Site icon ಸುದ್ದಿ ಸಂಗ್ರಹ

ಖಾಸಗಿ ಬಸ್‌ ದುರಂತ– ಏನಾಗಿದೆ ಅಂತ ಗೊತ್ತಾಗಲಿಲ್ಲ: ಶಾಕ್‌ನಲ್ಲೆ ವಿವರಿಸಿದ ಕ್ಲೀನರ್‌

ಸುದ್ದಿ ಸಂಗ್ರಹ ಚಿತ್ರದುರ್ಗ
ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಭೀಕರ ಬಸ್‌ ದುರಂತದಲ್ಲಿ 4 ಜನ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್‌ನ ಕ್ಲೀನರ್‌ ಸಾಧಿಕ್‌, ನಮಗೆ ಏನಾಯ್ತು ಅಂತಾನೆ ಗೊತ್ತಾಗಲಿಲ್ಲ ಎಂದು ಶಾಕ್‌ನಲ್ಲೆ ಮಾತಾಡಿದ್ದಾರೆ.

ರಾತ್ರಿ 1‌.30 ರಿಂದ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ನಾನು ರಾತ್ರಿ ಮಲಗಿದ್ದೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಿಂದ ಹೊರಗೆ ಬಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿದಿದೆ. ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನಾಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೆವು ಎಂದಿದ್ದಾರೆ.

ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದಾರೆ, ಬಿಂದು ಮತ್ತು ಒಂದು ವರ್ಷದ ಮಗು ರೀಯಾ ಇಬ್ಬರು ನಾಪತ್ತೆಯಾಗಿದ್ದಾರೆ, ಡ್ರೈವರ್ ಕೂಡ ಹೊರಗೆ ಬಿದ್ದಿದ್ದು, ಅವರ ಕೈ ಕಾಲಗಳಿಗೆ ಗಂಭೀರ ಗಾಯಗಳಾಗಿವೆ ಎಂದಿದ್ದಾರೆ.

ಗಾಯಾಳುಗಳನ್ನು ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Exit mobile version