. 5 ದೇವಾಲಯಗಳಿಗೆ, 5 ಬಾವಿಗಳಿಗೆ ಸಚಿವ ಎಚ್.ಕೆ ಪಾಟೀಲ್ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ.

10 ಅಡಿ ಆಳದಲ್ಲಿ ಮುಚ್ಚಿಹೋಗಿದ್ದ ಚೌಕಿಮಠದ ಅರ್ಧಲಿಂಗೇಶ್ವರ ದೇವಾಲಯ, ವಿದ್ಯಾಶಂಕರಲಿಂಗ ದೇವಾಲಯ, ಸೋಮಲಿಂಗೇಶ್ವರ ದೇವಾಲಯಗಳು ಹುದುಗಿ ಹೋಗಿವೆ.

ಸಮರ್ಪಕ ಪರಿಹಾರ ಕೊಟ್ಟರೆ ಮನೆ ಬಿಡುವುದಾಗಿಯೂ ಕುಟುಂಬಸ್ಥರು ಹೇಳಿದ್ದಾರೆ. ಕಲಾಕೃತಿಯಿರುವ ಕಂಬಗಳು, ಹಳೆ ಕಾಲದ ಬಾವಿ ಇವೆಲ್ಲದಕ್ಕೂ ಜೀರ್ಣೋದ್ಧಾರದಿಂದ ಹೊಸ ರೂಪ ಸಿಗಲಿದೆ.

ಜೀರ್ಣೋದ್ಧಾರ ಆಗಲಿರುವ 5 ದೇವಾಲಯಗಳು
ವಿದ್ಯಾಶಂಕರಲಿಂಗ ದೇವಾಲಯ
ಸೋಮನಕಟ್ಟೆ ಸೋಮಲಿಂಗೇಶ್ವರ ದೇವಾಲಯ,
ಚೌಕಿಮಠದ ಈಶ್ವರ ದೇವಾಲಯ,
ಚೌಕಿಮಠದ ಅರ್ಧನಾರೀಶ್ವರ ದೇವಾಲಯ,
ಕಪ್ಪಚರಮಠ ಮತ್ತು ಬಾವಿ

ಐದು ಬಾವಿಗಳು
ಛಬ್ಬೇರ ಬಾವಿ
ಸಿದ್ಧರ ಬಾವಿ
ಫಕ್ಕೀರಸ್ವಾಮಿ ಮಠದ ಬಾವಿ
ಚೌಕಿಮಠದ ಬಾವಿ
ಸೋಮನಕಟ್ಟೆ ಸೋಮಲಿಂಗೇಶ್ವರ ಬಾವಿ

Exit mobile version