Site icon ಸುದ್ದಿ ಸಂಗ್ರಹ

ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್​ನ್ಯೂಸ್: ಋತುಚಕ್ರದ ರಜೆಗೆ ಇಲಾಖೆ ಗ್ರೀನ್​ಸಿಗ್ನಲ್

ಸುದ್ದಿ ಸಂಗ್ರಹ ಬೆಂಗಳೂರು
ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಋತುಚಕ್ರದ ರಜೆ ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 1ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಸೇರಿ ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದಾಗಿದೆ. ಕೆಎಸ್ಆರ್​​ಟಿಸಿ, ಬಿಎಂಟಿಸಿ, ಎನ್​​​​ಡಬ್ಲೂಕೆಆರ್​​ಟಿಸಿ ಮತ್ತು ಕೆಕೆಆರ್​ಟಿಸಿ ಎಂಡಿ ಅಕ್ರಂ ಪಾಷ ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಆ ಮೂಲಕ 4 ನಿಗಮದ ಮಹಿಳಾ ನೌಕರರಿಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಗುಡ್ ನ್ಯೂಸ್​​ ಸಿಕ್ಕಿದೆ.

ಆದೇಶದಲ್ಲಿ ಏನಿದೆ ?
ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಮನೊಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ರಜೆ ಮಂಜೂರು ಮಾಡಲು ಆದೇಶಿಸಿದೆ.

ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ 01 ಜನವರಿ 2026ರಿಂದ ಜಾರಿಗೆ ಬರುತ್ತಿದ್ದು, ಪ್ರತಿ ತಿಂಗಳು ಒಂದು ದಿನ ಋತುಚಕ್ರ ರಜೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಷರತ್ತುಗಳು

Exit mobile version