Site icon ಸುದ್ದಿ ಸಂಗ್ರಹ

ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ, ರನ್ನರ್‌ ರಕ್ಷಿತಾ, ಅಶ್ವಿನಿ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ?

ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಫಸ್ಟ್‌ ಟೈಮ್‌ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಹಾರೈಕೆ ನಿಜವಾಗಿದೆ.

ಈ ಹಂತದಲ್ಲಿ ಬಿಗ್‌ ಬಾಸ್‌ ವಿನ್ನರ್’ಗೆ ಏನೇನು ಸಿಗುತ್ತೆ ಎಂಬುದನ್ನು ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದಾರೆ.

ಗಿಲ್ಲಿಗೆ ಬಂಪರ್‌
ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಗೆದ್ದ ಗಿಲ್ಲಿ ನಟನಿಗೆ ಟ್ರೋಫಿ ಜೊತೆಗೆ ವಿಶೇಷ ಲಕ್ಷ ಲಕ್ಷ ಬಹುಮಾನ ಕೂಡ ಸಿಕ್ಕಿದೆ. ಪ್ರಾಯೋಜಕರಿಂದ 50 ಲಕ್ಷ ರೂ. ನಗದು ಬಹುಮಾನ, ಮಾರುತಿ ಸುಜುಕಿ ಪ್ರಾಯೋಜಕರಿಂದ ಒಂದು ಕಾರು ಸಿಕ್ಕಿದೆ. ಅಷ್ಟೆ ಅಲ್ಲದೆ ವಿಶೇಷವಾಗಿ ನಟ, ನಿರೂಪಕ ಕಿಚ್ಚ ಸುದೀಪ್‌ ವೈಯಕ್ತಿಕವಾಗಿ 10 ಲಕ್ಷ ರೂ ಬಹುಮಾನ ಕೂಡ ವೇದಿಕೆಯಲ್ಲೆ ಘೋಷಿಸಿದ್ದಾರೆ.

ರನ್ನರ್‌ ರಕ್ಷಿತಾಗೆ ಸಿಕ್ಕಿದ್ದೆನು ?
1st ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ ಪಟಾಕಿ ಹುಡುಗಿ ರಕ್ಷಿತಾ ಶೆಟ್ಟಿಗೆ ಇಬ್ಬರು ಪ್ರಾಯೋಜಕರಿಂದ ಕ್ರಮವಾಗಿ 20 ಲಕ್ಷ ಹಾಗೂ 5 ಲಕ್ಷ ರೂ. ನಗದು ಬಹುಮಾನ ಕೊಡಲಾಯಿತು.

ಅಶ್ವಿನಿಗೌಡಗೆ ಸಿಕ್ಕಿದ್ದೆನು ?
ಬಿಗ್‌ ಬಾಸ್‌ನಲ್ಲಿ 3ನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ ಮೂವರು ಪ್ರಾಯೋಜಕರಿಂದ 7 ಲಕ್ಷ, 2 ಲಕ್ಷ, 5 ಲಕ್ಷದಂತೆ ಒಟ್ಟು 12 ಲಕ್ಷ ರೂ. ನಗದು ಬಹುಮಾನ ಸಿಕ್ಕಿತು.

ಟ್ರೋಫಿ ವಿಶೇಷತೆ ಏನು ?
ಬಿಗ್‌ ಬಾಸ್‌ ಟ್ರೋಫಿಯನ್ನು ಬಹಳ ವಿಶಿಷ್ಟವಾಗಿ ಸಿದ್ದ ಮಾಡಲಾಗಿದೆ. ‘ಬಿಗ್‌ ಬಾಸ್‌’ ಮನೆಯಲ್ಲಿ ಕನ್ನಡದ ಕಂಪು ಹಾಗೂ ಕರ್ನಾಟಕದ ಶ್ರೀಮಂತ ಇತಿಹಾಸ ಇದೆ. ಹೀಗಾಗಿ ಸೇಮ್ ಟು ಸೇಮ್‌ ಅದನ್ನೆ ಟ್ರೋಫಿಯಲ್ಲೂ ಅಳವಡಿಸಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಆನೆ, ದರ್ಪಣ ಸುಂದರಿ, ಅರಮನೆ ಇರುವಂತೆ ಟ್ರೋಫಿಯಲ್ಲೂ ಅವನ್ನು ಕೆತ್ತಲಾಗಿದೆ. ಟಾಪ್‌ನಲ್ಲಿ ಬಿಗ್‌ ಬಾಸ್‌ನ ಕಣ್ಣು ಇಡಲಾಗಿದೆ. ಆ ಕಣ್ಣಿನ ಒಳಗಡೆ ಕನ್ನಡದ ಸಂಖ್ಯೆಗಳನ್ನು ಕ್ಲಾಕ್‌ ರೀತಿಯಲ್ಲಿ ಕೂರಿಸಲಾಗಿದೆ. ಇದೆ ಮೊದಲ ಬಾರಿಗೆ ಕನ್ನಡದ ಡಿಂಡಿಮ ಬಿಗ್‌ ಬಾಸ್‌ ಟ್ರೋಫಿ ಮೇಲೆ ಮೇಳೈಸಿದೆ.

Exit mobile version