Site icon ಸುದ್ದಿ ಸಂಗ್ರಹ

ಪ್ಯಾಕೆಟ್​ ಹಾಲಿನಿಂದಲೆ ತಿಂಗಳಿಗೆ 1 ಕೆಜಿ ಬೆಣ್ಣೆ ತೆಗೆಯಬಹುದು, ಆ ಸಿಂಪಲ್​ ಟ್ರಿಕ್​​​ ಇಲ್ಲಿದೆ

ಅಡುಗೆಯಲ್ಲಿ ಬೆಣ್ಣೆಯ ಬಳಕೆ ಸಾಮಾನ್ಯ. ಬೆಳಗ್ಗೆ ತಿಂಡಿ, ರೊಟ್ಟಿ ಅಥವಾ ಇತರ ಖಾದ್ಯಗಳಲ್ಲಿ ಬೆಣ್ಣೆ ಹಚ್ಚಿ ಸವಿಯುವುದು ಎಲ್ಲರಿಗೂ ಇಷ್ಟ. ಆದರೆ ಅಂಗಡಿಯಲ್ಲಿ ಖರೀದಿಸುವ ಬೆಣ್ಣೆ ಗಟ್ಟಿಯಾಗಿರುವುದರಿಂದ ನೈಜ ರುಚಿ ಸಿಗುವುದಿಲ್ಲ. ಫ್ರಿಡ್ಜ್‌ನಲ್ಲಿ ತಿಂಗಳುಗಳ ಕಾಲ ಇಟ್ಟು ಬಳಸುವುದು ಸಹ ರುಚಿ ಕಡಿಮೆ ಮಾಡುತ್ತದೆ.

ನಿತ್ಯ ಖರೀದಿಸುವ ಪ್ಯಾಕೆಟ್ ಹಾಲಿನಿಂದ ಮನೆಯಲ್ಲಿ ತಾಜಾ ಬೆಣ್ಣೆ ತಯಾರಿಸಬಹುದು, ಹೇಗೆ ಅಂತ ನೋಡಿ.
ಸಾಮಾನ್ಯವಾಗಿ ಹಳ್ಳಿಗಳ ಕಡೆ ಹಸು, ಎಮ್ಮೆ ಹಾಲಿನಿಂದ ಬೆಣ್ಣೆ ಮಾಡುವುದು ನೋಡಿರುತ್ತೆವೆ. ಆದರೆ ಪ್ಯಾಕೆಟ್​ ಹಾಲಿನಿಂದಲೂ ಬೆಣ್ಣೆ ಮಾಡಬಹುದು ಗೊತ್ತಾ ? ಪ್ಯಾಕೆಟ್​​ ಹಾಲಿನಿಂದ ಒಂದು ತಿಂಗಳಿಗೆ ಸುಮಾರು ಒಂದು ಕೆ.ಜಿ ಮಾಡಬಹುದಂತೆ. ಆ ಸಿಂಪಲ್​ ಟ್ರಿಕ್​ ಇಲ್ಲಿದೆ ನೋಡಿ.

ಪ್ಯಾಕೆಟ್​ ಹಾಲಿನಿಂದಲೆ ಸಿಗುತ್ತೆ ಕೆ.ಜಿ ಬೆಣ್ಣೆ
ನಂದಿನಿ ಅಥವಾ ಇತರ ಪ್ಯಾಕೆಟ್ ಹಾಲಿನಿಂದ ಕೆ.ಜಿ ಗಟ್ಟಲೆ ಬೆಣ್ಣೆ ಮಾಡಿ ಸವಿಯಬಹುದು. ಇದು ಸುಲಭ, ಆರೋಗ್ಯಕರ ಮತ್ತು ರುಚಿಕರ. ನಿಮಗೆ ಆರಾಮಗಿ ಮನೆಯಲ್ಲೆ ಬೆಣ್ಣೆ ಮಾಡಿ ಸವಿಯಬಹುದು. ಕಡಿಮೆ ಬಜೆಟ್​​ ಗೆ ನೀವು ದಿನನಿತ್ಯ ತರುವ ಹಾಲಿನಿಂದಲೇ ಬೆಣ್ಣೆ ಮಾಡಿ ತಿನ್ನಬಹುದು.

ಬೆಣ್ಣೆ ಮಾಡಲು ಬೇಕಾಗುವ ಹಾಲು ಯಾವುದು ?
ನೀಲಿ ಪ್ಯಾಕೆಟ್‌ನ ಸಾಮಾನ್ಯ ಹಾಲು ಬಳಸಬೇಡಿ, ಇದರಲ್ಲಿ ಕೆನೆ ಕಡಿಮೆ ಬರುತ್ತದೆ. ಬದಲಿಗೆ ಕೆಂಪು ಬಣ್ಣದ ಶುಭಂ ಅಥವಾ ಹೋಮೋಜಿನೈಸ್ಡ್ ಟೋನ್ಡ್ ಹಾಲು ಬಳಸಿ. ಅರ್ಧ ಲೀಟರ್ ಅಥವಾ ಹೆಚ್ಚಿನ ಪ್ರಮಾಣದ ಹಾಲು ತೆಗೆದುಕೊಳ್ಳಿ. ಒಂದು ತಿಂಗಳ ಕಾಲ ಕೆನೆ ಸಂಗ್ರಹಿಸಿ ಬೆಣ್ಣೆ ತಯಾರಿಸಬಹುದು.

ಕೆನೆ ಸಂಗ್ರಹಿಸುವ ವಿಧಾನ

ಬೆಣ್ಣೆ ಮಾಡುವ ವಿಧಾನವೆನು ?

ಹೀಗೆ ನಿಮ್ಮ ಮನೆಯಲ್ಲಿಯೇ ತಾಜಾ ಬೆಣ್ಣೆ ಸಿದ್ಧ. ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟು 1 ವಾರದೊಳಗೆ ತುಪ್ಪ ಮಾಡಿಕೊಳ್ಳಬಹುದು. ಮನೆಯಲ್ಲಿ ಮಾಡಿದ ಬೆಣ್ಣೆ ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮ. ಅಂಗಡಿ ಬೆಣ್ಣೆಗಿಂತ ತಾಜಾ ಮತ್ತು ನೈಸರ್ಗಿಕ. ಈ ವಿಧಾನ ಸುಲಭ ಮತ್ತು ಯಾರು ಬೇಕಾದರೂ ಮಾಡಬಹುದು. ಪ್ಯಾಕೆಟ್ ಹಾಲು ಬಳಸಿ ಬೆಣ್ಣೆ ತಯಾರಿಸಿ ಕುಟುಂಬಕ್ಕೆ ರುಚಿಕರ ಖಾದ್ಯ ನೀಡಬಹುದು.

Exit mobile version