Site icon ಸುದ್ದಿ ಸಂಗ್ರಹ

ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಹುಬ್ಬಳ್ಳಿ: ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದಂತಾಗಿದೆ.

ಬೆಂಗಳೂರಿನಿಂದ ಸಂಜೆ 6:45ಕ್ಕೆ ಬಿಟ್ಟು 7:45ಕ್ಕೆ ಹುಬ್ಬಳ್ಳಿಗೆ ಬಂದಿದ್ದ 6ಇ7162 ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್‌ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಆಕಾಶದಲ್ಲಿ 30 ನಿಮಿಷಗಳ ವಿಮಾನ ಸುತ್ತಾಟ ನಡೆಸಿದೆ.

ಪೈಲಟ್ ಚಾಣಾಕ್ಷತನದಿಂದ 70ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಂತಾಗಿದೆ. 30 ನಿಮಿಷಗಳ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಕರು ಕುಳಿತಿದ್ದರು. ಸುಮಾರು 8:15ಕ್ಕೆ ಲ್ಯಾಂಡ್ ವಿಮಾನ ಲ್ಯಾಂಡ್‌ ಆಗಿದೆ.

Exit mobile version